RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ನಲ್ಲಿ 20ನೇ ಸತೀಶ ಶುರ್ಗಸ್ಸ್ ಆವಾರ್ಡ್ಸ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮ !

ಗೋಕಾಕ:ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ನಲ್ಲಿ 20ನೇ ಸತೀಶ ಶುರ್ಗಸ್ಸ್ ಆವಾರ್ಡ್ಸ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮ ! 

ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ನಲ್ಲಿ 20ನೇ ಸತೀಶ ಶುರ್ಗಸ್ಸ್ ಆವಾರ್ಡ್ಸ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮ !

ಇದು ಲಲಿತ ಮಹಲ್ , ಹಿಂದಿನ ಮೈಸೂರಿನ ಮಹಾರಾಜರು ತಮ್ಮ ಪ್ರಮುಖ ಅತಿಥಿಯಾದ ಭಾರತದ ವೈಸ್‌ರಾಯ್‌ಗೆ ಆತಿಥ್ಯ ವಹಿಸಲು ನಿರ್ಮಿಸಿದರು. ಲಲಿತ ಮಹಲ್ ಈಗ ಭಾರತದ ಅತ್ಯಂತ ಶ್ರೀಮಂತ ಹೋಟೆಲ್‌ಗಳಲ್ಲಿ ಒಂದಾಗಿದೆ, ಇದು ನಿಜವಾದ ಮಹಾರಾಜರ ಅರಮನೆಯಲ್ಲಿ ರಾಜಪ್ರಭುತ್ವದ ಅನುಭವವನ್ನು ನೀಡುತ್ತದೆ.ತಗ್ಗು ಬೆಟ್ಟದ ಮೇಲೆ, ಮೈಸೂರು ರಾಜಮನೆತನ ನಗರದ ಹೊರಗೆ, ಮಿನುಗುವ ಶ್ವೇತ ಅರಮನೆ – ಒಂದು ಭವ್ಯವಾದ ಇಟಾಲಿಯನ್ ಪ್ಲಾಜ್ಜೋ, ಡಬಲ್-ಕ್ವಾಲಂ ಮತ್ತು ಗುಮ್ಮಟ – ವಿಶಾಲವಾದ ತಾರಸಿ ಮತ್ತು ಭೂದೃಶ್ಯದ ಉದ್ಯಾನಗಳಲ್ಲಿ ಹೊಂದಿಸಲಾಗಿದೆ. ಅಂತಹ ಜಗತ್ತ ಪ್ರಸಿದ್ಧ ಅರಮನೆ , ಹೊಟೇಲ್ ನ್ನು ಹೋಲುವ ಥೇಟ್ ಲಲಿತ ಮಹಲ ಅರಮನೆ ನಗರದಲ್ಲಿ ಜನವರಿ 19 ರಿಂದ 21 ರವರೆಗೆ ಜರಗುವ ಸತೀಶ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮಕ್ಕೆ ಸಜ್ಜಾಗಿದೆ.

ಗೋಕಾಕ ನಗರದ ಮಹರ್ಷಿ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ್ ನವರ ಪ್ರತಿವರ್ಷ ನಡೆಸುವ ಸತೀಶ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮ ಈ ಬಾರಿ ಅತ್ಯಂತ ವೈಭವದಿಂದ ಜರುಗಲಿದ್ದು, ವೇದಿಕೆ ನಿರ್ಮಾಣ ಕಾರ್ಯಕ್ಕಾಗಿ ಸ್ಥಳೀಯ ಕಲಾವಿದ ಮಹಾಲಿಂಗ ಹೊಸಕೋಟಿ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಕಲಾವಿದರು ನಿರಂತರ 15 ದಿನಗಳ ಕಾಲ ಹಗಳಿರುಳು ಕಾರ್ಯ ಮಾಡಿ ಲಲಿತ್ ಮಹಲ ನಂತಹ ಭವ್ಯ ವೇದಿಕೆಯನ್ನು ನಿರ್ಮಿಸಿದ್ದಾರೆ.
ಮಹಾಲಿಂಗ ಹೊಸಕೋಟಿ ಅವರೊಂದಿಗೆ 3 ಜನ ಸಹ ಕಲಾವಿದರು, 8 ಫ್ಯಾಬ್ರಿಕೇಶನ್ ಕೆಲಸಗಾರರು , ಒಬ್ಬರು ಡಿಜೈನರ, 5 ಜನ ಪ್ಲ್ತಾಕ್ಸ್ ಪೇಸ್ಟಿಂಗ್ ಸೇರಿದಂತೆ 20 ಕ್ಕೂ ಹೆಚ್ಚು ಕಲಾವಿದರು ಸಂಘಟಕ ರಿಯಾಜ ಚೌಗಲಾ ಅವರ ಮಾರ್ಗದರ್ಶನದಲ್ಲಿ ಈ ಲಲಿತ್ ಮಹಲ್ ನಿರ್ಮಾಣ ಕಾರ್ಯದಲ್ಲಿ ತೊಡಗಿ ಮೈಸೂರಿನ ವೈಭವವನ್ನು ಗೋಕಾಕದಲ್ಲಿ ತೋರಿಸಿದ್ದಾರೆ.

ಕಳೆದ 20 ವರ್ಷಗಳಿಂದ ಕಲಾವಿದ ಮಹಾಲಿಂಗ ಹೊಸಕೋಟೆ ಅವರು ಸತೀಶ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮಕ್ಕೆ ಮೈಸೂರು ಅರಮನೆ, ಬೆಂಗಳೂರು ಅರಮನೆ, ಪ್ಯಾರಿಸ್ ಸಿಟಿ ಮತ್ತು ಅಪ್ಪೆಲ್ ಟಾವರ, ಮಹಿಷಮತಿ ಕೋಟೆ ಸೇರಿದಂತೆ ಅತ್ಯಾಕರ್ಷಕ ವೇದಿಕೆ ಹಾಗೂ ಹಲವಾರು ಅದ್ಭುತಗಳನ್ನು ವೇದಿಕೆಗಳನ್ನು ನಿರ್ಮಿಸಿ ಸತೀಶ್ ಶುಗರ್ಸ ಆವಾರ್ಡ್ಸನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

120 ಅಡಿ ಅಳಲ ಮತ್ತು 30 ಅಡಿ ಎತ್ತರದ ಈ ಲಲಿತ ಮಹಲ್ ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುತ್ತದೆ. ಅರಮನೆಯ 5 ಗೋಪುರಗಳು, ಎರೆಡು ಅಂತಸ್ತಿನ ಈ ಅರಮನೆ ಸಂಪೂರ್ಣ ಶ್ವೇತ ಬಣ್ಣದಿಂದ ಕೂಡಿದ್ದು ಈ ಅರಮನೆತಲ್ಲಿ ಸತತ ಮೂರುದಿನಗಳ ಕಾಲ ಗೋಕಾಕ ತಾಲೂಕಿನ ವಿದ್ಯಾರ್ಥಿಗಳು ಗಾಯನ , ನೃತ್ಯ, ಜಾನಪದ ನೃತ್ಯ, ಸೇರಿದಂತೆ ವಿವಿಧ ರೀತಿಯ ತಮ್ಮ ಪ್ರತಿಭೆಗಳನ್ನು ತೊರ್ಪಡಿಸಲಿದ್ದಾರೆ.
ಲಲಿತ ಮಹಲನ್ನು ನಿರ್ಮಿಸಿರುವ ಕಲಾವಿದರು ಕಟ್ಟಡವು ಅವಳಿ ಅಯಾನಿಕ್ ಕ್ವಾಲಂ ಭವ್ಯವಾದ, ಎರಡು ಅಂತಸ್ತಿನ ಸಂಯೋಜನೆಯಾಗಿದೆ, ನೆಲ ಮಹಡಿಯಲ್ಲಿ ಪ್ರಕ್ಷೇಪಿಸುವ ಮುಖಮಂಟಪ, ಲ್ಯಾಟರ್ನ್‌ಗಳನ್ನು ಹೊಂದಿರುವ ಗೋಳಾಕಾರದ ಗುಮ್ಮಟಗಳು ಮತ್ತು ಕೇಂದ್ರೀಯ ಗುಮ್ಮಟವು ಕೇಂದ್ರ ಪ್ರವೇಶ ದ್ವಾರವನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇದೇ ಜನೇವರಿ 19,20 ಮತ್ತು 21ರಂದು ನಡೆಯುವ ಸತೀಶ ಶುರ್ಗಸ್ಸ್ ಆರ್ವಾಡ್ಸ ಅಂತಿಮ ಹಂತದ ಸ್ವರ್ಧೆಗಳಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳು ಗಾಯನ , ಸಮೂಹ ನೃತ್ಯ, ಜಾನಪದ ನೃತ್ಯಗಳನ್ನು ಮಾಡಿ ತಮ್ಮ ಪ್ರತಿಭೆಯನ್ನು ತೊರಿಸಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸತತವಾಗಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಅಂತಿಮ ಹಂತದ ಸ್ವರ್ಧೆಗೆ ಸಜ್ಜಾಗಿದ್ದಾರೆ.

4 ವರ್ಷದ ನಂತರ ಮತ್ತೆ ನಗರದಲ್ಲಿ ಪ್ರತಿಭೆಗಳ ಕಲರವ : ಕೊವಿಡ ಕಾರಣಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಸತೀಶ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮ ಜನೇವರಿ 19 ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ತಾಲೂಕಿನಾದ್ಯಂತ ಸುಮಾರು 500ಕ್ಕೂ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ತೋರಿಸಲಿದ್ದಾರೆ. ಸತೀಶ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ಕಳೆದ ಎರಡು ತಿಂಗಳಿನಿಂದ ಗೋಕಾಕ ವಲಯದ ಎಲ್ಲಾ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ಮುಖಮಾಡಿ ಸತತ ಎರೆಡು ತಿಂಗಳಿನಿಂದ ಅಭ್ಯಾಸ ಮಾಡುತ್ತಿದ್ದಾರೆ. ತಾಲೂಕಿನ ಎಲ್ಲಾ ತರಬೇತಿದಾರರು ಆಕ್ಟಿವಾಗ ವಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಗಾಯನ , ನೃತ್ಯ , ಜಾನಪದ ನೃತ್ಯಗಳನ್ನು ಕಲಿಸುವವಲ್ಲಿ ಬ್ಯೂಸಿಯಾಗಿದ್ದಾರೆ.
ಒಟ್ಟಿನಲ್ಲಿ ಕಳೆದ 4 ವರ್ಷಗಳಿಂದ ಸ್ಥಡಿತಗೊಂಡಿದ್ದ ರಾಜ್ಯದಲ್ಲಿ ನಡೆಯುವ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಸತೀಶ ಶುಗರ್ಸ ಆವಾರ್ಡ್ಸ ಕಾರ್ಯಕ್ರಮ ಮತ್ತೆ ಪ್ರಾರಂಭವಾಗಿ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದರೆ ತಪ್ಪಾಗಲಾರದು. ಹೀಗೆ ಒಂದಲ್ಲಾ ಒಂದು ವಿನೂತನ ಕಾರ್ಯಗಳಿಂದ ರಾಜ್ಯದ ಗಮನ ಸೆಳೆಯುತ್ತಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಕಾಳಜಿ ಹೀಗೆಯೇ ಮುಂದೆವರೆದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಸರೆಯಾಗಿಲ್ಲಿ ಎಂದು ಹಾರೈಸೋಣ.

 

Related posts: