RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ಡಿಸಿಎಫ್‍ಒ ಶಿವಾನಂದ ಕಂಕಣವಾಡಿ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ.

ಗೋಕಾಕ:ಡಿಸಿಎಫ್‍ಒ ಶಿವಾನಂದ ಕಂಕಣವಾಡಿ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ. 

ಡಿಸಿಎಫ್‍ಒ ಶಿವಾನಂದ ಕಂಕಣವಾಡಿ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ

ಗೋಕಾಕ ಜ 10 : ಘಟಪ್ರಭಾ ವಿಭಾಗ ಡಿಸಿಎಫ್‍ಒ ಶಿವಾನಂದ ಕಂಕಣವಾಡಿ ಅವರ ಮೇಲೆ ಸೂಕ್ತಕ್ರಮಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ ಪದಾಧಿಕಾರಿಗಳು ಬುಧವಾರದಂದು ಮಧ್ಯಾಹ್ನ ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.
ನಂತರ ಮೆರವಣಿಗೆ ಮೂಲಕ ಆಗಮಿಸಿದ ನಗರÀದ ಘಟಪ್ರಭಾ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ದಲಿತ ಸಂಘಗಳ ಕಾರ್ಯಕರ್ತರು ಸುಮಾರು ಗಂಟೆಗಳಕಾಲ ಪ್ರತಿಭಟನೆ ನಡೆಸಿ, ಡಿಸಿಎಫ್‍ಒ ಶಿವಾನಂದ ಕಂಕಣವಾಡಿ ವಿರುದ್ಧ ಘೋಷಣೆಗಳನ್ನು ಕೂಗಿ ತಹಶೀಲದಾರ ಮುಖಾಂತರ ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಮನವಿ ಅರ್ಪಿಸಿದರು.
ರಾಯಭಾಗ ಶಾಸಕ ದುರ್ಯೋಧನ ಐಹೊಳೆಯವರೊಂದಿಗೆ ತಮ್ಮ ಇಲಾಖೆಯ ಕಟ್ಟಡ ಕಾಮಗಾರಿ ವಿಷಯವಾಗಿ ದೂರವಾಣಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಶಾಸಕರಿಗೆ ಏಕವಚನದಲ್ಲಿ ಮತ್ತು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಸಂವಿಧಾನ ಬದ್ಧವಾಗಿ ಆಯ್ಕೆಯಾದ ದಲಿತ ಶಾಸಕನ ಮೇಲೆ ಐಫ್‍ಎಸ್ ಅಧಿಕಾರಿ ಗುಂಡಾ ವರ್ತನೆ ತೋರಿದ್ದು ಸರಕಾರ ಈ ಕೂಡಲೇ ಅವರನ್ನು ಅಮಾನತ್ತು ಮಾಡಬೇಕು. ಶಾಸಕರೊಂದಿಗೆ ಅಸಭ್ಯÀವಾಗಿ ವರ್ತಿಸುವ ಅಧಿಕಾರಿಗಳು ಜನಸಾಮಾನ್ಯರ ಕಷ್ಟಗಳನ್ನು ಕೇಳುವದಿಲ್ಲ. ಇಂತಹ ಅಧಿಕಾರಿಗಳು ಸರಕಾರದ ಸೇವೆಗೆ ಅನರ್ಹರು ಇಂತವರ ವಿರುದ್ಧ ಸರಕಾರ ಸೂಕ್ತಕ್ರಮ ವಹಿಸುವಂತೆ ಆಗ್ರಹಿಸಿದರು. ಸರಕಾರ ಡಿಸಿಎಫ್‍ಒ ಶಿವಾನಂದ ಕಂಕಣವಾಡಿ ವಿರುದ್ಧ ಕೈಗೊಳ್ಳದಿದ್ದಲ್ಲಿ ರಾಜ್ಯಾಧ್ಯಂತ ದಲಿತ ಸಂಘಟನೆಗಳ ಒಕ್ಕೂಟ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರುಗಳಾದ ರಮೇಶ ಮಾದರ, ಬಸವರಾಜ ಆರೇನ್ನವರ, ಸತ್ತೆಪ್ಪ ಕರವಾಡೆ, ಲಕ್ಷ್ಮಣ ತೆಳಗಡೆ, ಧನ್ಯಕುಮಾರ ಮೇಗೇರಿ, ಗೋವಿಂದ ಕಳ್ಳಿಮನಿ, ಸುನೀಲ ಹಿರಗನ್ನವರ, ರಾಮಣ್ಣ ಈಟಿ, ಬಸವರಾಜ ಕಾಡಾಪೂರ, ಕಮಲಾ ಕರೆಮ್ಮನವರ, ಸುನಂದಾ ಹರಿಜನ, ವೀರಭದ್ರ ಮೈಲನ್ನವರ, ಸತೀಶ ಹರಿಜನ, ಶಂಕರ ತವಗ, ಮಲ್ಲಪ್ಪ ಅಮ್ಮನಗಿ ಸೇರಿದಂತೆ ನೂರಾರು ಜನ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related posts: