ಗೋಕಾಕ:ಸತೀಶ ಶುರ್ಗಸ್ಸ್ ಆವಾರ್ಡ್ಸ ಸ್ವರ್ಧೆ ಮುಕ್ತ ವಿಭಾಗದ ಗಾಯನ ಸ್ವರ್ಧೆಯಲ್ಲಿ ಗೋಕಾಕನ ಶ್ರೀದೇವಿ ಗುದಗಗೋಳ ಪ್ರಥಮ
ಸತೀಶ ಶುರ್ಗಸ್ಸ್ ಆವಾರ್ಡ್ಸ ಸ್ವರ್ಧೆ ಮುಕ್ತ ವಿಭಾಗದ ಗಾಯನ ಸ್ವರ್ಧೆಯಲ್ಲಿ ಗೋಕಾಕನ ಶ್ರೀದೇವಿ ಗುದಗಗೋಳ ಪ್ರಥಮ
ಗೋಕಾಕ ಜ 21 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 20 ನೇ ಸತೀಶ ಶುರ್ಗಸ್ಸ್ ಆವಾರ್ಡ್ಸ ನ 2ನೇ ದಿನದ ಲ್ಲಿ ನಡೆದ ಮುಕ್ತ ವಿಭಾಗದ ಗಾಯನ ಸ್ವರ್ಧೆಯಲ್ಲಿ ಗೋಕಾಕನ ಶ್ರೀದೇವಿ ಗುದಗಗೋಳ ಪ್ರಥಮ, ಅಥಣಿಯ ಸುಷ್ಮಾ ನಂದಗಾವ ದ್ವಿತೀಯ, ಘೋಡಗೇರಿಯ ಸಂದೀಪ್ ಬಂಡಿವಡ್ಡರ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡೆದವರಿಗೆ 15 ಸಾವಿರ, ದ್ವಿತೀಯ 13 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ 10 ಸಾವಿರ ರೂ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಿ ಗಣ್ಯರು ಗೌರವಿಸಿದರು.
ಕಾಲೇಜು ವಿಭಾಗದ ಜಾನಪದ ಗಾಯನ ಸ್ವರ್ಧೆಯಲ್ಲಿ ಗೋಕಾಕನ ಎಲ್ ಆರ್ ಜೆ ಬಿ.ಹೆಡ್ ಕಾಲೇಜಿನ ಜ್ಯೋತಿ ಶೆಟ್ಟಿ ಪ್ರಥಮ, ಎಸ್.ಎಸ್.ಎ.ಪಿ.ಯು ಕಾಲೇಜಿನ ಕಿರಣ ವಗ್ಗನ್ನವರ, ದ್ವಿತೀಯ, ಕೆಎಲ್.ಇ ಸಿ.ಎಸ್.ಅಂಗಡಿ ಪಿಯು ಕಾಲೇಜಿನ ಭೂವನೇಶ್ವರಿ ಕರಿಗಾರ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 10 ಸಾವಿರ, ದ್ವಿತೀಯ ಸ್ಥಾನ 7 ಸಾವಿರ, ತೃತೀಯ ಸ್ಥಾನ 5 ಸಾವಿರ ರೂ ನಗದು ಹಾಗೂ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು.
ಪ್ರಾಥಮಿಕ ವಿಭಾಗದ ಜಾನಪದ ನೃತ್ಯ ಸ್ವರ್ಧೆಯಲ್ಲಿ ಬಳೋಬಾಳನ ಎನ್.ಎಸ್.ಎಫ್.ಶಾಲೆಯ ತಂಡ ಪ್ರಥಮ , ಸತ್ತಿಗೇರಿ ತೋಟದ ಧಾನೇಶ್ವರ ಶಾಲಾ ತಂಡ ದ್ವಿತೀಯ, ನಾಗನೂರಿನ ಮೂರಾರ್ಜಿ ವಸತಿ ಶಾಲಾ ತಂಡ ತೃತೀಯ ಸ್ಥಾನ ಪಡೆದಿದ್ದಾರೆ.
ಕಾಲೇಜು ವಿಭಾಗದ ಗೋಕಾಕನ ಎಲ್.ಆರ್.ಜೆ ಕಾಲೇಜಿನ ತಂಡ ಪ್ರಥಮ, ಸರಕಾರಿ ಪ್ರಥಮದರ್ಜೆ ಕಾಲೇಜು ತಂಡ ದ್ವಿತೀಯ, ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ ಕಾಲೇಜು ತಂಡ ತೃತೀಯ ಸ್ಥಾನ ಪಡೆದ್ದಿದಾರೆ.
ಪ್ರಥಮ ಸ್ಥಾನ ಪಡೆದ ತಂಡಕ್ಕೆ 50 ಸಾವಿರ, ದ್ವಿತೀಯ 30 ಸಾವಿರ, ತೃತೀಯ 20 ಸಾವಿರ ರೂ ನಗದು ಹಾಗೂ ಆಕರ್ಷಕ ಟ್ರೋಪಿಗಳನ್ನು ನೀಡಿ ಗಣ್ಯರು ಗೌರವಿಸಿದರು.
ಈ ಸಂದರ್ಭದಲ್ಲಿ ಸತೀಶ ಶುರ್ಗಸ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ, ಯುವ ನಾಯಕ ರಾಹುಲ್ ಜಾರಕಿಹೊಳಿ, ಕೆ.ಎಸ್.ನಾಯಕ, ತಹಶೀಲ್ದಾರ್ ಡಾ.ಮೋಹನ ಭಸ್ಮೆ, ಡಾ.ಜಗದೀಶ್ ಉಮರಾಣಿ, ಡಾ.ಬಸವರಾಜ ಘೋಡಗೇರಿ, ಡಾ.ಮೋಹನ ಕಮತ, ಮಾನವ ಬಂಧುತ್ವ ವೇದಿಕೆ ಹಾಸನ ಜಿಲ್ಲೆಯ ಜೆ.ಓ ಮಹಾಂತಪ್ಪ, ಕೆ.ಸಿ.ರಾಜಶೇಖರ, ಶಿವಪ್ಪ ನಾಯಕ ಬ್ರಹ್ಮದೇವರಹಳ್ಳಿ ಮುಖಂಡರುಗಳಾದ ರಂಗಸ್ವಾಮಿ, ಹೆಸ್ಕಾಂನ ಎಂ.ಎಸ್.ಬಾಗಡಿ, ಎಸ್.ಬಿ.ವರಾಳೆ, ಶ್ರೀಧರ್ ಯಲಿಗಾರ, ಡಿ.ಅಚ್ಚುತರೆಡ್ಡಿ,ಲಕ್ಷ್ಮಣ ಗೌಡ್ರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.