RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಚಿಕ್ಕೋಡಿಯಲ್ಲಿ ಕಾಂಗ್ರೆಸ್ , ಬೆಳಗಾವಿಯಲ್ಲಿ ಬಿಜೆಪಿ ಗೆದ್ದಿದಕ್ಕೆ ಖುಷಿಯಾಗಿದೆ : ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ

ಗೋಕಾಕ:ಚಿಕ್ಕೋಡಿಯಲ್ಲಿ ಕಾಂಗ್ರೆಸ್ , ಬೆಳಗಾವಿಯಲ್ಲಿ ಬಿಜೆಪಿ ಗೆದ್ದಿದಕ್ಕೆ ಖುಷಿಯಾಗಿದೆ : ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ 

ಚಿಕ್ಕೋಡಿಯಲ್ಲಿ ಕಾಂಗ್ರೆಸ್ , ಬೆಳಗಾವಿಯಲ್ಲಿ ಬಿಜೆಪಿ ಗೆದ್ದಿದಕ್ಕೆ ಖುಷಿಯಾಗಿದೆ : ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ
ಗೋಕಾಕ ಜೂ 5 : ಪಕ್ಷೇತರ ಎಂ.ಎಲ್.ಸಿ ಯಾಗಿ ಚಿಕ್ಕೋಡಿ ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಬೆಳಗಾವಿ ಲೋಕಸಭೆಯಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದ ಪರಿಣಾಮ ಎರೆಡು ಕ್ಷೇತ್ರದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.

ನಗರದ ಗೃಹ ಕಛೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಪ್ರಶ್ನೆಗಳಲ್ಲಿಗೆ ಉತ್ತರಿಸಿ ಮಾತನಾಡಿದ ಅವರು ಜನರ ಆರ್ಶಿವಾದ ಇರುವವರೆಗೆ ಜಾರಕಿಹೊಳಿ ಕುಟುಂಬ ಬಲಿಷ್ಠವಾಗಿರುತ್ತದೆ. ಜನರ ಆರ್ಶಿವಾದದ ಹಿನ್ನೆಲೆಯಲ್ಲಿಯೆ ನಾವು ಇಷ್ಟು ಬೆಳೆದಿದ್ದೇವೆ. ರಾಜಕೀಯ ಎಂದರೆ ಪರ ವಿರೋಧ ಇದ್ದೆ ಇರುತ್ತದೆ ಆದರೆ ಜನರ ಬೆಂಬಲ ಇರುವವರಿಗೆ ಯಾರು ಏನು ಮಾಡಲು ಸಾಧ್ಯವಿಲ್ಲ. ಚಿಕ್ಕೋಡಿಯಲ್ಲಿ ನಮ್ಮ ಕುಟುಂಬಕ್ಕೆ ಜನ ಬೆಂಬಲ ಇರುವುದರಿಂದ ಪ್ರಿಯಾಂಕಾ ಜಾರಕಿಹೊಳಿ ಅವರು ಗೆದ್ದುಬಂದಿದ್ದಾರೆ . ಅಥಣಿಯಲ್ಲಿ ಪ್ರಿಯಾಂಕಾ ಅವರಿಗೆ 25 ಸಾವಿರ ಮತಗಳ ಅಂತರ ಬರಬೇಕಾಗಿತ್ತು ಆದರೆ ಕಡಿಮೆ ಮತಗಳು ಬಂದಿದೆ ಇದರ ಬಗ್ಗೆ ಸಚಿವರು ಅಭ್ಯಾಸ ಮಾಡಿ ಕ್ರಮ ಕೈಗೊಳ್ಳುತ್ತಾರೆ. ಗೋಕಾಕ ಮತ್ತು ಅರಭಾವಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಅಂತರ ಬರುತ್ತದೆ ಎಂದು ಹೇಳಲಾಗಿತ್ತು ಆದರೆ ಆಗಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಕೆಲ ವಿರೋಧಿಗಳು ಅವರೊಂದಿಗೆ ಬೆನ್ನು ಹತ್ತಿದ್ದರು ಅದಕ್ಕಾಗಿ ಅವರು ಆ ರೀತಿ ಹೇಳಿರ ಬಹುದು ಅಂತಹವರು ಚುನಾವಣೆ ಬಂದಾಗ ಬಂದು ಮತ್ತೆ ಮಾಯವಾಗುತ್ತಾರೆ ನಿರಂತರ ಜನರ ಜೊತೆ ಇರುವವರನ್ನು ಜನರು ಆರ್ಶಿವಾದ ಮಾಡುತ್ತಾರೆ ಎಂದ ಅವರು ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಜನ ಬೆಂಬಲ ಇದೆ ಅವರ ಕ್ಷೇತ್ರದಲ್ಲಿ ಮತದಾರರ ಅವರ ಪರವಾಗಿಯೇ ಮತದಾನ ಮಾಡಿದ್ದಾರೆ ಬೇರೆಯವರ ಪರವಾಗಿಲ್ಲ ಅಲ್ಲ ಹಾಗಾಗಿ ಗೋಕಾಕ ಮತ್ತು ಅರಭಾಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಪ್ರಚಾರದ ಸಮಯದಲ್ಲಿ ಶೆಟ್ಟರ್ ಮತ್ತು ರಮೇಶ ಜಾರಕಿಹೊಳಿ ಅವರನ್ನು ಬೈದಿದ್ದ ಪರಿಣಾಮ ಜನರು ತಕ್ಕ ಉತ್ತರ ನೀಡಿದ್ದಾರೆ. ಬೆಳಗಾವಿ , ಚಿಕ್ಕೋಡಿ ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿ ಜಾರಕಿಹೊಳಿ ಕುಟುಂಬದ ಪ್ರಭಾವ ಇರುವದರಿಂದ ನಮ್ಮಗೆ ಗೆಲುವು ಅತಿ ಸುಲಭವಾಗಿತ್ತು ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ಹೇಳಿದರು.ಈಗಾಗಲೇ ಪ್ರಿಯಾಂಕಾ ಜಾರಕಿಹೊಳಿ ಮತ್ತು ರಾಹುಲ್ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದಲ್ಲಿ ಕಾರ್ಯ ಮಾಡಿ ಜನರ ಕಷ್ಟಗಳಿಗೆ ಸ್ವಂದಿಸುತ್ತಿರುವ ಪರಿಣಾಮ ರಾಜಕೀಯ ಅವರಿಗೆ ಹೊಸದಲ್ಲ. ಈ ಹೊಸ ಜವಾಬ್ದಾರಿಯನ್ನು ಪ್ರಿಯಾಂಕಾ ಅವರು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related posts: