RNI NO. KARKAN/2006/27779|Saturday, December 21, 2024
You are here: Home » breaking news » ಗೋಕಾಕ:ಆವಾರ್ಡ್ಸ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ರಮವಾಗಿ ಬೆಳೆದು ನಿಂತಿದೆ : ಸಚಿವ ಸತೀಶ್ ಅಭಿಮತ

ಗೋಕಾಕ:ಆವಾರ್ಡ್ಸ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ರಮವಾಗಿ ಬೆಳೆದು ನಿಂತಿದೆ : ಸಚಿವ ಸತೀಶ್ ಅಭಿಮತ 

ಆವಾರ್ಡ್ಸ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ರಮವಾಗಿ ಬೆಳೆದು ನಿಂತಿದೆ : ಸಚಿವ ಸತೀಶ್ ಅಭಿಮತ
ಗೋಕಾಕ ಜ 21 : ಸತೀಶ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ರಮವಾಗಿ ಬೆಳೆದು ನಿಂತಿದೆ ಎಂದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬುಧವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆದ ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಹಮ್ಮಿಕೊಂಡ 20 ನೇ ಸತೀಶ ಶುರ್ಗಸ್ಸ್ ಆವಾರ್ಡ್ಸನ ಕಾರ್ಯಕ್ರಮದ ಕೊನೆಯ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಒತ್ತಾಸೆಯಿಂದ ಮತ್ತೆ ಈ ಭವ್ಯ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಗಿದ್ದು, ಇದು ಪ್ರತಿ ವರ್ಷ ನಿರಂತರವಾಗಿ ನಡೆಯುತ್ತದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು ಕ್ರೀಡಾಪಟುಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹೈಮಾಸ್ಕ ವಿದ್ಯುತ್ ದೀಪಗಳನ್ನು ಅಳುವಡಿಸಲಾಗಿದೆ. ಕ್ರೀಡಾಪಟುಗಳಿಗೆ ‌ಹೊನಲು ಬೆಳಕಿನಲ್ಲಿ ಆಟವಾಡಲು ಅನುಕೂಲ ವಾಗಲು ಇದು ಸಹಕಾರಿಯಾಗಲಿದೆ.

ಗೋಕಾಕ ನಗರದಲ್ಲಿ ಲೋಕೋಪಯೋಗಿ ಇಲಾಖೆಯಿಂದ 1.50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯವನ್ನು ಅತೀ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು, ನಗರದ ಬಸವೇಶ್ವರ ವೃತ್ತದಿಂದ ಯೋಗಿಕೊಳ್ಳ ರಸ್ತೆ , ಎ.ಪಿ.ಎಂ.ಸಿ ರಸ್ತೆ ಸೇರಿದಂತೆ ಅನೇಕ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಅಭಿವೃದ್ಧಿ ಮಾಡಲಾಗುವುದು. ವಕೀಲರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದಲ್ಲಿ ವಕೀಲರ ಭವನ ನಿರ್ಮಿಸಲಾಗುವುದಲ್ಲದೆ ಗೋಕಾಕ ತಾಲೂಕಿನ ಸರ್ವಾಂಗೀಣ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.
ಭವಿಷ್ಯತನಲ್ಲಿ ಅಭಿವೃದ್ಧಿ ವಿಚಾರವಾಗಿ ಬಹಳಷ್ಟು ಕನಸುಗಳು ಇವೆ ಅವುಗಳನ್ನು ಒಂದೊಂದಾಗಿ ಬಗೆಹರೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಮ.
ಸತೀಶ್ ಶುರ್ಗಸ್ಸ್ ಆವಾರ್ಡ್ಸ ಕಾರ್ಯಕ್ರಮದಿಂದ ಹಲವಾರು ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿ ಟಿ.ವಿ ಮಾಧ್ಯಮದಲ್ಲಿ ನಟನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮುಂದಿನ ದಿನಗಳಲ್ಲಿ ನಮ್ಮ ಅಭಿವೃದ್ಧಿಯ ರಥವನ್ನು ಎಳೆಯುವ ಕಾರ್ಯವನ್ನು ಮಗ ರಾಹುಲ್ ರಾಹುಲ್ ಹಾಗೂ ಪುತ್ರಿ ಪ್ರಿಯಾಂಕಾ ಮಾಡುತ್ತಿದ್ದಾರೆ ಇವರಿಗೆ ಶಕ್ತಿ ತುಂಬುವ ಕಾರ್ಯ ನಿವೇಲ್ಲರೂ ಮಾಡಬೇಕು ಎಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಮೂಹ ನೃತ್ಯ ಸ್ವರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಗಣ್ಯರು ಬಹುಮಾನವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ, ಸತೀಶ ಶುರ್ಗಸ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ, ಸನತ್ ಜಾರಕಿಹೊಳಿ, ಶಾಸಕರುಗಳಾದ ವಿಶ್ವಾಇ ವೈದ್ಯ, ಬಾಳಾಸಾಹೇಬ ಪಾಟೀಲ, ಕಾರ್ಯಕ್ರಮದ ಸಂಘಟಕ ರಿಯಾಜ ಚೌಗಲಾ, ಪ್ರಾಚಾರ್ಯ ಪ್ರಕಾಶ ಎಂ. ಲಕ್ಷಟ್ಟಿ ಉಪಸ್ಥಿತರಿದ್ದರು.

Related posts: