RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವಾಗ ಗೋಕಾಕ ತಾಲೂಕಿಗೆ ಪ್ರಥಮ ಪ್ರಾಶಸ್ತ್ಯ ನೀಡಿ : ಸರಕಾರಕ್ಕೆ ಮುರುಘರಾಜೇಂದ್ರ ಶ್ರೀ ಆಗ್ರಹ.

ಗೋಕಾಕ:ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವಾಗ ಗೋಕಾಕ ತಾಲೂಕಿಗೆ ಪ್ರಥಮ ಪ್ರಾಶಸ್ತ್ಯ ನೀಡಿ : ಸರಕಾರಕ್ಕೆ ಮುರುಘರಾಜೇಂದ್ರ ಶ್ರೀ ಆಗ್ರಹ. 

ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವಾಗ ಗೋಕಾಕ ತಾಲೂಕಿಗೆ ಪ್ರಥಮ ಪ್ರಾಶಸ್ತ್ಯ ನೀಡಿ : ಸರಕಾರಕ್ಕೆ ಮುರುಘರಾಜೇಂದ್ರ ಶ್ರೀ ಆಗ್ರಹ.
ಗೋಕಾಕ ಫೆ 8 : ಆಡಳಿತಾತ್ಮಕ ದೃಷ್ಟಿಯಿಂದ ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ 3 ಹೊಸ ಜಿಲ್ಲೆಗಳನ್ನು ರಚಿಸಲು ಸರಕಾರ ಮುಂದಾಗಿ, ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮಾಹಿತಿ ಸಲ್ಲಿಸುವಂತೆ ಆದೇಶಿಸಿರುವುದು ಸ್ವಾಗತಾರ್ಹ ಎಂದು ನೂತನ ಗೋಕಾಕ ಜಿಲ್ಲಾ ಚಾಲನಾ ಸಮಿತಿಯ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದ ಅತಿದೊಡ್ಡ ಜಿಲ್ಲಾ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆಯನ್ನಾಗಿ ಮಾಡುವಂತೆ ಪಿ.ಸಿ.ಗದ್ದಿಗೌಡರ, ವಾಸುದೇವರಾವ ಮತ್ತು ಹುಂಡೆಕರ ಸಮಿತಿಗಳು ವರದಿ ನೀಡಿರುವ ಪರಿಣಾಮ ಅಂದಿನ ಜೆ.ಎಚ್.ಪಟೇಲರ ಸರಕಾರ ಗೋಕಾಕ ತಾಲೂಕನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿತ್ತು ಆದರೆ ದಿವಂಗತ ಪಾಟೀಲ್ ಪುಟ್ಟಪ್ಪ ಮತ್ತು ಕನ್ನಡರಪರ ಹೋರಾಟಗಾರರು ಬೆಳಗಾವಿ ಗಡಿವಿಷಯದ ಕುರಿತು ಸರಕಾರದ ಗಮನ ಸೆಳೆದಾಗ ಪಟೇಲರು ಆ ಆದೇಶವನ್ನು ಹಿಂಪಡೆದರು ಹಾಗಾಗಿ ಗೋಕಾಕ ಜಿಲ್ಲಾ ಕೇಂದ್ರ ವಂಚಿತವಾಗಿದೆ ಆ ಕಾರಣಕ್ಕಾಗಿ ಸರಕಾರ ಈಗ ಹೊಸ ಜಿಲ್ಲಾ ರಚನೆಗೆ ಮುಂದಾಗಿದ್ದು , ಗೋಕಾಕ ತಾಲೂಕಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ನೂತನ ಜಿಲ್ಲೆ ಎಂದು ಘೋಷಿಸಬೇಕು ಎಂದು ಶ್ರೀಗಳು ಸರಕಾರವನ್ನು ಒತ್ತಾಯಿಸಿದ್ದಾರೆ.
18 ವಿಧಾನಸಭಾ ಕ್ಷೇತ್ರ ಮತ್ತು 3 ಲೋಕಸಭಾ ಕ್ಷೇತ್ರಗಳನ್ನು ಹೊಂದಿ ವಿಸ್ತಿರ್ಣದಲ್ಲಿ ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆಯಾಗಿರುವ
ಬೆಳಗಾವಿಯನ್ನು ವಿಭಜನೆ ಮಾಡಿ ಗೋಕಾಕ ಮತ್ತು ಚಿಕ್ಕೋಡಿ ಹೊಸ ಜಿಲ್ಲೆಗಳನ್ನು ಮಾಡಬೇಕು ಎಂದು ಕಳೆದ 40 ವರ್ಷಗಳಿಂದಲೂ ನಿರಂತರ ಹೋರಾಟಗಳು ನಡೆದಿವೆ. ಗಡಿ ಭಾಗವಾಗಿರುವ ಬೆಳಗಾವಿಯಲ್ಲಿ ನಾಲ್ಕು ದಶಕಗಳ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲಾ ಎಲ್ಲವೂ ಬದಲಾಗಿದೆ ಬೆಳಗಾವಿ ನಗರ ಸೇರಿದಂತೆದಂತೆ ಗಡಿಭಾಗದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿದ್ದು, ಜಿಲ್ಲೆ ವಿಭಜನೆಗೆ ಗಡಿವಿಷಯ ಅಡ್ಡಿ ಬರುವುದಿಲ್ಲ ಎಂದಿರುವ ಅವರು ಆದಷ್ಟು ಬೇಗ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಹೊಸ ಜಿಲ್ಲೆಗಳನ್ನು ಮಾಡಲು ಸರಕಾರ ಏಕಾಗ್ರತೆಯನ್ನು ಪ್ರರ್ದಶಿಸಬೇಕು ಎಂದು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Related posts: