RNI NO. KARKAN/2006/27779|Tuesday, December 3, 2024
You are here: Home » breaking news » ಗೋಕಾಕ:ದಿ.15 ರಂದು ಗೋಕಾಕ ನಗರದಲ್ಲಿ ಭಗೀರಥ ಭಾರತ ಜನ ಕಲ್ಯಾಣ ರಥಯಾತ್ರೆ : ಜಕಬಾಳ ಮಾಹಿತಿ

ಗೋಕಾಕ:ದಿ.15 ರಂದು ಗೋಕಾಕ ನಗರದಲ್ಲಿ ಭಗೀರಥ ಭಾರತ ಜನ ಕಲ್ಯಾಣ ರಥಯಾತ್ರೆ : ಜಕಬಾಳ ಮಾಹಿತಿ 

ದಿ.15 ರಂದು ಗೋಕಾಕ ನಗರದಲ್ಲಿ ಭಗೀರಥ ಭಾರತ ಜನ ಕಲ್ಯಾಣ ರಥಯಾತ್ರೆ : ಜಕಬಾಳ ಮಾಹಿತಿ

ಗೋಕಾಕ ಡಿ 12 : ಹೊಸದುರ್ಗದ ಶ್ರೀ ಭಗೀರಥ ಪೀಠದ ಪೀಠಾಧಿಪತಿ ಡಾ.ಪುರುಷೋತ್ತಮಾನಂದ ಪುರಿ ಮಹಾ ಸ್ವಾಮೀಜಿಯವರ ನೇತ್ರತ್ವದಲ್ಲಿ ಉಪ್ಪಾರ ಸಮಾಜವನ್ನು ಒಗ್ಗೂಡಿಸಿ ಸಂಘಟಿಸಲು ಭಗೀರಥ ಭಾರತ ಜನ ಕಲ್ಯಾಣ ರಥಯಾತ್ರೆಯನ್ನು ರಾಷ್ಟ್ರದಾಧ್ಯಂತ ನಡೆಸಲಾಗುತ್ತಿದ್ದು ಇದೆ ದಿ.15 ರಂದು ಗೋಕಾಕ ನಗರದಲ್ಲಿ ಭಗೀರಥ ಭಾರತ ಜನ ಕಲ್ಯಾಣ ರಥಯಾತ್ರೆಯನ್ನು ಸ್ವಾಗತಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ತಾಲೂಕಾ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ ಹೇಳಿದರು.
ಅವರು, ಮಂಗಳವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ದೇಶದಲ್ಲಿ ಉಪ್ಪಾರ ಸಮುದಾಯವು 17ಕೋಟಿಗೂ ಅಧಿಕ ಸಂಖ್ಯೆಯಲ್ಲಿದ್ದು ಉಪ್ಪಾರ ಸಮಾಜ ಬಾಂಧವರನ್ನು ಜಾಗೃತಗೊಳಿಸಿ ಫೆ.9 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಮೀಸಲಾತಿ ಹಕ್ಕೋತ್ತಾಯ ಮಾಡಲು ಶ್ರೀಗಳ ನೇತ್ರತ್ವದಲ್ಲಿ ಈ ರಥಯಾತ್ರೆ ನಡೆಯುತ್ತಿದ್ದು, ಈಗಾಗಲೇ ಗುಜರಾತ, ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಥಯಾತ್ರೆ ಸಂಚರಿಸಿದೆ. ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಎಲ್ಲ ಭಗೀರಥ ಉಪ್ಪಾರ ಸಮಾಜ ಬಾಂಧವರು ಸೇರಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಉಪ್ಪಾರ ಸಮಾಜದ ಮೀಸಲಾತಿಗಾಗಿ ಆಗ್ರಹಿಸಿ ಇಡೀ ರಾಷ್ಟ್ರಧ್ಯಾಂತ್ಯಂತ ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಯೂ ಸಂಚರಿಸಿ, ಬರುವ ಶುಕ್ರವಾರ ದಿ.15 ರಂದು ಮುಂಜಾನೆ 10 ಗಂಟೆಗೆ ಗೋಕಾಕ ನಗರದ ಕೊಳವಿ ಹಣಮಂತ ದೇವಸ್ಥಾನದ ಹತ್ತಿರ ಆಗಮಿಸಲಿದ್ದು, ಈ ರಥಯಾತ್ರೆಯನ್ನು ಸ್ವಾಗತಿಸಿ ನಂತರ ಅಲ್ಲಿಂದ ಕುಂಭಮೇಳ, ಸಕಲ ವಾದ್ಯಮೇಳ ಹಾಗೂ ಜಾನಪದ ಕಲಾ ತಂಡಗಳಿಂದ ಭವ್ಯ ಶೋಭಾ ಯಾತ್ರೆಯ ಮೂಲಕ ಸಂಗೋಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಸಂಚರಿಸಿ ಇಲ್ಲಿಯ ಬ್ಯಾಳಿ ಕಾಟಾದ ಹತ್ತಿರವಿರುವ ಶ್ರೀ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಸಭೆ ಮತ್ತು ಮಹಾಪ್ರಸಾದ ಜರುಗಲಿದೆ.
ನಗರದಲ್ಲಿ ನಡೆಯಲಿರುವ ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಯಲ್ಲಿ ವಿವಿಧ ಸಮಾಜಗಳ ಸ್ವಾಮಿಜಿಗಳ ನೇತ್ರತ್ವದಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಹ ಭಾಗವಹಿಸಲಿದ್ದು ಎಲ್ಲ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಥಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕಾ ಭಗೀರಥ ಉಪ್ಪಾರ ಸಂಘದ ಪದಾಧಿಕಾರಿಗಳಾದ ಅಡಿವೆಪ್ಪ ಕಿತ್ತೂರ, ಕುಶಾಲ ಗುಡೇನ್ನವರ, ಯಲ್ಲಪ್ಪ ದುರದುಂಡಿ, ಉಪ್ಪಾರ ಸಮಾಜ ಮುಖಂಡರುಳಾದ ವಿಠ್ಠಲ ಸವದತ್ತಿ, ಮುತ್ತೆಪ್ಪ ಕುಳ್ಳೂರ, ಪರಸಪ್ಪ ಚುನನ್ನವರ, ನಿಂಗಪ್ಪ ಮಾಳ್ಯಾಗೋಳ, ಮಾಯಪ್ಪ ತಹಶೀಲದಾರ, ಯಲ್ಲಪ್ಪ ಹೆಜ್ಜೆಗಾರ, ಮಲ್ಲಿಕಾರ್ಜುನ ಚೌಕಾಶಿ, ಭಟ್ಟಿ, ದುಂಡಪ್ಪ ಹುಲಕುಂದ ಸೇರಿದಂತೆ ಇತರರು ಇದ್ದರು.

Related posts: