RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಸ್ನೇಹಪೂರ್ವ ಹೊನಲು-ಬೆಳಕಿನ ಕ್ರಿಕೆಟ್ ಪಂದ್ಯ – ಅಂಪೈರ ಆಗಿ ಕಾರ್ಯನಿರ್ವಹಿಸಿದ ಮಂತ್ರಿ ಸತೀಶ ಜಾರಕಿಹೊಳಿ.

ಗೋಕಾಕ:ಸ್ನೇಹಪೂರ್ವ ಹೊನಲು-ಬೆಳಕಿನ ಕ್ರಿಕೆಟ್ ಪಂದ್ಯ – ಅಂಪೈರ ಆಗಿ ಕಾರ್ಯನಿರ್ವಹಿಸಿದ ಮಂತ್ರಿ ಸತೀಶ ಜಾರಕಿಹೊಳಿ. 

ಸ್ನೇಹಪೂರ್ವ ಹೊನಲು-ಬೆಳಕಿನ ಕ್ರಿಕೆಟ್ ಪಂದ್ಯ – ಅಂಪೈರ ಆಗಿ ಕಾರ್ಯನಿರ್ವಹಿಸಿದ ಮಂತ್ರಿ ಸತೀಶ ಜಾರಕಿಹೊಳಿ.

 

ಗೋಕಾಕ ಫೆ 11 : ಲೋಕೋಪಯೋಗಿ ಮಂತ್ರಿ ಸತೀಶ ಜಾರಕಿಹೊಳಿ ಅವರು ಬ್ಯಾಟ್ ಬಿಸಿದರು, ಬಾಲ ಮಾಡಿದರು ಅಂಪೈರ್ ಸಹ ಆಗಿ ಕ್ರಿಕೆಟ್ ಆಟವನ್ನು ಆಸ್ವಾದಿಸಿದರು. ಇದು ಶನಿವಾರ ರಾತ್ರಿ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕಂಡುಬಂದ ದೃಶ್ಯಗಳು.

ಲೋಕೋಪಯೋಗಿ ಇಲಾಖೆಯ ವತಿಯಿಂದ 2.5 ಕೋಟಿ ರೂ ವೆಚ್ಚದಲ್ಲಿ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಆಳವಡಿಸಲಾದ ಹೈಮಾಸ್ಕ ( ಫೇಡಲೈಟ್ ) ವಿದ್ಯುತ್ ದ್ವೀಪಗಳ ಬೆಳಕಿನಲ್ಲಿ ಸ್ನೇಹ ಪೂರ್ವ ಕ್ರಿಕೆಟ್ ಪಂದ್ಯಕ್ಕೆ ಟಾಸ್ ಎತ್ತುವ ಮೂಲಕ ಚಾಲನೆ ನೀಡಿ ಅಂಫೈರ್ ಆಗಿ ಕಾರ್ಯನಿರ್ವಹಿಸಿ ಎಲ್ಲರ ಗಮನ ಸೆಳೆದರು, ಕ್ರೀಡಾಪಟುಗಳು ಮಂತ್ರಿ ಸತೀಶ ಅವರ ಕ್ರೀಡಾಪ್ರೇಮವನ್ನು ನೋಡಿ ಕೊಂಡಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸತೀಶ ಅವರು ಕಳೆದ ಮೂವತ್ತು ದಶಕಗಳಿಂದಲೂ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹೊನಲು ಬೆಳಕು ಪಂದ್ಯಗಳನ್ನು ಆಡಲು ಕ್ರೀಡಾಪಟುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೈಮಾಸ್ಕ ದ್ವೀಪಗಳನ್ನು ಅಳವಡಿಸುವ ಕನಸು ಕಂಡಿದೆ ಈಗ ಲೋಕೋಪಯೋಗಿ ಇಲಾಖೆ ಸಚಿವನಾಗುವ ಮೂಲಕ ಆ ಕನಸನ್ನು ನನಸು ಮಾಡಿದ್ದೇನೆ ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೇವಲ ಕ್ರಿಕೆಟ್ ಅಷ್ಟೇ ಅಲ್ಲಾ ಎಲ್ಲಾ ರೀತಿಯ ಪಂದ್ಯಾವಳಿಗಳು ಆಯೋಜಿಸಲು ಈ ವಿದ್ಯುತ್ ದ್ವೀಪಗಳು ಸಹಕಾರಿಯಾಗಿದ್ದು, ಪ್ರತಿ ಶನಿವಾರ ಮತ್ತು ರವಿವಾರದಂದು ಹಾಗೂ ಪಂದ್ಯಾವಳಿಗಳು ನಡೆದಾಗ ದ್ವೀಪಗಳನ್ನು ಆನ್ ಮಾಡಲಾಗುವುದು ಎಂದ ಅವರು ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಫೆ 15 ರಿಂದ ಎರೆಡು ದಿನಗಳ ಕಾಲ ಜಿಲ್ಲಾ ಮತ್ತು ರಾಜ್ಯಮಟ್ಟದ ಕ್ರಿಕೆಟ್ ಕ್ರೀಡಾಪಟುಗಳು ಕರೆಯಿಸಿ ಸ್ನೇಹಪೂರ್ವ ಪಂದ್ಯಗಳನ್ನು ಆಡಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಗರದ ಎರಡು ನೂರಿತ ತಂಡಗಳ ನಡುವೆ 8 ಓವರಗಳ ಸ್ನೇಹ ಪೂರ್ವ ಪಂದ್ಯವನ್ನು ಆಡಿಸಲಾಯಿತು. ಈ ಪಂದ್ಯಕ್ಕೆ ಸ್ವತಃ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಅಂಪೈರ ಆಗಿ ಕಾರ್ಯನಿರ್ವಹಿಸಿ ಕ್ರೀಡಾಪ್ರೇಮವನ್ನು ಮೇರೆದರು.

ಈ ಸಂದರ್ಭದಲ್ಲಿ ನೂರಾರು ಕ್ರೀಡಾಪ್ರೇಮಿಗಳು ಉಪಸ್ಥಿತರಿದ್ದು ಹೊನಲು ಬೆಳಕಿನ ಪಂದ್ಯವನ್ನು ಆಸ್ವಾದಿಸಿದರು.

 

Related posts: