ಗೋಕಾಕ:ಜಾನಪದ ನೃತ್ಯ ಸ್ವರ್ಧೆಯಲ್ಲಿ ಗೋಕಾಕನ ಶಂಕರಲಿಂಗ ಫ್ರೌಡಶಾಲಾ ತಂಡ ಪ್ರಥಮ ಸ್ಥಾನ
ಜಾನಪದ ನೃತ್ಯ ಸ್ವರ್ಧೆಯಲ್ಲಿ ಗೋಕಾಕನ ಶಂಕರಲಿಂಗ ಫ್ರೌಡಶಾಲಾ ತಂಡ ಪ್ರಥಮ ಸ್ಥಾನ
ಗೋಕಾಕ ಜ 19 : ನಗರದ ಮಹರ್ಷಿ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 20 ನೇ ಸತೀಶ ಶುರ್ಗಸ್ಸ್ ಆವಾರ್ಡ್ಸ ಅಂತಿಮ ಹಂತದ ಮೊದಲನೆಯ ದಿನದ ಪೌಢಶಾಲಾ ವಿಭಾಗದ ಜಾನಪದ ನೃತ್ಯ ಸ್ವರ್ಧೆಯಲ್ಲಿ ಗೋಕಾಕನ ಶಂಕರಲಿಂಗ ಫ್ರೌಡಶಾಲಾ ತಂಡ ಪ್ರಥಮ , ನಾಗನೂರಿನ ಮುರಾರ್ಜಿ ವಸತಿ ಶಾಲೆ ದ್ವಿತೀಯ ಹಾಗೂ ಮಹಾಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದು ಪಡೆದಿದ್ದಾರೆ.
ಮುಕ್ತ ವಿಭಾಗದ ಸಮೂಹ ನೃತ್ಯ ಸ್ವರ್ಧೆಯಲ್ಲಿ ಬೆಳಗಾವಿ ವಡಗಾವಿಯ ವ್ಹಿ.ಬಿ.ಡ್ಯಾನ್ಸ್ ಅಕ್ಯಾಡಮಿ ತಂಡ ಪ್ರಥಮ, ಗೋಕಾಕನ ಸ್ಕಾಯ್ ಡ್ಯಾನ್ಸ್ ಗ್ರೂಪ್ ದ್ವಿತೀಯ, ರಾಯಬಾಗನ ವಿ.ಕೆ ಡ್ಯಾನ್ಸ್ ಅಕ್ಯಾಡಮಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಪ್ರಮಥ ಸ್ಥಾನ ಪಡೆದ ತಂಡಕ್ಕೆ 50 ಸಾವಿರ, ದ್ವಿತೀಯ 30 ಸಾವಿರ, ತೃತೀಯ 20 ಸಾವಿರ ರೂ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಪಿಯನ್ನು ನೀಡಿ ಗೌರವಿಸಲಾಯಿತು.
ಪ್ರಾಥಮಿಕ ಶಾಲಾ ವಿಭಾಗದ ಗಾಯನ ಸ್ವರ್ಧೆಯಲ್ಲಿ ಗೋಕಾಕನ ಶರ್ಫಡ್ ಮಿಶನ ಆಂಗ್ಲ ಮಾಧ್ಯಮ ಶಾಲೆಯ ರಾಘವೇಂದ್ರ ಖಾನಪ್ಪನವರ ಪ್ರಥಮ, ಕೆಎಲ್ಇ ಮುನ್ನವಳ್ಳಿ ಶಾಲೆಯ ಪ್ರಥಮ ಪರೀಟ್ ದ್ವಿತೀಯ, ಎಂ.ಎನ್ ಮಟ್ಟಿಕಲ್ಲಿ ಶಾಲೆಯ ರಾಜಶೇಖರ ಚಿಕ್ಕಡೊಳ್ಳಿ ತೃ ಸ್ಥಾನ ಪಡೆದಿದ್ದಾರೆ.
ಪ್ರೌಢಶಾಲಾ ವಿಭಾಗದ ಜಾನಪದ ಗಾಯನ ಸ್ವರ್ಧೆಯಲ್ಲಿ ಕಲ್ಲೋಳಿಯ ಎಸ್.ಆರ್.ಇ ಶಾಲೆಯ ಸುಪ್ರಿಯಾ ಮಠಪತಿ ಪ್ರಥಮ, ಗೋಕಾಕನ ಶಂಕರಲಿಂಗ ಪ್ರೌಢಶಾಲೆಯ ವಿದ್ಯೋಧನ ಗಂಟೆನ್ನವರ ದ್ವಿತೀಯ, ಪಟ್ಟಗುಂಡಿಯ ಶಾಂತಿ ಸಾಗರ ಪ್ರೌಢಶಾಲೆಯ ಬಾಳಗೌಡ ಪಾಟೀಲ ತೃತೀಯ ಸ್ಥಾನ ಪಡೆದಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಪ್ರಥಮ 10 ಸಾವಿರ, ದ್ವಿತೀಯ 7 ಸಾವಿರ, ತೃತೀಯ 5 ಸಾವಿರ ನಗದು ರೂ ಗೊಳೊಂದಿಗೆ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು.
ಪ್ರಾಥಮಿಕ ವಿಭಾಗದ ಭಾಷಣ ಸ್ವರ್ಧೆಯಲ್ಲಿ ಗೋಕಾಕನ ಕೆಬಿಎಸ್ ನಂ 1 ಶಾಲೆಯ ವಿನಾಯಕ ಇಟ್ಟನ್ನವರ ಪ್ರಥಮ, ಶಿವಾಪೂರ ಎಚ್.ಪಿ.ಎಸ್. ಶಾಲೆಯ ಸೃತಿ ದೇವರಮನಿ ದ್ವಿತೀಯ, ಮೆಳವಂಕಿಯ ಎಚ್.ಪಿ.ಎಸ್. ಸಿದ್ದಾರೂಢಮಠ ಶಾಲೆಯ ಲಕ್ಷ್ಮೀ ಮಠಪತಿ ತೃತೀಯ ಸ್ಥಾನ ಪಡೆದಿದ್ದಾರೆ.
ಕಾಲೇಜು ವಿಭಾಗ ಭಾಷಣ ಸ್ವರ್ಧೆಯಲ್ಲಿ ಗೋಕಾಕನ ಎಲ್.ಆರ್.ಜೆ ಕಾಲೇಜಿನ ಪವಿತ್ರಾ ಹತರವಾಡ ಪ್ರಥಮ, ಜೆ.ಎಸ್.ಎಸ್.ಕಾಲೇಜಿನ ತಸ್ಕೀನಜೀಯಾ ಅಖಾನಿ ದ್ವಿತೀಯ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮಂಜುನಾಥ್ ಕಡಕೋಳ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 10 ಸಾವಿರ, ದ್ವಿತೀಯ 7 ಸಾವಿರ ತೃತೀಯ 5 ಸಾವಿರ ನಗದು ರೂ ಹಾಗೂ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು.
ಪ್ರೌಢಶಾಲಾ ವಿಭಾಗದ ಭಾಷಣ ಸ್ವರ್ಧೆಯಲ್ಲಿ ನಾಗನೂರಿನ ಮಹಾಲಿಂಗೇಶ್ವರ ಶಾಲೆಯ ಪ್ರಿಯಾಂಕಾ ಅಡಿಬಟ್ಟಿ ಪ್ರಥಮ , ರಾಜಾಪೂರದ ಜ್ಞಾನ ಗಂಗೋತ್ರಿ ಶಾಲೆಯ ಐಶ್ವರ್ಯ ಕೊಡ್ಲಿ ದ್ವಿತೀಯ, ಶಿವಾಪೂರದ ಜಿ.ಎಚ್.ಶಾಲೆಯ ಸುಶ್ಮಿತಾ ಗಿರೆನ್ನವರ ಹಾಗೂ ಗೋಕಾಕನ ಶಂಕರಲಿಂಗ ಪ್ರೌಡಶಾಲೆಯ ಅನುಜಾ ಚಿಕ್ಕೋಡಿ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 15 ಸಾವಿರ, ದ್ವಿತೀಯ 13 ಸಾವಿರ, ತೃತೀಯ ತಲಾ 5 ಸಾವಿರ ನಗದು ಹಾಗೂ ಆಕರ್ಷಕ ಟ್ರೋಪಿ ನೀಡಿ ಗಣ್ಯರು ಗೌರವಿಸಿದರು.
ಈ ಸಂದರ್ಭದಲ್ಲಿ ಸತೀಶ ಶುರ್ಗಸ್ಸ್ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ ,ಯುವ ನಾಯಕರುಗಳಾದ ರಾಹುಲ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಆದಿತ್ಯ ಜಾರಕಿಹೊಳಿ, ಎ.ಬಿ.ಮಲ್ಲಬನ್ನವರ, ಎಸ್.ಕೆ.ಆಸಂಗಿ, ಸಿಪಿಐ ಗೋಪಾಲ ರಾಠೋಡ, ಪಿ.ಎಸ್.ಐಗಳಾದ ಕೆ.ವಾಲಿಕರ, ಕಿರಣ ಮೋಹಿತೆ, ಸಜೀವ ಸಂಸುದ್ದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.