ಘಟಪ್ರಭಾ:ವಿದ್ಯಾರ್ಥಿ ಜೀವನ ಬಿಳಿ ಕಾಗದ ಇದ್ದಂತೆ ಅದರಲ್ಲಿ ಒಳ್ಳೆಯದನ್ನು ಬರೆದುಕೊಂಡು ತಮ್ಮ ಬದುಕನ್ನು ಹಸನಮಾಡಿಕೊಳ್ಳಿ : ಡಾ.ಮಲ್ಲಿಕಾರ್ಜುನ ಶ್ರೀ
ವಿದ್ಯಾರ್ಥಿ ಜೀವನ ಬಿಳಿ ಕಾಗದ ಇದ್ದಂತೆ ಅದರಲ್ಲಿ ಒಳ್ಳೆಯದನ್ನು ಬರೆದುಕೊಂಡು ತಮ್ಮ ಬದುಕನ್ನು ಹಸನಮಾಡಿಕೊಳ್ಳಿ : ಡಾ.ಮಲ್ಲಿಕಾರ್ಜುನ ಶ್ರೀ
ಘಟಪ್ರಭಾ ಫೆ 5 : ವಿದ್ಯಾರ್ಥಿ ಜೀವನ ಬಿಳಿ ಕಾಗದ ಇದ್ದಂತೆ ಅದರಲ್ಲಿ ಒಳ್ಳೆಯದನ್ನು ಬರೆದುಕೊಂಡು ತಮ್ಮ ಬದುಕನ್ನು ಹಸನಮಾಡಿಕೊಳ್ಳಬೇಕು ಎಂದು ಘಟಪ್ರಭಾ ಗುಬ್ಬಲಗುಡ್ಡಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ಶನಿವಾರದಂದು ಪಟ್ಟಣದ ಮೊಹ್ಮದಿಯಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪಾಲಕ ಮತ್ತು ಶಿಕ್ಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಕಾಳಜಿವಹಿಸಿ ಅವರ ಏಳ್ಗೆಗೆ ಹಗಳಿರುಳು ಶ್ರಮಿಸಿಬೇಕು. ವಿದ್ಯಾರ್ಥಿಗಳು ಸಹ ತಂದೆ,ತಾಯಿಯ ಅಭಿಲಾಷೆಯಂತೆ ಪ್ರತಿಭಾವಂತರಾಗಬೇಕು.ಮಾತೃಭಾಷೆ ಉರ್ದುಯೊಂದಿಗೆ ಇನ್ನುಳಿದ ಭಾಷೆಗಳನ್ನು ಕಲಿತು ಜ್ಞಾನಾರ್ಜನೆ ಪಡೆದುಕೊಂಡು ಉತ್ತಮ ನಾಗರಿಕರಾಗಬೇಕು ಆ ದಿಸೆಯಲ್ಲಿ ಪಟ್ಟಣದ ಮೊಹ್ಮದಿಯಾ ಶಿಕ್ಷಣ ಸಂಸ್ಥೆ ತಮ್ಮ ಸಂಸ್ಥೆಯಲ್ಲಿ ಕಲಿತ ಮಕ್ಕಳು ಸಹ ಉನ್ನತ ಹುದ್ದೆಗಳಲ್ಲಿ ಇರಬೇಕು ಎಂಬ ಮಹದಾಸೆಯಿಂದ ಮಾತೃ ಭಾಷೆಯೊಂದಿಗೆ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಕಲಿಸುತ್ತಿರುವುದು ಶ್ಲಾಘನೀಯವಾಗಿದೆ.
ಇಂದಿನ ಆಧುನಿಕ ಯುಗದಲ್ಲಿ ಒಳ್ಳೆಯ ಸಂಸ್ಕಾರ ಜೊತೆಗೆ ಶಿಕ್ಷಣ ಬಹಳ ಮುಖ್ಯ. ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಸುವ ಬಹುದೊಡ್ಡ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ವರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಸಿ .ಆರ್.ಸಿ ರಮೇಶ್ ಕೋಲಕಾರ, ಡಾ.ಸ್ವಾತಿ ವೈದ್ಯ, ಖಾದರಿ ಮಾಝ ಎಂ.ಎ, ಸೈಯದ ಮುಝಾಹಿದ್ದೀನ, ಹಾಜಿ ಯೂನೂಸ ಶೇಖ್, ಅಲ್ತಾಫ್ ಉಸ್ತಾದ್, ಮೊಹಮ್ಮದ್ ಮೋಮಿನ, ಇಸಾಕ್ ಸೌದಾಗರ, ಹಜರತ ಮುಜಾವರ, ಮೌಲಾನಾ ತೌಹಿದ ಅಹ್ಮದ ದೇಸಾಯಿ, ಮುಖ್ಯೋಪಾಧ್ಯಾಯನಿ ತಬ್ಬಸುಮ ಪಟೇಲ್ ಉಪಸ್ಥಿತರಿದ್ದರು.