RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಟಿ.ಎ ನಾರಾಯಣಗೌಡರನ್ನು ಬಿಡುಗಡೆ ಗೊಳಿಸಿ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಗೋಕಾಕ:ಟಿ.ಎ ನಾರಾಯಣಗೌಡರನ್ನು ಬಿಡುಗಡೆ ಗೊಳಿಸಿ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ 

ಟಿ.ಎ ನಾರಾಯಣಗೌಡರನ್ನು ಬಿಡುಗಡೆ ಗೊಳಿಸಿ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಗೋಕಾಕ ಡಿ 30 : ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಮತ್ತು ಫೆಬ್ರವರಿ 28 ರ ಒಳಗೆ ನಗರದ ಎಲ್ಲಾ ಅಂಗಡಿ ಮುಗ್ಗಟು, ಹೋಟೆಲ್, ಮಾಲ ಮತ್ತು ಆಸ್ಪತ್ರೆಗಳ ಮೇಲೆ ಅಳವಡಿಸಿರುವ ನಾಮಫಲಕಗಳಲ್ಲಿ ಶೇಕಡಾ 60% ಪ್ರತಿಶತ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಆದೇಶಿಸುವಂತೆ ಆಗ್ರಹಿಸಿ ಶನಿವಾರದಂದು ನಗರದಲ್ಲಿ ಪ್ರತಿಭಟನೆ ಮಾಡಿ ನಗರಸಭೆ ಪೌರಾಯುಕ್ತ ಮತ್ತು ತಹಶೀಲ್ದಾರ ಮುಖಾಂತರ ಗೃಹ ಸಚಿವರಿಗೆ ಪ್ರತ್ಯೇಕ ಮನವಿಯನ್ನು

ಈ ಸಂಧರ್ಭದಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಡಿಸೆಂಬರ್ 28 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರು ಅಂಗಡಿ, ಮುಗ್ಗಟ್ಟು ಮತ್ತು ಮಾಲಾಗಳಲ್ಲಿ ಅಳವಡಿಸಿರುವ ನಾಮಫಲಕಗಳ ಮೇಲೆ ಶೇಕಡಾ 60% ಪ್ರತಿಶತ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಆಗ್ರಹಿಸಿ ಅಂಗಡಿಕಾರರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಹಮ್ಮಿಕೊಂಡಿದ್ದ ಮೆರವಣಿಗೆಯ ಸಂದರ್ಭದಲ್ಲಿ ಅವರನ್ನು ಸೇರಿದಂತೆ 53 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ. ಕನ್ನಡ ಕಡ್ಡಾಯವಾಗಿ ಬಳಸಿ ಎಂದು ಹೇಳುತ್ತಿರುವ ಸಂದರ್ಭದಲ್ಲಿ ಕೆಲ ಸಣ್ಣಪುಟ್ಟ ಘಟನೆಗಳು ನಡೆದಿರಬಹುದು ಅದನ್ನೇ ದೊಡ್ಡದಾಗಿ ಬಿಂಬಿಸಿ ಪೊಲೀಸರು ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿರುವುದು ತರವಲ್ಲ ಅವರನ್ನು ಕೂಡಲೇ ಬಿಡುಗಡೆ ಮಾಡಿ ಅವರ ಮೇಲೆ ದಾಖಲಿಸಿದ ಪ್ರಕರಣಗಳನ್ನು ವಾಪಸ ಪಡೆಯಬೇಕು ಮತ್ತು ರಾಜ್ಯ ಸರಕಾರ ಅಂಗಡಿ, ಮುಗ್ಗಟ್ಟು, ಹೋಟೆಲ್, ಮಾಲ ಮತ್ತು ಆಸ್ಪತ್ರೆಗಗಳಲ್ಲಿ ಮೇಲೆ ಅಳವಡಿಸಿರುವ ನಾಮಫಲಕಗಳಲ್ಲಿ ಶೇಕಡಾ 60% ಪ್ರತಿಶತ ಕನ್ನಡವನ್ನು ಬಳಸುವಂತೆ ಆಗ್ರಹಿಸಿ ಸುಗ್ರೀವಾಜ್ಞೆ ಹೊರಡಿಸಿ ಫೆಬ್ರವರಿ 28ರವರೆಗೆ ಗಡುವು ನೀಡಿದೆ ಅಷ್ಟರ ಒಳಗೆ ನಗರದ ಪ್ರತಿಯೊಂದು ಅಂಗಡಿ ಮುಗ್ಗಟ್ಟು ಹೋಟೆಲ್, ಮಾಲ ಮತ್ತು ಆಸ್ಪತ್ರೆ, ಬ್ಯಾಂಕಗಳ ಮೇಲೆ ಕನ್ನಡ ಭಾಷೆ ಅಳವಡಿಸುವಂತೆ ನಗರಸಭೆ ವತಿಯಿಂದ ನೋಟಿಸ್ ನೀಡಿಬೇಕು ಫೆಬ್ರವರಿ 28 ನಂತರ ಕನ್ನಡ ಅಳವಡಿಸದಿದ್ದರೆ ಅಂತಹ ಅಂಗಡಿಗಳ ನಾಮಫಲಕಗಳನ್ನು ಹರಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ, ಮಹಾದೇವ ಮಕ್ಕಳಗೇರಿ, ನಿಜಾಮ ನಧಾಫ್ ,ಮುಗುಟ ಪೈಲವಾನ, ಬಸವರಾಜ ಗಾಡಿವಡ್ಡರ,ಅಶೋಕ ಬಂಡಿವಡ್ಡರ, ರಾಮ ಕುಡ್ಡೆಮ್ಮಿ, ರಮೇಶ ಕಮತಿ, ಕುಮಾರ ಕಾತರಕಿ, ಕೆಂಪಣ್ಣ ಕಡಕೋಳ, ರಾಜು ಕೆಂಚನಗುಡ್ಡ, ಬಾಹುಬಲಿ ಖಾರೇಪಠಾಣ, ದುರ್ಗಪ್ಪ ಬಂಡಿವಡ್ಡರ, ಮಾರುತಿ ಬಂಡಿವಡ್ಡರ, ಕೃಷ್ಣಾ ಬಂಡಿವಡ್ಡರ , ಸಂತೋಷ ಕೋಲಕಾರ, ಆನಂದ ಖಾನಪ್ಪನವರ, ಮಹಾದೇವ ಹುಚ್ಚನ್ನವರ, ನಿಂಗಪ್ಪ ಹಾರುಗೇರಿ, ಸಾಕೀಬ ಕೋತವಾಲ, ಮನೋಹರ್ ಬಾಲನ್ನವರ,ಮಹಾಂತೇಶ ಕುಳ್ಳೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: