ಗೋಕಾಕ:ದೇಗುಲಗಳ ಸ್ವಚ್ಛತೆಗೆ ಚಾಲನೆ ನೀಡಿದ ಶಾಸಕ ರಮೇಶ್ ಜಾರಕಿಹೊಳಿ
ದೇಗುಲಗಳ ಸ್ವಚ್ಛತೆಗೆ ಚಾಲನೆ ನೀಡಿದ ಶಾಸಕ ರಮೇಶ್ ಜಾರಕಿಹೊಳಿ
ಗೋಕಾಕ ಜ 16 .: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪಣೆ ಐತಿಹಾಸಿಕ ಮಹತ್ವದ ಸಮಾರಂಭವಾಗಿದ್ದು ಅಂದು ಎಲ್ಲರೂ ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದಂತೆ ತಮ್ಮ ತಮ್ಮ ಮನೆಗಳಲ್ಲಿ ದೀಪಾವಳಿಯಂತೆ ರಾಮಜ್ಯೋತಿ ಬೆಳೆಗಿಸಿ ಶ್ರೀರಾಮಚಂದ್ರನನ್ನು ಸ್ವಾಗತಿಸುವಂತೆ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.
ಅವರು, ಮಂಗಳವಾರದಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಸ್ವಚ್ಛತೀರ್ಥ ಅಭಿಯಾನ ಹಿನ್ನಲೆಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಳಗಳಿಂದ ಹಮ್ಮಿಕೊಂಡ ನಗರದ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ ಆವರಣದಲ್ಲಿ ದೇಗುಲಗಳ ಸ್ವಚ್ಛತೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕಾರ್ಯಕರ್ತರು ಹಾಗೂ ತಾಲೂಕಿನ ಜನತೆ ನಮ್ಮ ಸುತ್ತಮುತ್ತಲಿನ ದೇವಸ್ಥಾನಗಳ ಸ್ವಚ್ಛತೆಯನ್ನು ಕೈಗೊಂಡು, 22ರಂದು ಪ್ರಧಾನಿ ಮೋದಿಯವರ ನೇತ್ರತ್ವದಲ್ಲಿ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಭಜನೆ, ಕೀರ್ತನೆಗಳನ್ನು ಆಯೋಜಿಸಿ ಶ್ರದ್ಧೆ ಭಕ್ತಿಯಿಂದ ನಾವೆಲ್ಲರೂ ಶ್ರೀರಾಮ ಸ್ವಾಗತಕ್ಕೆ ಸಾಕ್ಷಿಯಾಗೋಣ ಎಂದರು.
ದೇಶದಾಧ್ಯಂತ ಎಲ್ಲರೂ ಭಕ್ತಿಯಿಂದ ಅದ್ದೂರಿಯಾಗಿ ಆಚರಿಸುತ್ತಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನಾವೆಲ್ಲರೂ ಪಾಲ್ಗೊಂಡು ಶ್ರೀರಾಮನ ಅನುಗ್ರಹಕ್ಕೆ ಪಾತ್ರರಾಗೋಣ. 22ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ನಮ್ಮಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಅದರಲ್ಲಿ ಎಲ್ಲರೂ ಪಾಲ್ಗೊಳ್ಳಲು ಕೋರಿದರು.
ದೇಗುಲ ಸ್ವಚ್ಛತಾ ಕಾರ್ಯದಲ್ಲಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ಪ್ರಧಾನ ಕಾರ್ಯದರ್ಶಿ ಬಾಳೇಶ ಗಿಡ್ಡನವರ, ಮಾಜಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ಲಕ್ಷ್ಮೀಕಾಂತ ಎತ್ತಿನಮನಿ, ಬಿಜೆಪಿ ಪದಾಧಿಕಾರಿಗಳಾದ ಜ್ಯೋತಿ ಕೊಲ್ಹಾರ, ಬಸವರಾಜ ಹಿರೇಮಠ, ಸುರೇಶ ಪತ್ತಾರ, ರಾಜೇಶ್ವರಿ ಒಡೆಯರ, ಮಂಜುನಾಥ ಪ್ರಭುನಟ್ಟಿ, ವಿರೇಂದ್ರ ಎಕ್ಕೇರಿಮಠ, ಅನೀಲ ತುರಾಯಿದಾರ, ಲಕ್ಷ್ಮಣ ತಳ್ಳಿ, ಲಕ್ಕಪ್ಪ ತಹಶೀಲದಾರ, ರಂಗಪ್ಪ ನಾಯ್ಕ, ಮುಖಂಡರಾದ ಪ್ರಭಾಕರ ಚೌಹಾನ, ಅಶೋಕ ಹೆಗ್ಗನ್ನವರ, ವಿಕಾಸ ನಾಯಿಕ, ರಘು ಸುಭಂಜಿ, ನಗರಸಭೆ ಸದಸ್ಯರುಗಳಾದ ಬಸವರಾಜ ಆರೇನ್ನವರ, ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಶ್ರೀಶೈಲ ಪೂಜೇರಿ, ವಿಜಯ ಜತ್ತಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.