RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ದೇಶಕ್ಕಾಗಿ ಏನಾದರೂ ಕೊಡುಗೆ ಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಹೆಣ್ಣು ಸಕಾರಾತ್ಮಕವಾಗಿ ವಿಚಾರ ಮಾಡಿ ಸಾಧಕರಾಗಬೇಕು. : ಕಸ್ತೂರಿ ಭಾವಿ

ಗೋಕಾಕ:ದೇಶಕ್ಕಾಗಿ ಏನಾದರೂ ಕೊಡುಗೆ ಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಹೆಣ್ಣು ಸಕಾರಾತ್ಮಕವಾಗಿ ವಿಚಾರ ಮಾಡಿ ಸಾಧಕರಾಗಬೇಕು. : ಕಸ್ತೂರಿ ಭಾವಿ 

ದೇಶಕ್ಕಾಗಿ ಏನಾದರೂ ಕೊಡುಗೆ ಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಹೆಣ್ಣು ಸಕಾರಾತ್ಮಕವಾಗಿ ವಿಚಾರ ಮಾಡಿ ಸಾಧಕರಾಗಬೇಕು. : ಕಸ್ತೂರಿ ಭಾವಿ

ಗೋಕಾಕ ಮಾ 21 : ಹೆಣ್ಣಾಗಿ ಹುಟ್ಟಿರೊದಕ್ಕೆ ಸಂಕೋಚ ಪಟ್ಟುಕೊಳ್ಳದೆ , ದೇಶಕ್ಕಾಗಿ ಏನಾದರೂ ಕೊಡುಗೆ ಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಹೆಣ್ಣು ಸಕಾರಾತ್ಮಕವಾಗಿ ವಿಚಾರ ಮಾಡಿ ಸಾಧಕರಾಗಬೇಕು ಎಂದು ಬೈಲಹೊಂಗಲನ ಕನ್ನಡಪರ ಹೋರಾಟಗಾರ್ತಿ ಶ್ರೀಮತಿ ಕಸ್ತೂರಿ ಭಾವಿ ಹೇಳಿದರು

ಬುಧವಾರದಂದು ಸಾಯಂಕಾಲ ನಗರದ ಬಸವ ಮಂದಿರದಲ್ಲಿ ಇಲ್ಲಿನ ಭಾವಯಾನ ಮಹಿಳಾ ಸಾಹಿತ್ಯ – ಸಾಂಸ್ಕೃತಿಕ ವೇದಿಕೆಯವರು ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯೂ ಸಹ ಪುರುಷನಷ್ಟೇ ಸಮಾನ ಪಾತ್ರ ವಹಿಸುತ್ತಾಳೆ. ಕುಟುಂಬ ಮತ್ತು ಮಕ್ಕಳು ಬೆಳವಣಿಗೆ ಜಂಜಾಟದಲ್ಲಿ ಸಿಕ್ಕ ಸಮಯವನ್ನು ಸದುಪಯೋಗ ಪಡೆದುಕೊಂಡು ಸಶಕ್ತವನ್ನಾಗಿ ಸಮಾಜ ಕಟ್ಟುವಲ್ಲಿ ಬಹುದೊಡ್ಡ ಪಾತ್ರವನ್ನು ಮಹಿಳೆ ನಿರ್ವಹಿಸುತ್ತಾಳೆ‌. ಕನ್ನಡ ಪರ ಹೋರಾಟದ ಸಂದರ್ಭದಲ್ಲಿ ಬೆಳಗಾವಿಯ ಕನ್ನಡದ ಮನಸ್ಸುಗಳು ನನಗೆ ಸಂಪೂರ್ಣ ಸಹಕಾರವನ್ನು ನೀಡಿ ಬೆಳೆಸಿದ್ದರ ಪರಿಣಾಮ ನಾನು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ. ಗಂಡು ಹೆಣ್ಣು ಭೇದವಿಲ್ಲದೆ ಎಲ್ಲರೂ ಕೂಡಿಕೊಂಡು ಸಧೃಡ ಸಮಾಜ ನಿರ್ಮಿಸುವಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾವಯಾನ ವೇದಿಕೆಯ ಡಾ.ಮಹಾನಂದಾ ಪಾಟೀಲ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಶ್ರೀಮತಿ ಯಲವ್ವ ಬಡೆವ್ವಗೋಳ ಮತ್ತು ಮಹಿಳಾ ಪೌರಕಾರ್ಮಿಕ ಶ್ರೀಮತಿ ಶಾಂತವ್ವ ಹರಿಜನ ಅವರನ್ನು ಸತ್ಕರಿಸಿ, ಗೌರವಿಸಲಾಯಿತು.

ವೇದಿಕೆಯಲ್ಲಿ ಭಾವಯಾನ ವೇದಿಕೆಯ ಭಾರತಿ ಮದಭಾವಿ , ಪುಷ್ಪಾ ಮುರಗೋಡ, ಶಕುಂತಲಾ ಹಿರೇಮಠ ಉಪಸ್ಥಿತರಿದ್ದರು.

Related posts: