ಗೋಕಾಕ:ಪಿಎಸ್ಐ ನಡೆ ಖಂಡಿಸಿ ನ್ಯಾಯವಾದಿಗಳಿಂದ ರಸ್ತೆ ತಡೆದು ಪ್ರತಿಭಟನೆ
ಪಿಎಸ್ಐ ನಡೆ ಖಂಡಿಸಿ ನ್ಯಾಯವಾದಿಗಳಿಂದ ರಸ್ತೆ ತಡೆದು ಪ್ರತಿಭಟನೆ
ಗೋಕಾಕ ಫೆ 6 : ಮನೆ ಕಟ್ಟುವ ವಿಷಯವಾಗಿ ತನಗೆ ವಿನಾಕಾರಣ ತೊಂದರೆ ನೀಡುತ್ತಿರುವ ಗ್ರಾಮ ಪಂಚಾಯತ ಸದಸ್ಯನ ವಿರುದ್ದ ಪ್ರಕರಣ ದಾಖಲಿಸಲು ಹೋದ ನ್ಯಾಯವಾದಿ ರಿಯಾಜ ದೇಸಾಯಿ ಅವರನ್ನು 4 ಗಂಟೆಯ ಕಾಲ ಠಾಣೆಯಲ್ಲಿ ಕೂರಿಸಿ ಪಿ.ಎಸ್.ಐ ಕಣ್ಣೇದುರೆ ನ್ಯಾಯವಾದಿಯನ್ನು ಒರ್ವ ಪಂಚಾಯತಿ ಸದಸ್ಯ ಎಳೆದಾಡಿದರು ಸಹ ಯಾವುದೆ ಪ್ರಕರಣ ದಾಖಲಿಸಿಕೊಳ್ಳದ ಗೋಕಾಕ ತಾಲೂಕಿನ ಅಂಕಲಗಿ ಪೋಲಿಸ್ ಠಾಣೆಯ ಪಿ,ಎಸ್,ಐ,ಯಮನಪ್ಪ ಮಾಂಗ ನಡೆ ಖಂಡಿಸಿ ನೂರಾರು ನ್ಯಾಯವಾದಿಗಳು ನಗರದಲ್ಲಿ ಧಿಡೀರ್ ರಸ್ತೆ ತಡೆದು ಪ್ರತಿಭಟನೆ ಮಾಡಿದರು.
ನಗರದ ಡಿ.ವಾಯ್.ಎಸ್.ಪಿ ಕಛೇರಿ ಎದುರು ಸೇರಿದ ನ್ಯಾಯವಾದಿಗಳು 2 ಗಂಟೆಗಳ ಕಾಲ ರಸ್ತೆ ತಡೆದು ಪಿ,ಎಸ್,ಐ, ವಿರುದ್ದ ಧಿಕ್ಕಾರ ಕೂಗಿ ತಕ್ಷಣ ಪಿಎಸ್ಐ ಅವರನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕೆಲ ಕಾಲ ಪೋಲಿಸ ಅಧಿಕಾರಿಗಳ ಜೊತೆ ನ್ಯಾಯವಾದಿಗಳು ವಾಗ್ವಾದ ನಡೆಸಿ ಸ್ಥಳಕ್ಕೆ ಪಿಎಸ್ಐ ಅವರನ್ನು ಕರೆಯಿಸುವಂತೆ ಪಟ್ಟು ಹಿಡಿದರು.
ಇನ್ನೂ ಧಿಡೀರ್ ಪ್ರತಿಭಟನೆ ಕೈಗೊಂಡ ಪರಿಣಾಮ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ನ್ಯಾಯವಾದಿ ಸಂಘದ ಮಾಜಿ ಅದ್ಯಕ್ಷ ಶಶಿಧರ್ ದೇಮಶೆಟ್ಟಿ ಮಾತನಾಡಿ ನ್ಯಾಯವಾದಿಗಳಿಗೆ ಪೋಲಿಸ್ ಠಾಣೆಯಲ್ಲಿ ನ್ಯಾಯ ಸಿಗುವುದಿಲ್ಲ ಎಂದರೆ ಇನ್ನು ಸಾರ್ವಜನಿಕರಿಗೆ ಯಾವ ರೀತಿ ಇವರು ನ್ಯಾಯ ಒದಗಿಸುತ್ತಾರೆ ಎಂಬುದು ತಿಳಿಯುತ್ತಿಲ್ಲಾ ಎಂದು ಪಿಎಸ್ಐ ವಿರುದ್ದ ಹರಿಹಾಯ್ದರು