ಗೋಕಾಕ:ರೈತರು ತಮ್ಮ ಜಾನುವಾರುಗಳ ಸಂರಕ್ಷಣೆಗೆ ಲಸಿಕೆ ಹಾಕಿಸಿ : ಡಾ.ಮೋಹನ ಕಮತ
ರೈತರು ತಮ್ಮ ಜಾನುವಾರುಗಳ ಸಂರಕ್ಷಣೆಗೆ ಲಸಿಕೆ ಹಾಕಿಸಿ : ಡಾ.ಮೋಹನ ಕಮತ
ಗೋಕಾಕ ಏ 1 : ಕಾಲು ಬಾಯಿ ರೋಗ ಲಸಿಕಾ ಅಭಿಯಾನವನ್ನು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು ರೈತರು ತಮ್ಮ ಜಾನುವಾರುಗಳ ಸಂರಕ್ಷಣೆಗೆ ಲಸಿಕೆ ಹಾಕಿಸುವಂತೆ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ ಹೇಳಿದರು.
ಅವರು, ಸೋಮವಾರದಂದು 5ನೇ ಸುತ್ತಿನ ಕಾಲುಬಾಯಿ ರೋಗದ ವಿರುದ್ಧ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದಿ.1 ರಿಂದ 30ರ ವರೆಗೆ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಎತ್ತು, ಹೋರಿ, ಆಕಳು, ಎಮ್ಮೆ ಸೇರಿದಂತೆ ಇತರೆ ಪ್ರಾಣಿಗಳಲ್ಲಿ ಜ್ವರ, ಬಾಯಿಯಲ್ಲಿ ಹುಣ್ಣು, ಜೊಲ್ಲು ಸೋರುವದು, ಕಾಲು ಕುಂಟುವದು, ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುವದು ಈ ರೋಗದ ಲಕ್ಷಣಗಳಾಗಿದ್ದು ಕಾಲು ಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆಯೊಂದೆ ಮಾರ್ಗವಾಗಿದೆ. ಜಾನುವರುಗಳಿಗೆ ರೋಗ ಹರಡದಂತೆ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸಿದರು.
ತಾಲೂಕಿಗೆ ಒಂದು ಲಕ್ಷ ಡೋಸ್ ಲಸಿಕೆ ಸರಬರಾಜು ಆಗಿದ್ದು 21 ತಂಡಗಳನ್ನೊಳಗೊಂಡ ಒಟ್ಟು 68 ಜನ ಲಸಿಕೆದಾರರು ಪ್ರತಿ ಹಳ್ಳಿಹಳ್ಳಿಗಳಿಗೆ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ಲಸಿಕೆ ಹಾಕುವ ಸಂದರ್ಭದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದಲ್ಲಿ ಲಸಿಕೆದಾರರಿಗೆ ತುರ್ತು ಚಿಕಿತ್ಸಾ ಕೀಟ್ ವಿತರಿಸಲಾಲುವದು. ಕಾಲುಬಾಯಿ ರೋಗದ ಲಸಿಕೆ ಜೊತೆಗೆ ರೇಬೀಸ್ ಲಸಿಕೆಯನ್ನು ರೈತ ಭಾಂದವರು ಸಾಕು ನಾಯಿ, ಬೀದಿ ನಾಯಿಗಳಿಗೆ ಹಾಕಿಸಿ ಈ ಅಭಿಯಾನದಲ್ಲಿ ಸಕ್ರೀಯವಾಗಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದು ಯಶಸ್ವಿಗೊಳಿಸುವಂತೆ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪಶು ವೈದ್ಯಕೀಯ ಇಲಾಖೆಯ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.