ಗೋಕಾಕ:ಕಾನೂನಿನ ಚೌಕಟ್ಟಿನಲ್ಲಿ ನ್ಯಾಯವಾದಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶಕುಮಾರ
ಕಾನೂನಿನ ಚೌಕಟ್ಟಿನಲ್ಲಿ ನ್ಯಾಯವಾದಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶಕುಮಾರ
ಗೋಕಾಕ ಫೆ 18 : ಕಾನೂನಿನ ಚೌಕಟ್ಟಿನಲ್ಲಿ ನ್ಯಾಯವಾದಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ನ್ಯಾಯಾಂಗದ ಗೌರವವನ್ನು ಹೆಚ್ಚಿಸುವಂತೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶಕುಮಾರ ಹೇಳಿದರು.
ರವಿವಾರದಂದು ನಗರದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯಾಲಯ ಬೆಳಗಾವಿ, ಲೋಕೋಪಯೋಗಿ ಇಲಾಖೆ ಚಿಕ್ಕೋಡಿ ವಿಭಾಗ ಮತ್ತು ನ್ಯಾಯವಾದಿಗಳ ಸಂಘ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಗೋಕಾಕ ವಕೀಲರ ಭವನದ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡುತ್ತಾ ವಕೀಲರು ನಿರಂತರ ಅಧ್ಯಯನ ಶೀಲರಾಗಿ ಕಾನೂನಿನ ಜ್ಞಾನವನ್ನು ಹೆಚ್ಚಿಸಿಕೊಂಡು ಕಕ್ಷಿಗಾರರಲು ಕಾನೂನಿನ ಅರಿವನ್ನು ಮೂಡಿಸುವಂತೆ ಯುವ ನ್ಯಾಯವಾದಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ
ಹಳೆಯ ಪ್ರಕರಣಗಳಿಗೆ ಹೆಚ್ಚಿನ ಮಹತ್ವ ನೀಡಿ ಆದಷ್ಟು ಬೇಗ ಅವುಗಳನ್ನು ಇತ್ಯರ್ಥ ಗೊಳಿಸಬೇಕು. ನ್ಯಾಯವಾದಿಗಳು ಸರಿಯಾಗಿ ಕೆಲಸ ಮಾಡದೇ ಹೋದರೆ ಕಕ್ಷಿಗಾರರಿಗೆ ನ್ಯಾಯವನ್ನು ಒದಗಿಸಲು ಆಗುವುದಿಲ್ಲ ಎಂದ ಅವರು ಎಲ್ಲಾ ನ್ಯಾಯವಾದಿಗಳು ತಮ್ಮ ಕರ್ತವ್ಯವನ್ನು ಮುತುವರ್ಜಿ ವಹಿಸಿ ಕಾರ್ಯಮಾಡಬೇಕು.ಶ ಎಂದ ಅವರು ನ್ಯಾಯಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ವಕೀಲರ ಭವನದ ಸದುಪಯೋಗವನ್ನು ಎಲ್ಲಾ ನ್ಯಾಯವಾದಿಗಳು ಪಡೆದುಕೊಂಡು ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಉಚ್ಚ ನ್ಯಾಯಲದ ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ ಹೇಳಿದರು .
ಕಾರ್ಯಕ್ರಮ ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸಚಿನ ಮಗದುಮ್ಮ ವಹಿಸಿದ್ದರು.
ವೇದಿಕೆಯಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀಮತಿ ಕೆ.ಎಸ್. ಹೇಮಲೇಖಾ, ಅನಿಲ ಕಟ್ಟಿ,ವಿಜಯಕುಮಾರ್ ಪಾಟೀಲ, ಎಸ್.ವಾಯ್.ವಟವಟಿ, ಉಚ್ಚ ನ್ಯಾಯಾಲದ ರಜಿಸ್ಟಾರ್, ಕೆ.ಎಸ್.ಭರತಕುಮಾರ, ಜಿಲ್ಲಾ ನ್ಯಾಯಾಧೀಶೆ ಶ್ರೀಮತಿ ಎಲ್.ವಿಜಯಲಕ್ಷ್ಮಿ ದೇವಿ, ವಿನಯ ಮಾಂಗಳೇಕರ, ವಕೀಲರ ಸಂಘದ ಅಧ್ಯಕ್ಷ ಬಿ.ಆರ್.ಕೋಟಗಿ, ಕಾರ್ಯದರ್ಶಿ ಬಿ.ಬಿ.ಬೀರನಗಡ್ಡಿ ಉಪಸ್ಥಿತರಿದ್ದರು.