ಗೋಕಾಕ:ಶಾರ್ಟ್ ಸರ್ಕ್ಯೂಟ್ನಿಂದ ಮನೆಗಳಿಗೆ ಬೆಂಕಿ: ಒಟ್ಟು 310 ಗ್ರಾಮ ಚಿನ್ನಾಭರಣ, ನಗದು ಸೇರಿ ಲಕ್ಷಾಂತರ ಮೌಲ್ಯದ ವಸ್ತು ಬೆಂಕಿಗಾಹುತಿ
ಶಾರ್ಟ್ ಸರ್ಕ್ಯೂಟ್ನಿಂದ ಮನೆಗಳಿಗೆ ಬೆಂಕಿ: ಒಟ್ಟು 310 ಗ್ರಾಮ ಚಿನ್ನಾಭರಣ, ನಗದು ಸೇರಿ ಲಕ್ಷಾಂತರ ಮೌಲ್ಯದ ವಸ್ತು ಬೆಂಕಿಗಾಹುತಿ
ಗೋಕಾಕ ಫೆ 22 : ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ನಾಲ್ಕು ಮನೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಹಾಗೂ ಬೆಲೆಬಾಳುವ ಚಿನ್ನಾಭರಣ ನಾಶವಾದ ಘಟನೆ ತಾಲೂಕಿನ ಶಿಂಗಳಾಪೂರ ಟಕ್ಕೆ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಅಂಜುಮ ಹುಸೇನಸಾಬ ಪೀರಜಾದೆ , ಕಯ್ಯೂಮ ಹು ಪೀರಜಾದೆ, ನಯ್ಯೂಮ ಹು ಪೀರಜಾದೆ, ಇಸಾಮೋದ್ದೀನ ಹುಶಪೀರಜಾದೆ ಎಂಬುವರಿಗೆ ಸೇರಿದ ಮನೆಗಳು ಬೆಂಕಿಗಾಹುತಿಯಾಗಿದೆ. ಬೆಳಿಗ್ಗೆ ಘಟನೆ ನಡೆದಿದ್ದು, ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳು ನಾಶವಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸಿದ್ದಾರೆ.
ಈ ಅಗ್ನಿ ಅವಘಡದಲ್ಲಿ ಅಂಜುಮ ಪೀರಜಾದೆ ಅವರಿಗೆ ಸೇರಿದ 120 ಗ್ರಾಮ ಬಂಗಾರ ರ 6 ಸಾವಿರ ರೂ ನಗದು,ದಿನಬಳಕೆಯ ವಸ್ತುಗಳು ಹಾಗೂ ದಾಖಲಾತಿಗಳು. ಕಯ್ಯೂಮ ಪೀರಜಾದೆ ಅವರಿಗೆ ಸೇರಿದ 40 ಗ್ರಾಮ ಬಂಗಾರ, ದಿನಬಳಕೆಯ ವಸ್ತುಗಳು, ದಾಖಲಾತಿಗಳು. ನಯ್ಯೂಮ ಪೀರಜಾದೆ ಅವರಿಗೆ ಸೇರಿದ 100 ಗ್ರಾಮ ಬಂಗಾರ , 25 ಸಾವಿರ ರೂ ನಗದು, ದಿನಬಳಕೆಯ ವಸ್ತುಗಳು, ದಾಖಲಾತಿಗಳು ಹಾಗೂ ಇಸಾಮೋದ್ದೀನ ಪೀರಜಾದೆ ಅವರಿಗೆ ಸೇರಿದ 50 ಗ್ರಾಮ ಬಂಗಾರ, 5 ಸಾವಿರ ರೂ ನಗದು, ದಿನಬಳಕೆಯ ವಸ್ತುಗಳು ಹಾಗೂ ಮಹತ್ವದ ದಾಖಲಾತಿಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.