RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಚುನಾವಣಾ ಕರ್ತವ್ಯದಿಂದ ಕೆಲವರಿಗೆ ವಿನಾಯ್ತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರ ನೌಕರರ ಸಂಘದಿಂದ ಮನವಿ

ಗೋಕಾಕ:ಚುನಾವಣಾ ಕರ್ತವ್ಯದಿಂದ ಕೆಲವರಿಗೆ ವಿನಾಯ್ತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರ ನೌಕರರ ಸಂಘದಿಂದ ಮನವಿ 

ಚುನಾವಣಾ ಕರ್ತವ್ಯದಿಂದ ಕೆಲವರಿಗೆ ವಿನಾಯ್ತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರ ನೌಕರರ ಸಂಘದಿಂದ ಮನವಿ
ಗೋಕಾಕ ಏ 7 : ಚುನಾವಣಾ ಕರ್ತವ್ಯದಿಂದ ಕೆಲವರಿಗೆ ವಿನಾಯ್ತಿ ನೀಡುವಂತೆ ಹಾಗೂ ಕೆಲವರ ಪಿ.ಆರ್.ಓ ಆದೇಶಗಳನ್ನು ಪಿ.ಓ ಗಳಾಗಿ ಬದಲಾಯಿಸುವಂತೆ ಆಗ್ರಹಿಸಿ ಶನಿವಾರದಂದು ಇಲ್ಲಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.

ತೊಂದರೆಯಲ್ಲಿರುವ ನೌಕರರಿಗೆ ಚುನಾವಣಾ ಕರ್ತವ್ಯದಿಂದ ವಿನಾಯ್ತಿ ನೀಡುವದು ಹಾಗೂ ಮೊದಲ ಬಾರಿ ಪಿ.ಆರ್.ಓ ಆದೇಶ ಬಂದ ನೌಕರರಿಗೆ ಪಿ.ಓ ಗಳಾಗಿ ಆದೇಶಗಳು ಬಂದಿದ್ದು, ಅದನ್ನು ಬದಲಿಸಬೇಕು. ಕೆಲವರು ತೀವ್ರತರ ಕಾಯಿಲೆ ಇರುವ ನೌಕರರು.
ಗರ್ಭಿಣಿಯರು ಹಾಗೂ ಒಂದು ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ಮಹಿಳಾ ನೌಕರರು, ದೈಹಿಕ ವಿಶೇಷ ಚೇತನ ನೌಕರರು, ನಿವೃತ್ತಿ ಅಂಚಿನಲ್ಲಿರುವವರು.ಪ್ರಸ್ತುತ ಸೇವಾ ಜೇಷ್ಠತೆ ಆಧರಿಸಿ ಪಿ.ಆರ್.ಓ ಆದೇಶಗಳು ಬಂದಿದ್ದು; ಹಲವಾರು ಮಹಿಳಾ ನೌಕರರಿಗೆ ತೊಂದರೆಯಾಗುತ್ತಿದೆ. ಪ್ರತಿ ಸಲದಂತೆ ಹುದ್ದೆ ಆಧರಿಸಿ ಮಹಿಳಾ ನೌಕರರಿಗೆ ಪಿ‌.ಓ -1, ಪಿ‌.ಓ -2 & ಪಿ.ಓ -3 ಆದೇಶಗಳನ್ನು ನೀಡುವದು.ಪಿ.ಆರ್.ಓ ಸೇರಿದಂತೆ ಸ್ಥಾನಿಕವಾಗಿ ಚುನಾವಣಾ ಕರ್ತವ್ಯ ನಿರ್ವಹಿಸುವ ನೌಕರರಿಗೆ ಗುರುತಿನ ಚೀಟಿಯೊಂದಿಗೆ ಕಿಟ್ ವಿತರಿಸಲು ಸಮಸ್ತ ನೌಕರರ ಪರವಾಗಿ ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಬಿ.ಆರ್. ಮುರಗೋಡ, ಆರ್.ಎಂ ಅಗಳನ್ನವರ, ಎನ್.ಟಿ.ಬಡವನ್ನಿ , ಎಸ್.ಎಸ್ ಮಾಳಗಿ, ಎಂ.ಎಂ ಕೊಡೊಳ್ಳಿ, ಎನ್.ಬಿ. ಬಾಗೈಗೊಳ್, ಎಂ.ಎಂ. ಪಾಟೀಲ , ಬಿ.ಎಂ ಶಿವಾಪೂರ , ಎಸ್.ಆರ್.ಮಜ್ಜಗಿ, ಆರ್.ಕೆ ಸನದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

,

Related posts: