ಗೋಕಾಕ:ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಗೋಕಾಕ ಮತಕ್ಷೇತ್ರದ ಎಲ್ಲಾ ಮಂದಿರಗಳಲ್ಲಿ ವಿಶೇಷ ಪೂಜೆ ಆಯೋಜನೆ
ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಗೋಕಾಕ ಮತಕ್ಷೇತ್ರದ ಎಲ್ಲಾ ಮಂದಿರಗಳಲ್ಲಿ ವಿಶೇಷ ಪೂಜೆ ಆಯೋಜನೆ
ಗೋಕಾಕ ಜ 22 : ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ಗೋಕಾಕ ಮತಕ್ಷೇತ್ರದ ಎಲ್ಲ ಮಂದಿರಗಳಲ್ಲಿ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮಗಳಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಮುಂಜಾನೆ ನಗರದ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದ ಶಾಸಕರು ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ನಗರದ ಹಾಗೂ ಗ್ರಾಮಗಳ ಮಂದಿರಗಳಿಗೆ ಭೇಟಿ ನೀಡಿ ದರ್ಶನ ಪಡೆದು ಶತಕಗಳ ಹೋರಾಟ ಫಲ ಇಂದು ಕಾರ್ಯಗತವಾಗಿದ್ದಕ್ಕೆ ಅತ್ಯಂತ ಸಂತಸದೊಂದಿಗೆ ಕ್ಷೇತ್ರದ ಜನತೆ ಐತಿಹಾಸಿಕ ದಿನವಾಗಿ ಆಚರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ದೀಪೋತ್ಸವವನ್ನು ಸಂಜೆ ಇದೇ ರೀತಿ ಅತ್ಯಂತ ಯಶಸ್ವಿಯಾಗಿ ಆಚರಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗೋಣ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರುಗಳಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ಬಿಜೆಪಿ ರಾಷ್ಟ್ರೀಯ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಡಾ. ಜಿ ಆರ್ ಸೂರ್ಯವಂಶಿ, ಪ್ರಮೋದ ಜೋಶಿ, ವಿಎಚ್‍ಪಿ ಮುಖಂಡರಾದ ಆನಂದ ಪಾಟೀಲ, ಸಂಜು ಚಿಪ್ಪಲಕಟ್ಟಿ, ಜಯಾನಂದ ಹುಣಚ್ಯಾಳ, ಸುರೇಶ ಪತ್ತಾರ, ಪ್ರಕಾಶ ಮುರಾರಿ, ಶಿವಾನಂದ ಹತ್ತಿ, ಶ್ರೀಶೈಲ ಯಕ್ಕುಂಡಿ, ವಿಶ್ವನಾಥ ಬಿಳ್ಳೂರ, ಪರಶುರಾಮ ಭಗತ, ಅಡಿವೆಪ್ಪ ಕಿತ್ತೂರ, ಸಿದ್ದಪ್ಪ ಹುಚ್ಚರಾಮಗೋಳ, ವಿಜಯ ಜತ್ತಿ, ಶ್ರೀಶೈಲ ಪೂಜೇರಿ, ಲಕ್ಷ್ಮೀ ದೇಶನೂರ, ಸಂಜು ಜಡೆನ್ನವರ, ಅನೀಲ ತುರಾಯಿದಾರ, ಪ್ರವೀಣ ಗೊಸಬಾಳ, ಶಿವು ಹಿರೇಮಠ ಸೇರಿದಂತೆ ಅನೇಕರು ಇದ್ದರು.