ಗೋಕಾಕ:ಸಹನೆ , ಸಂಯಮದಿಂದ ಶಿಕ್ಷಕರು ಪಾಠ ಮಾಡಿದರೆ ವಿದ್ಯಾರ್ಥಿಗಳಿಂದ ಒಳ್ಳೆಯ ಫಲಿತಾಂಶ ಬರಲು ಸಾಧ್ಯ : ತಹಶೀಲ್ದಾರ ಭಸ್ಮೆ
ಸಹನೆ , ಸಂಯಮದಿಂದ ಶಿಕ್ಷಕರು ಪಾಠ ಮಾಡಿದರೆ ವಿದ್ಯಾರ್ಥಿಗಳಿಂದ ಒಳ್ಳೆಯ ಫಲಿತಾಂಶ ಬರಲು ಸಾಧ್ಯ : ತಹಶೀಲ್ದಾರ ಭಸ್ಮೆ
ಗೋಕಾಕ ಫೆ 12 : ಸಹನೆ , ಸಂಯಮದಿಂದ ಶಿಕ್ಷಕರು ಪಾಠ ಮಾಡಿದರೆ ವಿದ್ಯಾರ್ಥಿಗಳಿಂದ ಒಳ್ಳೆಯ ಫಲಿತಾಂಶ ಎದುರು ನೋಡಬಹುದು ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.
ರವಿವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯವರು ಎಸ್.ಎಸ್, ಎಲ್.ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಮಿಸಕಾಲ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉತ್ತಮ ಶಿಕ್ಷಕರಿದ್ದರೆ ಉತ್ತಮ ಆಡಳಿತಗಾರರು ಆಗಲು ಸಾಧ್ಯ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಭಾವಿಸಿ ಅವರ ಬೆಳವಣಿಗೆಗೆ ಸಹಕರಿಸುತ್ತಿರುವ ಗೋಕಾಕ ವಲಯದ ಶಿಕ್ಷಕರ ಕಾರ್ಯ ಎಲ್ಲರೂ ಮೆಚ್ಚುವಂತಹದ್ದು, ಒಂದು ವಾರಗಳ ಕಾಲ ವಲಯ, ಜಿಲ್ಲೆ ಹಾಗೂ ರಾಜ್ಯದ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳು ಮಿಸಕಾಲ್ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕಠಿಣ ಪ್ರಶ್ನೆಗಳಲ್ಲಿಗೆ ಉತ್ತರ ಪಡೆದು ಪುನಿತರಾಗಿದ್ದಾರೆ. ಇಂತಹ ವೈವಿಧ್ಯಮಯ ಕಾರ್ಯಕ್ರಮಗಳಿಂದ ಪ್ರತಿ ದಿನ ಶಿಕ್ಷಕರು ಹೊಸ ದಿನ, ಹೊಸ ಅನುಭವ ಪಡೆಯುತ್ತಾರೆ ಎಂದ ಅವರು ಇಂತಹ ರಚನಾತ್ಮಕ ಕಾರ್ಯಗಳು ಗೋಕಾಕ ಶೈಕ್ಷಣಿಕ ವಲಯದಲ್ಲಿ ಇನ್ನು ಹೆಚ್ಚು ,ಹೆಚ್ಚು ಮೂಡಿಬರಲಿ ಎಂದು ಹಾರೈಸಿದರು.
ಬಿಇಓ ಜಿ.ಬಿ.ಬಳಗಾರ ಮಾತನಾಡಿ ವಲಯದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಮ್ಮಿಕೊಂಡ ವಿನೂತನ ಕಾರ್ಯಕ್ರಮಗಳು ಮಾದರಿಯಾಗಿ ರಾಜ್ಯಾದ್ಯಂತ ಅನುಷ್ಠಾನಗೊಳ್ಳುತ್ತಿರುವುದು ಹೆಮ್ಮೆಯ ವಿಷಯ ಶಾಸಕರ, ಪಾಲಕರು, ಶಿಕ್ಷಕರು ಸೇರಿದಂತೆ ಎಲ್ಲರ ಸಹಕಾರದಿಂದ ಇದು ಸಹಕಾರಗೊಳ್ಳುತ್ತಿದಗ. ಈ ಕಾರ್ಯಕ್ರಮವನ್ನು ಮುಂದಿನ 40 ದಿನಗಳವರೆಗೆ ಶಿಕ್ಷಕರು ಮುಂದೆವರಿಸಿ ವಿದ್ಯಾರ್ಥಿಗಳ ಗೆಲುವಿನ ಸಂಭ್ರಮದಲ್ಲಿ ಪಾಲ್ಗೋಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪಿಎಸ್ಐ ಕೆ.ವಾಲಿಕರ, ಅರಿಹಂತ ಬಿರಾದಾರ ಪಾಟೀಲ, ಸಿದ್ರಾಮ ಲೋಕನ್ನವರ, ಎಂ.ಬಿ.ಪಾಟೀಲ, ಎಂ.ಬಿ.ಬಳಗಾರ, ಬಸವರಾಜ ಮುರಗೋಡ, ಶ್ರೀಮತಿ ಭಾಗ್ಯನ್ನವರ, ಶ್ರೀಮತಿ ಸಿ.ಬಿ.ಪಾಗದ , ನಿವೃತ್ತ ಶಿಕ್ಷಕರಾದ ಎಂ.ಬಿ.ವಾಸೆದಾರ, ಬಿ.ಎಸ್.ಬೋಗೋನಿ, ಎಸ್.ಎನ್.ಸತ್ತಿಗೇರಿ, ಎಸ್.ಜಿ.ಮುಚ್ಚಂಡಿಹಿರೇಮಠ, ಎನ್.ಎ ಮಕಾಂದಾರ, ಪಿ.ಎಂ ಕಂಬಳಿ ಉಪಸ್ಥಿತರಿದ್ದರು.