ಬೆಳಗಾವಿ:ಪದೇ ಪದೇ ಮಧ್ಯೆ ಪ್ರವೇಶ :ಪ್ರತಿಪಕ್ಷದ ಸದಸ್ಯರಿಂದ ಬಾವಿಗೆ ಇಳಿದು ಪ್ರತಿಭಟನೆ
ಪದೇ ಪದೇ ಮಧ್ಯೆ ಪ್ರವೇಶ :ಪ್ರತಿಪಕ್ಷದ ಸದಸ್ಯರಿಂದ ಬಾವಿಗೆ ಇಳಿದು ಪ್ರತಿಭಟನೆ
ಬೆಳಗಾವಿ ಡಿ 11 : ವಿಧಾನ ಪರಿಷತನಲ್ಲಿ ಬರದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂಧರ್ಭದಲ್ಲಿ ಪ್ರತಿಪಕ್ಷದ ಸದಸ್ಯ ಪ್ರತಾಪ ಸಿಂಹ ನಾಯಕ ಅವರು ಮಾತನಾಡುತ್ತಿರುವ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯ ವೆಂಕಟೇಶ್ ಅವರು ಮಧ್ಯೆ, ಮಧ್ಯೆ ಎದ್ದು ನಿಂತು ಅಡ್ಡಿ ಪಡೆಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಸದಸ್ಯರು ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ನೇತೃತ್ವದಲ್ಲಿ ಬಾವಿಗೆ ಇಳಿದು ಪ್ರತಿಭಟನೆ ಮಾಡಿದ ಘಟನೆ ನಡೆಯಿತು.
ನಂತರ ಸಭಾಪತಿ ಬಸವರಾಜ ಹೋರಟ್ಟಿ ಅವರು ಮಧ್ಯೆ ಪ್ರವೇಶಿಸಿ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಚರ್ಚೆ ನಡೆದಿದೆ ದಯವಿಟ್ಟು ಎಲ್ಲರೂ ಸೂಕ್ತ ಚರ್ಚೆಗೆ ಅವಕಾಶ ನೀಡಬೇಕು. ಮಧ್ಯೆ ಮಧ್ಯೆ ಎದ್ದು ನಿಂತು ಅಡ್ಡಿ ಪಡಿಸಬಾರದು ಎಂದು ಖಡಕ್ ಎಚ ಎಚ್ಚರಿಕೆ ನೀಡಿ , ಪ್ರತಿಪಕ್ಷದ ಸದಸ್ಯರಿಗೆ ಭರವಸೆ ನೀಡಿದ ಮೇಲೆ ಮತ್ತೆ ಪರಿಷತ್ತ ಕಲಾಪ ನಡೆಯಲು ಸದಸ್ಯರು ಅವಕಾಶ ಮಾಡಿಕೊಟ್ಟರು.