ಗೋಕಾಕ:ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪತ್ರಕರ್ತರಿಗೆ ಸಿಗಬೇಕಾದ ಸೂಕ್ತ ಸ್ಥಾನ,ಮಾನ ಸಿಗುತ್ತಿಲ್ಲ : ಖ್ಯಾತ ಪತ್ರಕರ್ತ ಅಜಿತ್ ಅಭಿಮತ
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪತ್ರಕರ್ತರಿಗೆ ಸಿಗಬೇಕಾದ ಸೂಕ್ತ ಸ್ಥಾನ,ಮಾನ ಸಿಗುತ್ತಿಲ್ಲ : ಖ್ಯಾತ ಪತ್ರಕರ್ತ ಅಜಿತ್ ಅಭಿಮತ
ಗೋಕಾಕ ಮಾ 3 : ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪತ್ರಕರ್ತರ ಮಾಡುವ ಕಾರ್ಯ ನಿಜವಾಗಿಯೂ ಪ್ರಶಂಸನೀಯ ಆದರೆ ಅವರಿಗೆ ಸಿಗಬೇಕಾದ ಸ್ಥಾನ ಮಾನ ಸಿಗುತ್ತಿಲ್ಲ ಎಂದು ಖ್ಯಾತ ಪತ್ರಕರ್ತ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹಣಮಕ್ಕನವರ ಹೇಳಿದರು.
ಶನಿವಾರದಂದು ಶೂನ್ಯ ಸಂಪಾದನ ಮಠದ ವತಿಯಿಂದ ಹಮ್ಮಿಕೊಂಡ 19 ನೇ ಶರಣ ಸಂಸ್ಕೃತಿ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಸತ್ಯವನ್ನು ಹೇಳುವ ಕಾರ್ಯ ಒಬ್ಬ ಪತ್ರಕರ್ತ ಮಾಡಬೇಕು. ಜನಸಾಮಾನ್ಯರ ತೊಂದರೆಗಳನ್ನು ಸರಕಾರಕ್ಕೆ ಮುಟ್ಟವ ರೀತಿಯಲ್ಲಿ ಪತ್ರಕರ್ತರು ಕಾರ್ಯಮಾಡಬೇಕು.
ಹಿಂದಿನ ಕಾಲಘಟ್ಟದಲ್ಲಿ ನಡೆದಂತಹ ಸನ್ನಿವೇಶವನ್ನು ಮಠಮಾನ್ಯಗಳು ಸರ್ಮಥವಾಗಿ ಮಾಡುತ್ತಿದ್ದವು ಅಂತಹ ಕಾರ್ಯವನ್ನು ಇಂಧು ಶ್ರೀ ಶೂನ್ಯ ಸಂಪಾದನ ಮಠ ಮಾಡುತ್ತಿದ್ದೆ.
ಇಂದಿನ ಕಾಲದಲ್ಲಿ ಹವ್ಯಾಸಕ್ಕಾಗಿ ಪತ್ರಕರ್ತರು ಆಗುತ್ತಿದ್ದಾರೆ. ಇಂದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇಂಟರ್ನೆಟ್ ಇಲ್ಲದ ಕಾಲದಲ್ಲಿ ಪತ್ರಕರ್ತರ ಬಹಳ ನಿಷ್ಠೆಯಿಂದ ಕಾರ್ಯಮಾಡಿ ಪತ್ರಿಕೋದ್ಯಮವನ್ನು ಉಳಿಸಿ, ಬೆಳೆಸಿದ್ದಾರೆ. ಮೊದಲು ನಮ್ಮ ಸುತ್ತಲೂ ಆಗುತ್ತಿದ ಘಟನೆಗಳು ಸುದ್ದಿಯಾಗುತ್ತಿದ್ದವು. ಇಂದು ಜಗತ್ತಿನಾದ್ಯಂತ ಘಟನೆಗಳು ಸುದ್ದಿಯಾಗುತ್ತಿವೆ. ಇಂದು ಎಲ್ಲಾ ರಂಗದಲ್ಲಿ ನಿಜವಾದವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಪ್ರತಕರ್ತರ ವೇಷಧಾರಿಯಲ್ಲಿ ದೊಡ್ಡ ದೊಡ್ಢವರು ಸಮಾಜಕ್ಕೆ ಮೋಸ ಮಾಡುತ್ತಿದ್ದಾರೆ. ಯಾರು ಏನು ಮಾಡುತ್ತಿದ್ದಾರೆ ಎಂಬುದು ಮುಖ್ಯವಾಗಿದೆ. ಪತ್ರಿಕೋದ್ಯಮ ಆತ್ಮಸಾಕ್ಷಿ ಸಂಬಂಧಿಸಿದ ವಿಷಯವಾಗಿದೆ. ಪತ್ರಕರ್ತರ ರಾಜಕಾರಣಿಗಳ ಮುಂದೆ ಹಲ್ಲು ಉಜ್ಜಿಕೊಳ್ಳುವುದನ್ನು ಬಿಡಬೇಕು. ಪತ್ರಕರ್ತರ ಎಂಬ ಕಾರಣಕ್ಕೆ ದೇಶದಲ್ಲಿ ನಾವು ಯಾವುದೇ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿಲ್ಲಾ. ಉಳಿದೆಲ್ಲಾ ವೃತ್ತಿಯಂತೆ ಪತ್ರಿಕೋದ್ಯಮ ಕೂಡಾ ಒಂದು ವೃತ್ತಿಯಷ್ಟೆ ಎಂದ ಅವರು ಸವಾಲುಗಳನ್ನು ಎದುರಿಸುವ ಸಂಧರ್ಭದಲ್ಲಿ ಪತ್ರಕರ್ತರು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕು. ಎಂದು ಹೇಳಿದರು.
ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ ಸಮಾಜದಲ್ಲಿ ನಡೆಯುವ ಮೌಢ್ಯವನ್ನು ತಡೆಯುವ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯವಾಗಿದೆ. ಇಂದಿನ ಸಮಾಜಕ್ಕೆ ಪತ್ರಕರ್ತರ ಬೇಕಾ ಎಂಬ ಪ್ರಶ್ನೆ ಸಮಾಜದ ಮುಂದಿದೆ. ಸೋಸಿಯಲ ಮಿಡಿಯಾ ಅಭ್ಭರದಲ್ಲಿ ನಿಜವಾದ ಪತ್ರಿಕೋದ್ಯಮ ಮರಿಚಿಗೆಯಾಗುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಕರ್ತರ ಪಾತ್ರ ಅವಿಸ್ಮರಣೀಯವಾಗಿದೆ. ಪತ್ರಕರ್ತರನ್ನು ಜನ ಗುರುತಿಸಿಬೇಕು. ಹಲವು ಸಂದರ್ಭದಲ್ಲಿ ಪತ್ರಕರ್ತರಿಂದ ಹಲವು ಘಟನೆಗಳು ನಡೆದಿವೆ. ಪತ್ರಕರ್ತ ವೃತ್ತಿ ಇರುವುದು ಸಮಾಜವನ್ನು ಒಡೆಯಲು ಅಲ್ಲಾ ಸಮಾಜವನ್ನು ಕಟ್ಟಲಿಕ್ಕೆ. ಪತ್ರಿಕೋದ್ಯಮದ ವೃತ್ತಿಯನ್ನು ಜನರು ಗೌರವಿಸಬೇಕು. ನೈಜ ಪತ್ರಕರ್ತರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಕರ್ನಾಟಕ
ಕಾರ್ಯನಿರತ ಪತ್ರಕರ್ತರ ಸಂಘ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ತಾಲೂಕು ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ
ಗ್ರಾಮೀಣ ಮಟ್ಟದಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಯುವಕರು ಮಠಮಾನ್ಯಗಳಿಂದ ದೂರವಿದ್ದಾರೆ ಯುವಕರು ಆಧ್ಯಾತ್ಮದ ಸಮೀಪ ಬರಬೇಕು ಎಂಬ ಉದ್ದೇಶದಿಂದ ಶ್ರೀಮಠ ಭಿನ್ನವಾದ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ದಿಲೀಪ್ ಕುರಂದವಾಡೆ ಮಾತನಾಡಿ ಪತ್ರಕರ್ತರ ವೃತ್ತಿ ಬಹಳಷ್ಟು ಜವಾಬ್ದಾರಿಯುತ್ತವಾಗಿದೆ. ಪತ್ರಕರ್ತರು ಮೈಯಲ್ಲಾ ಕಣ್ಣಾಗಿಸಿಕೊಂಡು ಕಾರ್ಯಮಾಡಬೇಕು. ಪತ್ರಕರ್ತರಿಗೆ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಕೆಲ ಮಾನದಂಡಗಳನ್ನು ಹಾಕುವ ಚಿಂತನೆ ಸಂಘಟನೆ ಮಾಡುತ್ತಿದೆ. ಪತ್ರಕರ್ತರ ಮಕ್ಕಳು ಶಿಕ್ಷಣದಿಂದ ವಂಚಿತರಾಗುಬಾರದು ಎಂಬ ಉದ್ದೇಶದಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಲವಾರು ಯೋಜನೆಗಳನ್ನು ತಂದು ಕಾರ್ಯಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಗೋಕಾವಿ ನಾಡು ಕಲೆ, ಸಾಂಸ್ಕೃತಿಕ ಮತ್ತು ಕಲೆಗೆ ಸಹಕಾರ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಷ್ಟೇ ಸಿಮಿತಗೋಳ್ಳದ ಈ ಶರಣ ಸಂಸ್ಕೃತಿ ಉತ್ಸವ ಭಿನ್ನವಾಗಿ ಕಾರ್ಯಮಾಡುತ್ತಿದೆ. ಪತ್ರಕರ್ತರ ಸಮಸ್ಯೆಗಳನ್ನು ಸಮಾಜ ಸಹ ಗೌರವಿಸಿ , ಹಕ್ಕೋತ್ತಾಯವನ್ನು ಮಾಡಬೇಕು. ನಮ್ಮ ಸಂಸದ ನಿಧಿಯಲ್ಲಿ ಪತ್ರಕರ್ತರಿಗೆ ಸಹಾಯ ಮಾಡಲು ನಾನು ಸದಾಸಿದ್ಧ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ನೇತೃತ್ವವನ್ನು ಶೂನ್ಯ ಸಂಪಾದನ ಮಠದ ಶ್ರೀಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ದಿವ್ಯ ಸಾನಿಧ್ಯವನ್ನು ಬಟಕುರ್ಕಿ ಚೌಕಿ ಮಠದ ಬಸವಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
ಇದೇ ಸಂಧರ್ಭದಲ್ಲಿ ಪತ್ರಿಕೋದ್ಯಮದಲ್ಲಿ ಸಾಧನೆ ಗೈಯುತ್ತಿರುವ ಪತ್ರಕರ್ತರನ್ನು ಗಣ್ಯರು ಸತ್ಕರಿಸಿ, ಗೌರವಿಸಿದರು.
ವೇದಿಕೆಯಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಗುರುಸಿದ್ದಪ್ಪ ಪೂಜೇರಿ, ಮೂಡಲಗಿ ತಾಲೂಕು ಅಧ್ಯಕ್ಷ ಕೃಷ್ಣ ಗಿರೇನ್ನವರ, ತಾಲೂಕು ಪ್ರಧಾನ ಕಾರ್ಯದರ್ಶಿ ಸಾದಿಕ ಹಲ್ಯಾಳ, ಬಿ.ಯು ಚನ್ನಬಸಪ್ಪ , ಶರಣ ಸಂಸ್ಕೃತಿ ಉತ್ಸವ ಅಧ್ಯಕ್ಷ ಸಂತೋಷ ಸೋನವಾಲಕರ, ಕೋಶಾಧ್ಯಕ್ಷ ಬಸವರಾಜ ಮುರಗೋಡ ಉಪಸ್ಥಿತರಿದ್ದರು