RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ನಿರಾಶ್ರಿತ ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರವೇ ಮನವಿ

ಗೋಕಾಕ:ನಿರಾಶ್ರಿತ ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರವೇ ಮನವಿ 

ನಿರಾಶ್ರಿತ ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರವೇ ಮನವಿ

ಗೋಕಾಕ ಎ 15 : ನಿರಾಶ್ರಿತ ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಗೋವಾ ಸರಕಾರಕ್ಕೆ ಒತ್ತಡ ಹೇರುವಂತೆ ಆಗ್ರಹಿಸಿ ಕರವೇ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ಸೋಮವಾರದಂದು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.

ಕಳೆದ ಹಲವಾರು ವರ್ಷಗಳಿಂದ ಗೋವಾದಲ್ಲಿ ವಾಸವಾಗಿರುವ ಕನ್ನಡಿಗರನ್ನು ವಿನಾ ಕಾರಣ ಗೋವಾ ಸರಕಾರ ಮನೆಗಳನ್ನು ತೆರವುಗೊಳಿಸಿ ತೊಂದರೆಯನ್ನು ನೀಡುತ್ತಿರುವುದು ಖಂಡನೀಯವಾಗಿದ್ದು, ಸುಮಾರು 40 ವರ್ಷಗಳಿಂದ ಗೋವಾ ವಾಸ್ಕೋ, ಝರಿ, ಮಡಗಾವ, ಜುವಾರಿ ನಗರ ಹಾಗೂ ಸಾಂಗೋಲ್ಡಾದಲಿ ಸಾವಿರಾರು ಜನ ಕನ್ನಡಿಗರು ಉದ್ಯೋಗಕ್ಕಾಗಿ ಗೋವಾ ರಾಜ್ಯವನ್ನು ಅವಲಂಬಿಸಿದ್ದಾರೆ. ಹೀಗೆ ಗೋವಾದಲ್ಲಿ ಆಶ್ರಯ ಪಡೆದು ಕನ್ನಡಿಗರಿಗೆ ಗೋವಾ ಸರಕಾರ , ವಿದ್ಯುತ್, ನೀರು ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ ಆದರೆ ಇತ್ತೀಚೆಗೆ ಯಾವುದೇ ಮುನ್ನಸೂಚನೆ ಇಲ್ಲದೆ ಸಾಂಗೋಲ್ಡಾದಲಿ ವಾಸಿಸುವ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿ ಯಾವುದೇ ಪುನರ್ವಸತಿ ಕಲ್ಪಿಸಿಲ್ಲಾ ಹಾಗಾಗಿ ಸಾಂಗೋಲ್ಡಾದಲಿ ವಾಸವಿದ್ದ ಕನ್ನಡಿಗರು ಬೀದಿಪಾಲಾಗಿದ್ದಾರೆ . ಆದ್ದರಿಂದ ದಯಾಳುಗಳಾದ ತಾವುಗಳು ತಕ್ಷಣ ಮಧ್ಯೆ ಪ್ರವೇಶಿಸಿ ಕರ್ನಾಟಕ ಒಬ್ಬ ಸಚಿವರನ್ನು ಗೋವಾ ರಾಜ್ಯಕ್ಕೆ ಕಳುಹಿಸಿ ಗೋವಾದಲ್ಲಿ ವಾಸವಾಗಿರುವ ಕನ್ನಡಿಗರ ಹಿತ ಕಾಪಾಡಿ ಅವರಿಗೆ ಗೋವಾ ಸರಕಾರ ಪುನರ್ವಸತಿ ಕಲ್ಪಿಸುವಂತೆ ನೋಡಿಕೋಳ್ಳಬೇಕೆಂದು ಸಮಸ್ತ ಗೋವಾ ಕನ್ನಡಿಗರ ಪರವಾಗಿ ಕರವೇ ಗೋಕಾಕ ತಾಲೂಕು ಘಟಕವು ಮನವಿಯಲ್ಲಿ ವಿನಂತಿಸಿದೆ.

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ನಿಜಾಮ ನಧಾಪ, ಮುಗುಟ ಪೈಲವಾನ, ಶ್ರೀಶೈಲ ಕುಂಬಾರ, ಬಾಹುಬಲಿ ಖಾರೆಪಠಾಣ, ಮಲ್ಲಪ್ಪ ತೃಲಪ್ಪಗೋಳ, ಆಲ್ಲಪ ನಂದಿ, ಸತಾರ ಬೇಪಾರಿ, ಹನುಮಂತ ಅಮ್ಮಣ್ಣಗಿ, ಶಿವಾನಂದ ಖಂಡ್ರೆ , ಚಿದಾನಂದ ಮಲ್ಲನಾಡದವರ, ಮೊಸೀನ ಮಕಾಂದಾರ, ಆನಂದ ಖಾನಪ್ಪನವರ, ಸಿದ್ದು ಖಾನಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts: