ಗೋಕಾಕ:ಕನ್ನಡ ಭಾಷೆಗೆ ತನ್ನದೆ ಆದ ಇತಿಹಾಸ ಇದೆ : ಸರ್ವೋತ್ತಮ ಜಾರಕಿಹೊಳಿ ಅಭಿಮತ
ಕನ್ನಡ ಭಾಷೆಗೆ ತನ್ನದೆ ಆದ ಇತಿಹಾಸ ಇದೆ : ಸರ್ವೋತ್ತಮ ಜಾರಕಿಹೊಳಿ ಅಭಿಮತ
ಗೋಕಾಕ ಜ 4 : ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಧ್ಯೇಯ ವಾಕ್ಯದೊಂದಿಗೆ ಕಳೆದ 20 ವರ್ಷಗಳಿಂದ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿಕ ಹಾಗೂ ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡದ ಅರಿವು ಮೂಡಿಸುತ್ತಿರುವ ಶ್ರೀ ಮಠದ ಕಾರ್ಯ ಶ್ಲಾಘನೀಯ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ನಗರದಲ್ಲಿ ಕಪರಟ್ಟಿ-ಕಳ್ಳಿಗುದ್ದಿ ಪವಾಡ ಪುರುಷ ಶ್ರೀ ಮಹಾದೇವ ಅಜ್ಜನವರ 86ನೇ ಜಯಂತಿ ಮತ್ತು 20ನೇ ಕನ್ನಡ ಜಾತ್ರೆ ಸಮಾರಂಭದ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ತನ್ನದೆ ಆದ ಇತಿಹಾಸ ಇದೆ. ದೇಶದಲ್ಲಿ ಎಂಟು ಜ್ಞಾನ ಪೀಠ ಪ್ರಶಸ್ತಿ ಪಡೆದ ಏಕೈಕ ಭಾಷೆ ಕನ್ನಡ. ಅದನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಆ ದಿಸೆಯಲ್ಲಿ ನಾವೆಲ್ಲಾ ಕನ್ನಡಿಗರು ಒಂದಾಗಿ, ಒಗ್ಗಟ್ಟಾಗಿ ಭಾಷೆಯನ್ನು ಪ್ರೀತಿಸುವ ಮನೋಭಾವ ಹೊಂದಬೇಕು ಎಂದು ಹೇಳಿದರು.
ಕಾಯಕಯೋಗಿ ಪ್ರಶಸ್ತಿಯನ್ನು ಕಾಡಸಿದ್ದೇಶ್ವರ ಮಠ ಮರಡಿಮಠ- ಕೊಣ್ಣೂರಿನ ಶ್ರೀ ಪವಾಡೇಶ್ವರ ಮಹಾಸ್ವಾಮಿಗಳಿಗೆ ಮತ್ತು ಕನ್ನಡ ಜ್ಯೋತಿ ಪ್ರಶಸ್ತಿಯನ್ನು ಗುರುರಾಜ ಹೊಸಕೋಟೆ ಅವರಿಗೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಜಗದ್ಗುರು ಡಾ.ಚನ್ನಸಿದ್ಜರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಶ್ರೀಶೈಲ ಪೀಠ ಆರ್ಶೀರ್ವಚನ ನೀಡಿದರು.
ವೇದಿಕೆಯಲ್ಲಿ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಪೂಜ್ಯ ಮಾತಾ ಅಕ್ಕಮಹಾದೇವಿ ತಾಯಿ, ಬಸವರಾಜ ಸ್ವಾಮಿಗಳು, ಮುಖಂಡರುಗಳಾದ ಅಶೋಕ ಪೂಜಾರಿ, ಮಹಾಂತೇಶ ಮಠಪತಿ,ಮುತ್ತೆಪ್ಪ ತೇಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.