RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಆರ್ಥಿಕವಾಗಿ, ಸಮಾಜಿಕವಾಗಿ ಮಹಿಳೆಯರು ಇಂದು ಶಶಕ್ತವಾಗಬೇಕಾದ ಅವಶ್ಯಕತೆ ಇದೆ: ಐಎಎಸ್ ಅಧಿಕಾರಿ ಡಾ.ತನು ಜೈನ್

ಗೋಕಾಕ:ಆರ್ಥಿಕವಾಗಿ, ಸಮಾಜಿಕವಾಗಿ ಮಹಿಳೆಯರು ಇಂದು ಶಶಕ್ತವಾಗಬೇಕಾದ ಅವಶ್ಯಕತೆ ಇದೆ: ಐಎಎಸ್ ಅಧಿಕಾರಿ ಡಾ.ತನು ಜೈನ್ 

ಆರ್ಥಿಕವಾಗಿ, ಸಮಾಜಿಕವಾಗಿ ಮಹಿಳೆಯರು ಇಂದು ಶಶಕ್ತವಾಗಬೇಕಾದ ಅವಶ್ಯಕತೆ ಇದೆ: ಐಎಎಸ್ ಅಧಿಕಾರಿ ಡಾ.ತನು ಜೈನ್

ಗೋಕಾಕ ಮಾ 3 : ಬಸವಣ್ಣನವರಂತಹ ಸಂತರು ಜಗತ್ತಿನಲ್ಲಿ ಅತಿ ವಿರಳ ಮಹಿಳೆಯು ಒಬ್ಬ ಮನುಷ್ಯ ಅವಳನ್ನು ಸಹ ಸಮಾಜ ಗೌರವಿಸಬೇಕು ಎಂದು ಹೇಳಿರುವ ಬಸವಣ್ಣನವರು ಆದರ್ಶ ಪಾಲಿಸಬೇಕು ಎಂದು ಐಎಎಸ್ ಅಧಿಕಾರಿ ಡಾ‌.ತನು ಜೈನ ಹೇಳಿದರು

ರವಿವಾರದಂದು ಶೂನ್ಯ ಸಂಪಾದನ ಮಠದ ವತಿಯಿಂದ ಹಮ್ಮಿಕೊಂಡ 19 ನೇ ಶರಣ ಸಂಸ್ಕೃತಿ ಉತ್ಸವದ ಮೂರನೇ ದಿನದ ಮಹಿಳಾ ಸಮಾವೇಶವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ವಚನಗಳನ್ನು ಇಂದು ಸರಕಾರಗಳು ಶಾಲಾ ಮಕ್ಕಳ ಶಿಲಾಭ್ಯಾಸದಲ್ಲಿ ಅಳವಡಿಸಬೇಕು.12ನೇ ಶತಮಾನದಲ್ಲಿ ಶರಣರು ಹೇಳಿದ ಮಾತುಗಳು ಇಂದು ನಿಜವಾಗುತ್ತಿವೆ. ದೇಶದಲ್ಲಿ ಮಹಿಳಾ ದಿನಾಚರಣೆ ಆಚರಣೆ ಮಾಡುವ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿದ ಅವರು ಇಂದು ಮಹಿಳೆಯರು ಸಭಲರಾಗಿದ್ದರು ಸಹ ಇಂತಹ ದಿನಾಚರಣೆಗಳನ್ನು ಆಚರಣೆ ಮಾಡುವುದರಲ್ಲಿ ಅರ್ಥವಿಲ್ಲದು. ಮಹಿಳೆಯರು ಇಂದು ತಮ್ಮ ಯೋಚನೆಗಳನ್ನು ಬದಲಾಯಿಸಬೇಕಾಗಿದೆ. ಸಮಾಜ ಮಹಿಳೆಯರನ್ನು ಹಲವಾರು ಬಂಧನಗಳನ್ನು ಹಾಕಿರುತ್ತಾರೆ ಅವುಗಳನ್ನು ಎದುರಿಸಿ ನಾವು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದ ಅವರು ಮಗ ಮತ್ತು ಮಗಳನ್ನು ಪಾಲಕರು ಬೇಧವಿಲ್ಲದೆ ಬೆಳೆಸಬೇಕು.
ಆರ್ಥಿಕವಾಗಿ, ಸಮಾಜಿಕವಾಗಿ ಮಹಿಳೆಯರು ಇಂದು ಶಶಕ್ತರಾಗಬೇಕಾದ ಅವಶ್ಯಕತೆ ಇದೆ. ಮಹಿಳೆಯರು ಇಂದು ಆ ದಿಸೆಯಲ್ಲಿ ನಡೆಯಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಲೈಂಗಿಕ ಅಲ್ಪಸಂಖ್ಯಾತ ಹಕ್ಕುಗಳ ಹೋರಾಟಗಾರ್ತಿ ಶ್ರೀಮತಿ ಅಕ್ಕಯ್ ಪದ್ಮಶಾಲಿ ಮನುಷ್ಯನನ್ನು ಮನುಷ್ಯನಾಗಿ ನೋಡುವುದೇ ಬಸವಧರ್ಮ. ಗಂಡವಾಗಿ ಹುಟ್ಟಿ, ಹೆಣ್ಣಾಗಿ ಬದಲಾವಣೆಯಾಗುವುದು ಅಷ್ಟು ಸುಲಭವಲ್ಲ ಎಂದು ನನಗೆ ನನ್ನ ತಂದೆ ಹೇಳಿದರು ಆದರೆ ನಾನು ಅದನ್ನು ಮೆಟ್ಟಿನಿಂತು ಬದುಕಿ ಬಾಳಿ ಸಮಾಜದಲ್ಲಿ ಗೌರವವನ್ನು ಸಂಪಾದಿಸಿದ್ದೇನೆ. ಸನಾತಧರ್ಮ, ಧರ್ಮ ಗ್ರಂಥಗಳು ಯಾವತ್ತು ಯಾರನ್ನು ದ್ವೇಷಿಸಬಾರದು‌ ಎಂದು ಹೇಳಿಲ್ಲಾ ಆದರೆ ಸಮಾಜ ಅದನ್ನು ಇನ್ನು ಒಪ್ಪಿಲ್ಲದಿರುವುದು ತುಂಬಾ ಶೋಚನೀಯ ಎಂದ ಅವರು ಬಸವಣ್ಣನವರ 12 ನೇ ಶತಮಾನದ ಅನುಭವ ಮಂಟ್ಟಪ್ಪ ಇಂದು ಶರಣ ಸಂಸ್ಕೃತಿ ಉತ್ಸವ ಸಾಕ್ಷಿಯಾಗಿದೆ ಬಸವಣ್ಣನವರ ಅನುಭವ ಮಂಟಪದಲ್ಲಿ ಜನರ ವೇಧನಗಳಿಗೆ ಮನ್ನಣೆ ಸಿಗುತಿತ್ತು ಆದರೆ ಇಂದು ಯಾರ ವಿಚಾರಗಳಿಗೆ ,ವೇದನೆಗಳಿಗೆ ಮನ್ನಣೆ ಸಿಗುತ್ತಿಲ್ಲ ಇದು ವಿಷಾದನೀಯ. ನಾನು ನನ್ನಗೋಸ್ಕರ ಬದುಕುತ್ತೇನೆ ಎನ್ನುವುದನ್ನು ಇಂದು ಮಹಿಳೆಯರು ಧೈರ್ಯವಾಗಿ ಹೇಳಬೇಕು.ಸಾಂಸ್ಕೃತಿವಾಗಿ ನಾವು ಬೇಕು , ಸಾಮಾಜಿಕವಾಗಿ ನಾವು ಬೇಡವಾ ಎಂದು ಪ್ರಶ್ನಿಸಿ ಅವರು ಮಹಿಳೆ ಇಂದು ಶಕ್ತಿಯುತವಾದ ಜೀವನ ಬದುಕಬೇಕು ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ದಿವ್ಯ ಸಾನಿಧ್ಯವನ್ನು ಬೆಂಗಳೂರು ಬೇಲಿಮಠ ಶ್ರೀ ಶಿವಾನುಭವ ಚರಮೂರ್ತಿ ಮಹಾಸ್ವಾಮಿಗಳು , ಅಂಕಲಗಿ- ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿ ಆರ್ಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈಯುತ್ತಿರುವ ಮಹಿಳೆಯರನ್ನು ಸತ್ಕರಿಸಿ,ಗೌರವಿಸಲಾಯಿತು.

ವೇದಿಕೆಯಲ್ಲಿ ಶ್ರೀಮತಿ ಎಮ್.ಪಿ.ಓಂಕಾರೇಶ್ವರಿ, ಅನಿತಾ ನಿಂಬರಗಿ, ಶ್ರೀಮತಿ ಡಾ.ನಿರ್ಮಲಾ ಭಟ್ಟಲ್, ಶ್ರೀಮತಿ ಮಂಗಲಾ ಸನದಿ, ರಾಜೇಶ್ವರಿ ಈರನಟ್ಟಿ, ಶ್ರೀಮತಿ ಶೈಲಾ ಬಿದರಿ, ಸಂತೋಷ ಸೋನವಾಲಕರ ಉಪಸ್ಥಿತರಿದ್ದರು.

Related posts: