ಗೋಕಾಕ:ಸಮಾಜದಲ್ಲಿ ನೆಮ್ಮದಿ ಬದುಕು ಬದುಕಲು ಶರಣ ಸಂಸ್ಕೃತಿ ಉತ್ಸವ ದಾರಿದೀಪವಾಗುತ್ತಿದೆ : ಅಶೋಕ ಪೂಜಾರಿ ಅಭಿಮತ
ಸಮಾಜದಲ್ಲಿ ನೆಮ್ಮದಿ ಬದುಕು ಬದುಕಲು ಶರಣ ಸಂಸ್ಕೃತಿ ಉತ್ಸವ ದಾರಿದೀಪವಾಗುತ್ತಿದೆ : ಅಶೋಕ ಪೂಜಾರಿ ಅಭಿಮತ
ಗೋಕಾಕ ಮಾ 1 : ಸಮಾಜದಲ್ಲಿ ನೆಮ್ಮದಿ ಬದುಕು ಬದುಕಲು ಶರಣ ಸಂಸ್ಕೃತಿ ಉತ್ಸವ ದಾರಿದೀಪವಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದರು
ಶುಕ್ರವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ 19 ನೇ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ವಾಸ್ತವ ಸ್ಥಿತಿಗೆ ಪೂರಕವಾಗಿ ಶ್ರೀಮಠ ಸಮಾಜದಲ್ಲಿ ಬದಲಾವಣೆ ವಾಗಬೇಕು ಎಂಬ ಆಸೆಯಿಂದ ಕಾರ್ಯಮಾಡುತ್ತಿದೆ. ಕನ್ನಡ ಸಾಹಿತ್ಯ , ಸಂಸ್ಕೃತಿ , ಜಾನಪದ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತಹ ಕಾರ್ಯಕ್ರಮಗಳನ್ನು ಸಂಘಟಿಸಿ ನಸಿಶಿ ಹೊಗುತ್ತಿರುವ ಕಲೆಯನ್ನು ಶರಣ ಸಂಸ್ಕೃತಿ ಉತ್ಸವದ ಮುಖೇನ ಉಳಿಸಿ, ಬೆಳೆಸುವ ಕಾರ್ಯ ನಿಜವಾಗಿಯೂ ಶ್ಲಾಘನೀಯ ಎಂದ ಅವರು ಸಮಯಕ್ಕೆ ಪೂರಕವಾಗಿ ನಡೆಯುವ ಈ ಶರಣಶ ಸಂಸ್ಕೃತಿ ಉತ್ಸವ ನಾಡಿನ ಉತ್ಸವವಾಗಿ ಹೊರಹೊಮ್ಮಿದೆ . ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತಗೆದುಕೊಂಡು ಹೋಗುತ್ತಿರುವ ಶ್ರೀ ಮಠದ ಕಾರ್ಯ ಇತರರಿಗೆ ಮಾದರಿಯಾಗಿದ್ದು, ಪ್ರತಿವರ್ಷ ನಡೆಯುವ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಬೆಳೆದು ನಿಲ್ಲಲಿ ಎಂದು ಹಾರೈಸಿದರು .
ಸಾನಿಧ್ಯವನ್ನು ವಹಿಸಿದ್ದ ಹಳ್ಳೂರಿನ ಶ್ರೀ ಅಡವಿಸಿದ್ದ ಮಹಾಸ್ವಾಮಿಗಳು ಮಾತನಾಡಿ ಬಸವಣ್ಣನವರ ಮಾಡಿದಂತಹ ಎಲ್ಲಾ ಶರಣ ವಿಚಾರಗಳನ್ನು ಇಟ್ಟುಕೊಂಡು. ಭಕ್ತರಿಗೆ ಒಳ್ಳೆಯ ಸಂಸ್ಕಾರ ನೀಡುವ ಮೂಲಕ ಬದಲಾವಣೆ ಮಾಡಬೇಕು ಎಂದು ಮಹತ್ತರ ಉದ್ದೇಶದಿಂದ ಶ್ರೀ ಮಠದ ಶರಣರ ಸಂಸ್ಕೃತಿ ಉತ್ಸವವನ್ನು ಮಾಡಿ ಭಾವೈಕ್ಯತೆ ಸಾರುತ್ತಿದೆ. ಇಡೀ ಕರುನಾಡು ಗೋಕಾಕಕಿನ ಕಡೆ ನೋಡುವಂತಹ ಕಾರ್ಯವನ್ನು ಶೂನ್ಯ ಸಂಪಾದನ ಮಠ ಮಾಡುತ್ತಿದ್ದು, 12ನೇ ಶತಮಾನದ ಕಲ್ಯಾಣೋತ್ಸವವನ್ನು ನೆನಪಿಸುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಎಲ್ಲರೂ ಪಾವನರಾಗಬೇಕು ಎಂದು ಹೇಳಿದರು.
ಇದೇ ಮೊದಲ ಭಾರಿ ಆಯೋಜಿಸಿದ್ದ ಬೃಹತ್ ಉದ್ಯೋಗಮೇಳವನ್ನು ಉದ್ಘಾಟಿಸಿ ಮಾತನಾಡಿದ ತೇಜಸ್ವಿ ಕಟ್ಟಮನಿ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಸಹಕಾರಿ ಯಾಗಲಿ ಎಂಬ ಸದ್ದುದೇಶದಿಂದ ಉದ್ಯೋಗಮೇಳವನ್ನು ಶ್ರೀಗಳು ಸಂಘಟಿಸಿದ್ದಾರೆ ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಬೃಹತ್ ಉದ್ಯೋಗಮೇಳದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 40 ಕ್ಕೂ ಹೆಚ್ಚು ಕಂಪನಿಗಳ ಭಾಗವಹಿಸಿದ್ದವು.
ಕಾರ್ಯಕ್ರಮದ ಸಾನಿಧ್ಯವನ್ನು ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಸಂತೋಷ ಸೋನವಾಲಕರ, ಕೋಶಾಧ್ಯಕ್ಷ ಬಸವರಾಜ ಮುರಗೋಡ , ಕಾರ್ಯದರ್ಶಿ ಮಂಜುನಾಥ್ ಸಣ್ಣಕ್ಕಿ,ಲಿಂಗಾಯತ ಮಹಿಳಾ ವೇದಿಕೆ ಅಧ್ಯಕ್ಷೆ ಶೈಲಾ ಬಿದರಿ ಉಪಸ್ಥಿತರಿದ್ದರು.