RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ

ಗೋಕಾಕ:ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ 

ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ

ಗೋಕಾಕ ಮೇ 21 : ಹುಬ್ಬಳ್ಳಿಯಲ್ಲಿ ನಡೆದ ಯುವತಿ ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕ ತಾಲೂಕ ಶ್ರೀ ಗಂಗಾಮತಸ್ಥರ ಯುವಜನ ಸಂಘ ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಮಿನಿವಿಧಾನಸೌಧದಲ್ಲಿ ಮಂಗಳವಾರದಂದು ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಯಾದ ಕುಮಾರಿ ಅಂಜಲಿ ಅಂಬಿಗೇರ ಇವಳನ್ನು ಭೀಕರವಾಗಿ ಹತ್ಯೆ ಮಾಡಿರುವದನ್ನು ಸಮಾಜವು ತೀವೃವಾಗಿ ಖಂಡಿಸುತ್ತದೆ. ಇದರಿಂದ ನಮ್ಮ ಸಮಾಜಕ್ಕೆ ತುಂಬಾಲರದಷ್ಟು ನಷ್ಟವಾಗಿದೆ. ಸಮಾಜದಲ್ಲಿ ಈ ರೀತಿ ಹಾಡು ಹಗಲೆ ಕೊಲೆಯಾಗುತ್ತಿರುವದು ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಆರೋಪಿಗೆ ಉಗ್ರವಾದ ಮತ್ತು ಕಠೀಣ ಶಿಕ್ಷೆ ವಿಧಿಸದೆ ಇದ್ದಲ್ಲಿ ಉತ್ತೇಜನ ನೀಡಿದಂತಾಗುತ್ತದೆ. ಆರೋಪಿಗೆ ಗಲ್ಲು ಶಿಕ್ಷೆಯಂತಹ ಕಠೀಣ ಶಿಕ್ಷೆ ವಿಧಿಸಬೇಕು. ಹತ್ಯೆಗಿಡಾದ ವಿದ್ಯಾರ್ಥಿ ಕುಟುಂಬ ಅತ್ಯಂತ ಕಡುಬಡತನ ಕುಟುಂಬವಾಗಿದ್ದು ಅವರಿಗೆ 1ಕೋಟಿ ರೂ ಪರಿಹಾರದೊಂದಿಗೆ ಕುಟುಂಬ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಗೋಕಾಕ ತಾಲೂಕ ಶ್ರೀ ಗಂಗಾಮತಸ್ಥರ ಯುವಜನ ಸಂಘ ತಾಲೂಕ ಅಧ್ಯಕ್ಷ ಎಮ್ ಎಲ್ ತಳವಾರ, ಕಾರ್ಯದರ್ಶಿ ಲಕ್ಷ್ಮಣ ಯಮಕನಮರಡಿ, ಮೂಡಲಗಿ ತಾಲೂಕ ಅಧ್ಯಕ್ಷ ಕಾಶಪ್ಪ ಕೋಣಿ, ಕೊಣ್ಣೂರ ಪಟ್ಟಣ ಅಧ್ಯಕ್ಷ ಸುನೀಲ ಜಾಡಾಗೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ ಪಾಟೀಲ, ಮುಖಂಡರುಗಳಾದ ಬಸವರಾಜ ಮುತ್ಯಾಗೋಳ, ರಾಜು ಮುಂಡಾಶಿ, ಆನಂದ ಹಿರೇಹೊಳಿ, ಹನಮಂತ ಕಾಳಮ್ಮನಗುಡಿ, ಲಕ್ಷ್ಮಣ ಮಿಶಾಳೆ, ಕಲ್ಲನಾಥ ಪೂಜಾರಿ, ಯಲ್ಲವ್ವ ಕಾನೂರಿ, ತಮ್ಮಣ್ಣ ಚಿಗರಿ, ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳಾದ ಆನಂದ ಪಾಟೀಲ, ಸಂಜು ಚಿಪ್ಪಲಕಟ್ಟಿ, ಬಸವರಾಜ ಖಾನಪ್ಪನವರ, ಕಿರಣ ಡಮಾಮಗರ, ಸುರೇಶ ಪತ್ತಾರ, ರಾಜೇಶ್ವರಿ ಒಡೆಯರ, ಇದ್ದರು.

Related posts: