ಗೋಕಾಕ :ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಇಂದು ಚರ್ಚೆಯಾಗಬೇಕು : ನಟ, ನಿರ್ದೇಶಕ ಪ್ರಕಾಶ ಬೆಳವಾಡಿ
ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಇಂದು ಚರ್ಚೆಯಾಗಬೇಕು : ನಟ, ನಿರ್ದೇಶಕ ಪ್ರಕಾಶ ಬೆಳವಾಡಿ
ಗೋಕಾಕ ಮಾ 4 : ಮಾನವರು ನೆಮ್ಮದಿಯಾಗಿ ಬದುಕಲು ಅವಶ್ಯಕತೆ ಇರುವ.ಮೂಲಭೂತ ಸೌಲಭ್ಯಗಳ ರಕ್ಷಣೆಯಾಗಬೇಕಾಗಿದೆ ಎಂದು ನಿರ್ದೇಶಕ, ನಟ ಪ್ರಕಾಶ ಬೆಳವಾಡಿ ಹೇಳಿದರು
ಸೋಮವಾರದಂದು ಶೂನ್ಯ ಸಂಪಾದನ ಮಠದ ವತಿಯಿಂದ ಹಮ್ಮಿಕೊಂಡ 19 ನೇ ಶರಣ ಸಂಸ್ಕೃತಿ ಉತ್ಸವದ ನಾಲ್ಕನೇ ದಿನದ ಯುವ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ 1, 700 ಅಡಿ ಕೆಳಗೆ ನೀರು ಹೋಗಿದೆ ಯಾರೇ ಅದನ್ನು ಕೂಡಿದರು ಅಪಾಯ. ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಇಂದು ಚರ್ಚೆಯಾಗಬೇಕು ಅದನ್ನು ಬಿಟ್ಟು ನಮ್ಮ ದೇಶ , ರಾಜ್ಯ ಬೇರೆಕಡೆ ಹೋರಟಿದೆ ಎಂದು ಬೆಸರ ವ್ಯಕ್ತಪಡಿಸಿದರು.
ಭಾರತದ ಜನಸಂಖ್ಯೆ ಪ್ರಸ್ತುತ ಚೀನಾವನ್ನು ಮೀರಿಸಿದೆ. ಜಗತ್ತಿನಲ್ಲಿ ನೀರು ಮತ್ತು ಭೂಮಿಯ ಸಲುವಾಗಿ ಜಗಳಗಳು ಶುರುವಾಗಿವೆ.
ಯಾವುದೇ ಜಾತಿ ಉಪಜಾತಿ ಮತ್ತು ಧರ್ಮಗಳನ್ನು ನಾವು ಪ್ರತಿನಿಧಿಸಲಿ ಆದರೆ ಕೂಡಿಯುವ ನೀರು ಒಂದೆ.
ನೀರು ಭೂಮಿಯ ಆಳಕ್ಕೆ ಹೋದಾಗ ಒಳಗಿನಿಂದ ಹೇವಿ ಮೆಟಲ್ ,ಯೂರೇನಿಯಂ ಬರುತ್ತದೆ ಅದನ್ನು ಕುಡಿದರೆ ಮನುಷ್ಯನ ದೇಹ ಅಪಾಯಕಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತದೆ.ಇದಲ್ಲದೆ ದೇಶ ಇನ್ನೂ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಇವುಗಳ ಬಗ್ಗೆ ಸರಕಾರ ಗಂಭೀರವಾಗಿ ಚಿಂತನೆ ನಡೆಯಿಸಿ ಅವುಗಳಿಗೆ ಶಾಶ್ವತ ಪರಿಹಾರ ದೊರಕಿಸಕೊಡಬೇಕಾಗಿದೆ. ಬೆಂಗಳೂರಿನ ಭಾಗದಲ್ಲಿ ಸರಕಾರ ಎಲ್ಲಾ ಟ್ಯಾಂಕರ್ ವಶಪಡಿಸಿಕೊಂಡು ಸ್ವತಃ ಸರಬರಾಜು ಮಾಡುತ್ತೇವೆ ಎಂದಿದ್ದಾರೆ. ಇದು ನಮ್ಮ ಬೇಜವಾಬ್ದಾರಿಯಿಂದ ಆಗಿದೆ. ಕಾವೇರಿಯಿಂದ ಸಾಕಷ್ಟು ನೀರು ಬಂದರು ಸಹ ನಾವು ಅದು ಸರಿಯಾಗಿ ಸದ್ಬಳಕೆಯಾಗುತ್ತಿಲ್ಲ. ನಾವು ಮುಂದೆ ಹೀಗೆ ಬದುಕಲಿಕ್ಕೆ ಆಗುವುದಿಲ್ಲ. ಮಾನವನ ಬೇಜವಾಬ್ದಾರಿಯಿಂದ ಇಂದು ಇಡೀ ಜಗತ್ತಿಗೆ ಅಪಾಯ ಎದುರಿಸುವ ಸ್ಥಿತಿಯಲ್ಲಿದೆ ಎಂದ ಅವರು ಶಿಕ್ಷಣ ಪಡೆದ ವಿದ್ಯಾರ್ಥಿಗಳು ಅದರ ಲಾಭ ಪಡೆಯಲು ಅನಿವಾರ್ಯವಾಗಿ ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗಬೇಕು ಅಲ್ಲಿ ಪರಿಸರ, ನೀರು ಸೇರಿದಂತೆ ಎಲ್ಲವೂ ವಿಷವಾಗಿದೆ. ಇಷ್ಟೆಲ್ಲಾ ಬುದ್ದಿ ಇದ್ದು ನಾವು ಏನುಮಾಡದ ಪರಿಸ್ಥಿತಿಯಲ್ಲಿ ಇದ್ದೇವೆ.ನಾವು ಮನುಷ್ಯರಾಗಿ ಸ್ವಾಭಿಮಾನದಿಂದ ಬದುಕುವುದು ಕಷ್ಟವಾಗಿದೆ. ತಂತ್ರಜ್ಞಾನವನ್ನು ಮಾನವ ಸರಿಯಾಗಿ ಬಳಕೆಮಾಡಿಕೊಂಡು ಬಾಳಬೇಕಾಗಿದೆ ಇಲ್ಲದಿದ್ದರೆ ಮುಂದೆ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದ ವಿಷಾದ ವ್ಯಕ್ತಪಡಿಸಿದ ಅವರು ಕಾಲ ಬದಲಾದಂತೆ ಅಭ್ಯಾಸ ಮಾಡುವ ರೀತಿಯು ಬದಲಾಗಬೇಕು ಅಂದಾಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಇಂದಿನ ಕಾಲದಲ್ಲಿ ಪಠ್ಯಗಳನ್ನು ಹೊರತು ಪಡೆಸಿ ಹೆಚ್ಚಿನ ಅಂಶಗಳನ್ನು ಗ್ರಹಿಸಿ ಕೊಳ್ಳಬೇಕು.
ನಾನು ರಂಗಭೂಮಿಯಲ್ಲಿ ನಟನೆ ಮಾಡುತ್ತಿದೆ, ಸಾಲ ಇರುವ ಕಾರಣ ಅದನ್ನು ತಿರಿಸಲು ಸಿನಿಮಾ ರಂಗಕ್ಕೆ ಬಂದು ನಟನಾದೆ . ಇಂದು ಸಿನೆಮಾ ರಂಗದಲ್ಲಿ ಕಥೆ ಹೇಳುವಾಗ ಅದು ಬೇರೆ ಇರುತ್ತದೆ. ವಾಸ್ತವವಾಗಿ ನಟನೆ ಮಾಡುವಾಗ ಅದು ಬೇರನೆ ಇರುತ್ತದೆ.
ಇಂದಿನ ಆದುನಿಕ ಯುಗದಲ್ಲಿ ಜನರು ಮಾಡುವ ಕಾರ್ಯವನ್ನು ರೋಬೋಟ್ ಮಾಡುತ್ತಿದ್ದೆ. ಇಐನಂತಹ ತಂತ್ರಜ್ಞಾನ ಕಾಲದಲ್ಲಿ ಮುಂದೆ ಯಾವ ಕೆಲಸವೂ ಶಾಶ್ವತ ಅಲ್ಲ ಯುವಕರು ನಿರುದ್ಯೋಗ ಯಾಗುವ ಅಪಾಯವಿದ್ದು ಇದರ ಕುರಿತು ಚಿಂತನೆ ಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಮಾತನಾಡಿ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿವಿರೇಶಾನಂದ ಸರಸ್ವತಿ ಭಾತರದ ಬಹುದೊಡ್ಡ ಶತ್ರು ಇಂದಿನ ಪ್ರಚಲಿತವಿರುವ ಶಿಕ್ಷಣ ಪದ್ಧತಿ . ಭಾರತದ ಇಂದಿನ ಶಿಕ್ಷಣ ಪದ್ಧತಿ ಮಕ್ಕಳನ್ನು ನರಿಗಳು,ತೊಳಗಾಗಿ ಪರಿವರ್ತಿಸುತ್ತಿದೆ. ಭಾರತೀಯ ಮಹಾನ್ ಮೌಲ್ಯಗಳನ್ನು ನಾವು ಅರ್ಥ ಮಾಡಿಕೊಳ್ಳದ ಪರಿಣಾಮ ಇಂದು ನಾವು ವಿನಾಶವನ್ನು ಎದುರಿಸುತ್ತಿದ್ದೇವೆ. ಮನುಷ್ಯ ಬಹಿರಂಗ ಪ್ರಪಂಚದಲ್ಲಿ ಸಾಕಷ್ಟು ಸಾಧನೆ ಮಾಡಿದರೆ ಅವನ ಅಂತರಂಗ ಖಾಲಿಯಾಗಿದೆ ಎಂದು ಬೇಸರ ಖೇಧ ವ್ಯಕ್ತಪಡಿಸಿದರು. ಇಂದು ಮನುಷ್ಯ ಮನುಷ್ಯನನ್ನು ನಂಬುವ ಸ್ಥಿತಿಯಲ್ಲಿ ಇಲ್ಲಾ ಎಂದ ಅವರು ಇಂದಿನ ಸುಶಿಕ್ಷಿತ ಮಕ್ಕಳು ಬೇಜವಾಬ್ದಾರಿಯಾಗುತ್ತಿದ್ದಾರೆ ಇದು ಬದಲಾಗಬೇಕು .ನಾವು ಸರಿಯಾದ ಮಾದರಿಯನ್ನು ನಮ್ಮ ಮಕ್ಕಳಿಗೆ ಕೋಡದ್ದಿದರೆ ವ್ತಕ್ತಿಯಾಗಿ ಬದುಕುವುದು ಕಷ್ಟವಾಗಬಹುದು ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಶರಣ ಸಂಸ್ಕೃತಿ ಉತ್ಸವದ ಹೆಸರಿನಲ್ಲಿ ಒಳ್ಳೊಳ್ಳೆಯ ಸಾಧರಕರನ್ನು ಕರೆಸಿ ನಾಲ್ಕು ದಿನ ಜ್ಞಾನದಾಸೋಹವನ್ನು ನೀಡಲು ಉದ್ದೇಶ ಹೊಂದಿ ನಾವು ಪ್ರತಿವರ್ಷ ಈ ಉತ್ಸವ ಮಾಡುತ್ತಿದ್ದೇವೆ ಇದರ ಸದುಪಯೋಗ ಪಡೆದುಕೊಂಡು ಪಾವನವಾಗಬೇಕು ಎಂದು ಹೇಳಿದರು.
ಮುಂಜಾನೆ ಅಭಿಷೇಕ , ಮುತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ವಚನ ತಾಂಡೋಲೆ ಪ್ರತಿಗಳ ಹಾಗೂ ವಿಶ್ವ ಗುರ ಬಸವಣ್ಣನವರ ಭಾವಚಿತ್ರ ಮತ್ತು ಪಲ್ಲಕ್ಕಿ ಉತ್ಸವವು ಜರುಗಿತು.
ಕಾರ್ಯಕ್ರಮದ ಸಾನಿಧ್ಯವನ್ನು ಜಡಿಸಿದ್ದೇಶ್ವರ ಮಠ ಸುಣದೋಳಿಯ ಶಿವಾನಂದ ಮಹಾಸ್ವಾಮಿಗಳು ಮತ್ತು ಶಿವಲಿಂಗೇಶ್ವರ ಹೂಲಿಕಟ್ಟಿಯ ಕುಮಾರ್ ಮಹಾಸ್ವಾಮಿಗಳು ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಸಾಧಕರಿಗೆ ಸತ್ಕರಿಸಿ ,ಗೌರವಿಸಲಾಯಿತು.
ವೇದಿಕೆಯಲ್ಲಿ ಡಾ. ಮಹಾಂತೇಶ ಕಡಾಡಿ, ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕೋಟಗಿ, ಸಮಿತಿಯ ಅಧ್ಯಕ್ಷ ಸಂತೋಷ ಸೋನವಾಲಕರ ಉಪಸ್ಥಿತರಿದ್ದರು.