ಗೋಕಾಕ:ನಗರದ ಅಂಗಡಿ,ಮುಗ್ಗಟ್ಟು, ಆಸ್ಪತ್ರೆಗಳ ಮೇಲೆ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಅಳವಡಿಸಿ : ಬಸವರಾಜ ಖಾನಪ್ಪನವರ ಆಗ್ರಹ : ಕನ್ನಡ ನಾಮಫಲಕ ಆಳವಡಸಿ ಅಂಗಡಿ ಮಾಲೀಕರಿಗೆ ಕರವೇ ಪ್ರಮಾಣ ಪತ್ರ ವಿತರಣೆ
ನಗರದ ಅಂಗಡಿ,ಮುಗ್ಗಟ್ಟು, ಆಸ್ಪತ್ರೆಗಳ ಮೇಲೆ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಅಳವಡಿಸಿ : ಬಸವರಾಜ ಖಾನಪ್ಪನವರ ಆಗ್ರಹ : ಕನ್ನಡ ನಾಮಫಲಕ ಆಳವಡಸಿ ಅಂಗಡಿ ಮಾಲೀಕರಿಗೆ ಕರವೇ ಪ್ರಮಾಣ ಪತ್ರ ವಿತರಣೆ
ಗೋಕಾಕ ಮಾ 12 : ರಾಜ್ಯ ಸರಕಾರದ ಆದೇಶದನ್ವಯ ನಗರದ ಅಂಗಡಿ,ಮುಗ್ಗಟ್ಟುಗಳ ಮೇಲೆ ಅಳವಡಿಸಿರುವ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲಿಯೇ ಅಳವಡಿಸುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕವು ಮಂಗಳವಾರದಂದು ನಗರದಲ್ಲಿ ಜಾಗೃತಿ ಜಾಥ ಹಮ್ಮಿಕೊಂಡು ಈಗಾಗಲೇ ಅಂಗಡಿ ,ಮುಗ್ಗಟ್ಟು, ಹೋಟೆಲಗಳ ಮೇಲೆ ಕನ್ನಡ ನಾಮಫಲಕ ಅಳವಡಿಸಿದ ಅಂಗಡಿ ಮಾಲೀಕರಿಗೆ ಕರವೇಯಿಂದ ಅಭಿನಂದನಾ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಅಂಗಡಿ , ಮುಗ್ಗಟ್ಟು ಮೇಲೆ ಕನ್ನಡ ನಾಮಫಲಕ ಅಳವಡಿಸುವಂತೆ ಸರಕಾರ ಆದೇಶ ಹೊರಡಿಸಿದ್ದು, ನಗರದ ಎಲ್ಲಾ ಅಂಗಡಿಕಾರರು ತಮ್ಮ ಅಂಗಡಿ,ಮುಗ್ಗಟ್ಟು, ಆಸ್ಪತ್ರೆ, ಹೋಟೆಲಗಳ ಮೇಲೆ ಮಾ 15ರ ಒಳಗಾಗಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕು. ಈಗಾಗಲೇ ಗೋಕಾಕ್ ನಗರಸಭೆ ವತಿಯಿಂದ ಹಲವು ಬಾರಿ ನಗರದಲ್ಲಿ ಸಂಚರಿಸಿ ಕನ್ನಡ ಭಾಷೆಯನ್ನು ಅಳವಡಸದ ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಿ , ಕನ್ನಡ ಭಾಷೆ ಬಳಸದ ಅಂಗಡಿಗಳ ನಾಮಫಲಕಗಳನ್ನು ತೆರವುಗೊಳಿಸಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ನಗರಸಭೆಯ ಎಚ್ಚರಿಕೆ ಎಚ್ಚೆತ್ತ ಹಲವಾರು ಅಂಗಡಿಕಾರರು ಕನ್ನಡ ಭಾಷೆ ನಾಮಫಲಕ ಅಳವಡಿಸಿ ಸಹಕರಿಸಿದ್ದಾರೆ. ಇನ್ನು ಕೆಲವರು ಅಳವಡಿಸಿಲ್ಲ ಕನ್ನಡ ನಾಮಫಲಕ ಅಳವಡಿಸದ ಅಂಗಡಿಕಾರರು ಸರಕಾರದ ಆದೇಶಧನ್ವಯ ಮಾ 15 ರ ಒಳಗೆ ಕನ್ನಡ ನಾಮಫಲಕಗಳನ್ನು ಒಳವಡಿಸಬೇಕು ಇಲ್ಲದಿದ್ದರೆ ಅಂತಹ ಅಂಗಡಿ ನಾಮಫಲಕಗಳನ್ನು ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇಯ ಸಾದಿಕ ಹಲ್ಯಾಳ, ದೀಪಕ ಹಂಜಿ, ಪಪ್ಪು ಹಂದಿಗುಂದ, ಹನೀಫ್ ಸನದಿ, ಬಸವರಾಜ ಗಾಡಿವಡ್ಡರ, ಅಶೋಕ ಬಂಡಿವಡ್ಡರ, ಮಹಾದೇವ ಮಕ್ಖಳಗೇರಿ, ಮಲ್ಲು ಸಂಪಗಾರ, ಮಾರುತಿ ಬಂಡಿವಡ್ಡರ, ಮಂಜು ಪ್ರಭುನಟ್ಟಿ, ಸುರೇಶ ಬಂಡಿವಡ್ಡರ, ದುರ್ಗಪ್ಪ ಬಂಡಿವಡ್ಡರ , ಕಿಷ್ಣಾ ಬಂಡಿವಡ್ಡರ, ಕಿರಣ ತೋಗರಿ, ಶಾನೂರ ನಧಾಪ, ಸಂತೋಪ ಕೋಲಕಾರ, ಪ್ರತೀಕ ಪಾಟೀಲ, ಸತ್ತಾರ ಬೇಪಾರಿ, ಸುಭಾನಿ ಚೌಗಲಾ, ರಾಮ ಕುಡ್ಡೇಮ್ಮಿ, ಆನಂದ ಖಾನಪ್ಪನವರ, ರೋಹಿತ್ ಉಪ್ಪಾರ, ಶಾನೂರ ಹಕ್ಕಿ, ಉದಯ ಕಿಲಾರಿ, ಸಿದ್ಜು ಖಾನಪ್ಪನವರ, ದುಂಡಪ್ಪ ಪಾಟೀಲ, ಲಕ್ಷ್ಮಣ ಹೂಲಿಕಟ್ಟಿ, ಬಸವರಾಜ ಗಾಡಿವಡ್ಡರ, ಕೆಂಪಣ್ಣ ಕಡಕೋಳ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.