RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಶಿಕ್ಷಣ ಸಂಸ್ಥೆಗಳು ಸಂಸ್ಕಾರ ಕಲಿಸುವ ದೇಗುಲಗಳಾದಾಗ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ : ತಹಶೀಲ್ದಾರ ಡಾ‌.ಮೋಹನ್ ಭಸ್ಮೆ

ಗೋಕಾಕ:ಶಿಕ್ಷಣ ಸಂಸ್ಥೆಗಳು ಸಂಸ್ಕಾರ ಕಲಿಸುವ ದೇಗುಲಗಳಾದಾಗ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ : ತಹಶೀಲ್ದಾರ ಡಾ‌.ಮೋಹನ್ ಭಸ್ಮೆ 

ಶಿಕ್ಷಣ ಸಂಸ್ಥೆಗಳು ಸಂಸ್ಕಾರ ಕಲಿಸುವ ದೇಗುಲಗಳಾದಾಗ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ : ತಹಶೀಲ್ದಾರ ಡಾ‌.ಮೋಹನ್ ಭಸ್ಮೆ
ಗೋಕಾಕ ಜ 14 : ಶಿಕ್ಷಣ ಸಂಸ್ಥೆಗಳು ಸಂಸ್ಕಾರ ಕಲಿಸುವ ದೇಗುಲಗಳಾದಾಗ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ ಎಂದು ತಹಶೀಲ್ದಾರ ಡಾ‌.ಮೋಹನ ಭಸ್ಮೆ ಹೇಳಿದರು
ಶನಿವಾರದಂದು ನಗರದಲ್ಲಿ ಗೋಕಾಕ ಶಿಕ್ಷಣ ಸಂಸ್ಥೆಯ ಆದರ್ಶ ಕನ್ನಡ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಜಿ.ಇ.ಎಸ್.ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಅಂಕಗಳಿಕೆಯಷ್ಟೆ ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಲ್ಲ ಶಿಕ್ಷಣ ದೊಂದಿಗೆ ಸಂಸ್ಕಾರ ಬಹಳಮುಖ್ಯ. ಸಮಾಜ ಸ್ಥಾನಮಾನ ಬಯಸುವದಿಲ್ಲ ಒಳ್ಳೆಯತನವನ್ನು ಸಹ ಸಮಾಜ ಎದುರು ನೋಡುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು ಇದು ಮಕ್ಕಳ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಲು ಪಾಲಕರ ಪಾತ್ರಮುಖ್ಯವಾಗಿದೆ.

ವಿದ್ಯಾರ್ಥಿಗಳು ಓದನ್ನು ಗ್ರಹಿಸಿ ಕೊಂಡು ಓದಬೇಕು ಒತ್ತಡದಲ್ಲಿ ಓದುವದನ್ನು ಬಿಟ್ಟು ಸಮಾಧಾನದಿಂದ ಓದಿದರೆ ಒಳ್ಳೆಯ ಅಂಕಪಡೆಯಬಹುದು. ಕರುಣೆ, ಪರಾನುಭೂತಿ, ಸಹಾನುಭೂತಿ ಜೀವನದಲ್ಲಿ ಮುಖ್ಯವಾದದ್ದು ಶಿಕ್ಷಕರು, ಪಾಲಕರು ವಿದ್ಯಾರ್ಥಿಗಳು ಇದನ್ನು ತಮ್ಮ ಜೀವನದಲ್ಲಿ ಅಳವಡಸಿಕೊಂಡರೆ ಒಬ್ಬ ಒಳ್ಳೆಯ ಪಾಲಕ, ಶಿಕ್ಷಕ ಹಾಗೂ ವಿದ್ಯಾರ್ಥಿಯಾಗಲು ಸಾಧ್ಯ ಆ ನಿಟ್ಟಿನಲ್ಲಿ ಎಲ್ಲರೂ ತಮ್ಮನ್ನು ತಾವು ಸಮರ್ಪಿಸಿಕೊಂಡು ಕಾರ್ಯಮಾಡಿ ಒಳ್ಳೆಯ ಸಮಾಜ ನಿರ್ಮಿಸುವಂತಾಗಬೇಕು ಎಂದ ಅವರು ಗೋಕಾಕ ಶಿಕ್ಷಣ ಸಂಸ್ಥೆ ಸಂಸ್ಕಾರವಂತ ಶಿಕ್ಷಣ ಸಂಸ್ಥೆಯಾಗಿದ್ದು ಇಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಒಳ್ಳೆಯ ಸಾಧಕರಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್ ಕಡಕೋಳ ವಹಿಸಿದ್ದರು.
ವೇದಿಕೆಯಲ್ಲಿ ಕಾರ್ಯದರ್ಶಿ ಆರ್.ಎಂ ವಾಲಿ, ಶಶಿಲ ಮುನ್ನವಳ್ಳಿ, ಮುಖ್ಯೋಪಾಧ್ಯಾಯನಿ ಶ್ರೀಮತಿ ಎಸ್.ಎಸ್. ಇಜೇರಿ, ಪ್ರಧಾನ ಗುರುಮಾತೆ ಶ್ರೀಮತಿ ಎ.ಎಂ.ಶೆಟ್ಟೆನ್ನವರ, ಆದರ್ಶ ವಿದ್ಯಾರ್ಥಿಗಳಾದ ಕುಮಾರಿ ಸಹನಾ ಕುರಬರ, ಮುನಾಫ ನಿಂಗಾಪೂರ ಉಪಸ್ಥಿತರಿದ್ದರು.

Related posts: