ಬೆಳಗಾವಿ:ಪರಿಷತ್ತಿನಲ್ಲಿ ಸಚಿವ ಜಮೀರ ಅಹ್ಮದ್ ಸ್ಪೀಕರ್ ಹೇಳಿಕೆ ವಿವಾದ ಸದನವನ್ನು ಎರೆಡು ಬಾರಿ ಮುಂದೂಡಿದ ಸಭಾಪತಿ ಹೊರಟ್ಟಿ

ಪರಿಷತ್ತಿನಲ್ಲಿ ಸಚಿವ ಜಮೀರ ಅಹ್ಮದ್ ಸ್ಪೀಕರ್ ಹೇಳಿಕೆ ವಿವಾದ ಸದನವನ್ನು ಎರೆಡು ಬಾರಿ ಮುಂದೂಡಿದ ಸಭಾಪತಿ ಹೊರಟ್ಟಿ
ಬೆಳಗಾವಿ ಡಿ 13 : ಬುಧವಾರದಂದು ವಿಧಾನಪರಿಷತ್ ನಲ್ಲಿ ಸದನ ಪ್ರಾರಂಭವಾಗುತ್ತಿದ್ದಂತೆ ಉತ್ತರ ಕರ್ನಾಟಕ ಹಾಗೂ ಬರದ ಬಗ್ಗೆ ಚರ್ಚೆ ನಡೆದು ಸಾರಿಗೆ, ಮುಜರಾಯಿ, ಲೋಕೋಪಯೋಗಿ, ಕಂದಾಯ, ವಸತಿ,ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ, ಪಶುಸಂಗೋಪನೆ, ರೇಷ್ಮೆ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗಳ ಬಗ್ಗೆ ವಿಸೃತವಾದ ಚರ್ಚೆ ನಡೆಯಬೇಕಿತ್ತು ಆದರೆ ಸದನ ಪ್ರಾರಂಭವಾಗುತ್ತಿದ್ದಂತೆ ಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರ ಅವರು ತೆಲಂಗಾಣ ವಿಧಾನಸಭಾ ಚುನಾವಣೆ ಸಂಧರ್ಭದಲ್ಲಿ ಸಚಿವ ಜಮೀರ ಅಹ್ಮದ್ ಖಾನ ಅವರು ಕರ್ನಾಟಕದಲ್ಲಿ ಮುಸ್ಲಿಂ ಸ್ಪೀಕರ್ ಮುಂದೆ ಬಿಜೆಪಿ ಅವರು ಕೈಮುಗಿದು ನಿಲ್ಲುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ ಎಂಬ ವಿಷಯ ಪ್ರಸ್ತಾಪಿಸಿ ಜಮೀರ ರಾಜಿನಾಮೆ ನೀಡಬೇಕು, ಸದನಕ್ಕೆ ಕ್ಷೇಮೆಯಾಚಿಸಬೇಕು ಎಂದು ಪಟ್ಟು ಹಿಡಿದ ಪರಿಣಾಮ ಸದನದಲ್ಲಿ ಕೆಲಕಾಲ ಕೋಲಾಹಲ ನಿರ್ಮಾಣವಾಗಿ ಪರಿಸ್ಥಿತಿ ಕೈಮೀರಿ ವಿಕೋಪಕ್ಕೆ ಹೋಗುವ ಸ್ಥಿತಿಗೆ ತಲುಪಿತ್ತು.ಇದನ್ನು ಅರಿತ ಸಭಾಪತಿ ಹೊರಟ್ಟಿ ಅವರು ಸದನವನ್ನು ಎರೆಡು ಬಾರಿ ಮುಂದೂಡಿದ ಪ್ರಸಂಗ ಬುಧವಾರದಂದು ವಿಧಾನಪರಿಷತ್ ಕಲಾಪದಲ್ಲಿ ನಡೆಯಿತು.