ಗೋಕಾಕ: ಕೇಂದ್ರ ಸರಕಾರದ ಮಧ್ಯಂತರ ಬಜೆಟ್ ಪ್ರಗತಿಶೀಲ ಭಾರತದ ಬಜೆಟಾಗಿದೆ : ಶಾಸಕ ರಮೇಶ
ಕೇಂದ್ರ ಸರಕಾರದ ಮಧ್ಯಂತರ ಬಜೆಟ್ ಪ್ರಗತಿಶೀಲ ಭಾರತದ ಬಜೆಟಾಗಿದೆ : ಶಾಸಕ ರಮೇಶ
ಗೋಕಾಕ ಫೆ 1 : ಕೇಂದ್ರ ಸರಕಾರದ ಮಧ್ಯಂತರ ಬಜೆಟ್ ವಿಕಸಿತ ಪ್ರಗತಿಶೀಲ ಭಾರತದ ಬಜೆಟ್ ಇದಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಗುರುವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಮುಂದಿನ 5ವರ್ಷಗಳಲ್ಲಿ 2ಕೋಟಿ ಮನೆಗಳನ್ನು ಬಡವರಿಗೆ ಒದಗಿಸುವ ಗುರೀಯೇ ಮೋದಿ ಸರಕಾರದ ಗ್ಯಾರಂಟಿ. ಮಹಿಳೆಯರ ಆರ್ಥಿಕ ಅಭಿವ್ರದ್ಧಿಗೆ ಸಹಕಾರಿಯಾಗಿದೆ. ಬಜೇಟ ಶ್ರೀಸಾಮಾನ್ಯರ ಪರವಾಗಿದೆ. ಪ್ರಧಾನಿ ಮೋದಿಯವರು ಈ ವರೆಗೆ ನಡೆದು ಬಂದ ಹಾದಿ ಬಡತನ ನಿರ್ಮೂಲನೆ, ಸುಧಾರಣೆ, ಅಭಿವೃದ್ಧಿ ಹಾಗೂ ಆರ್ಥಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುತ್ತ ಬಂದಿದ್ದಾರೆ. ಕೃಷಿ, ಕೈಗಾರಿಕೆ, ಉದ್ಯೋಗ, ಪ್ರವಾಸೋದ್ಯಮ, ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವ ನೀಡುವ ಮೂಲಕ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಮಹತ್ವಾಕಾಂಕ್ಷೆಯ ಬಜೇಟ ಇದಾಗಿದೆ ಎಂದು ತಿಳಿಸಿದ್ದಾರೆ.