ಗೋಕಾಕ:ಮತದಾನ ಜಾಗೃತಿ: ಬೈಕ್ ರ್ಯಾಲಿಗೆ ಚಾಲನೆ
ಮತದಾನ ಜಾಗೃತಿ: ಬೈಕ್ ರ್ಯಾಲಿಗೆ ಚಾಲನೆ
ಗೋಕಾಕ ಏ 5 : ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯತ್ರ ಹೆಸ್ಕಾ ಹಾಗೂ ತಾಲೂಕು ಸ್ವೀಪ್ ಸಮಿತಿ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ನಗರದ ತಾಲೂಕು ಪಂಚಾಯತ್ ಆವರಣದಲ್ಲಿ ಹಮ್ಮಿಕೊಂಡ ಬೈಕ್ ರ್ಯಾಲಿಗೆ ತಹಶೀಲ್ದಾರ್ ಡಾ.ಮೋಹನ ಭಸ್ಮೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಇಒ ಜಿ.ಬಿ.ಬಳಗಾರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜಹೀರ ಉಲ್ಲ ಹಸನ , ನಗರಸಭೆ ಪೌರಾಯುಕ್ತ ರಮೇಶ ಜಾಧವ್, ಅಧಿಕಾರಿಗಳಾದ ಎಂ.ಎಚ್. ಗಜಾಕೋಶ, ಜಯೇಶ ತಾಂಬೂಳೆ, ಗಣಾಚಾರಿ ಸೇರಿದಂತೆ ಹೆಸ್ಕಾ ಮತ್ತು ಶಿಕ್ಷಣ ಇಲಾಖೆಯ ಅನೇಕರು ಉಪಸ್ಥಿತರಿದ್ದರು.