RNI NO. KARKAN/2006/27779|Monday, September 16, 2024
You are here: Home » breaking news » ಗೋಕಾಕ:ಪ್ರತಿಯೊಬ್ಬರು ಪರಿಸರ ಉಳಿವಿಗೆ ಶ್ರಮಿಸಬೇಕು : ಸಚಿವ ಸತೀಶ ಅಭಿಮತ

ಗೋಕಾಕ:ಪ್ರತಿಯೊಬ್ಬರು ಪರಿಸರ ಉಳಿವಿಗೆ ಶ್ರಮಿಸಬೇಕು : ಸಚಿವ ಸತೀಶ ಅಭಿಮತ 

ಪ್ರತಿಯೊಬ್ಬರು ಪರಿಸರ ಉಳಿವಿಗೆ ಶ್ರಮಿಸಬೇಕು : ಸಚಿವ ಸತೀಶ ಅಭಿಮತ
ಗೋಕಾಕ ಜೂ 7 : ಪ್ರತಿಯೊಬ್ಬರು ಪರಿಸರ ಉಳಿವಿಗೆ ಶ್ರಮಿಸಬೇಕು, ಪರಿಸರವನ್ನು ಕಾಪಾಡಿದರೆ ಮುಂದಿನ ಪೀಳಿಗೆ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ನಗರದ ಎನ್.ಎಸ್.ಎಫ್. ಶಾಲಾ ಆವರಣದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಅರಣ್ಯ ಇಲಾಖೆ ಮತ್ತು ಎನ್.ಎಸ್.ಎಫ್ ಶಾಲಾ ಸಿಬ್ಬಂದಿಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಹೊಣೆಯಾಗಿದ್ದು, ಜೂನ್ 5 ರಂದು ಶಾಲೆ,ಮತ್ತು ಹಲವೆಡೆ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಇಂದಿಗೆ ಮಾತ್ರ ಸೀಮಿತವಾಗದೇ ದಿನನಿತ್ಯ ಪರಿಸರ ಸಂರಕ್ಷಿಸುವ ಕಾಳಜಿ ಎಲ್ಲರಲ್ಲೂ ಇರಬೇಕು ಎಂದು ಅವರು ಹೇಳಿದರು.

ನೈಸರ್ಗಿಕ ಪರಿಸರ ವ್ಯವಸ್ಥೆಗಳು ಮತ್ತು ಅವುಗಳ ಜೀವ ವೈವಿಧ್ಯ ತೆಯೊಂದಿಗೆ ಮಾನವ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಬೇಕು , ಪರಿಸರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಗಿಡ, ಮರಗಳನ್ನು ಬೆಳೆಸುವಂತೆ ಶಾಲಾ ಮಕ್ಕಳನ್ನು ಪ್ರೇರೆಪಿಸಿ ಪರಿಸರ ನಾಶ ಮತ್ತು ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದರು.

ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು ಅದನ್ನು ತಡೆಯುವ ನಿಟ್ಟಿನಲ್ಲಿ ಮರ ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕಾಗಿದೆ. ಸಾರ್ವಜನಿಕರು ತಮ್ಮ ಮನೆಗಳ ಆಸುಪಾಸಿನಲ್ಲಿ ಗಿಡಗಳನ್ನು ನೆಟ್ಟರೆ ಉತ್ತಮ ಗಾಳಿ ದೊರೆಯಲು ಸಾಧ್ಯವಾಗುತ್ತದೆ ಎಂದ ಅವರು ಪರಿಸರ ಸಂರಕ್ಷಣೆ ಕುರಿತು ಇತರರಿಗೂ ಸಂದೇಶವನ್ನು ನೀಡಿದಂತಾಗುತ್ತದೆ ಎಂದು ಅವರು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಎಸಿಎಫ್ ವಾಸಿಂ ತೆನಗಿ, ವಲಯ ಅರಣ್ಯ ಅಧಿಕಾರಿ ಸಂಜೀವ ಸಂಸುದ್ದಿ, ಉಪ ವಲಯ ಅರಣ್ಯ ಅಧಿಕಾರಿ ಎಸ್.ಎಸ್.ಕೊಳವಿ, ಎಚ್‌.ಜಿ.ಹಮ್ಮನ್ನವರ, ನರಸಿಂಹ ಈರಯ್ಯನವರ, ನಗರಸಭೆ ಸದಸ್ಯ ಭಗವಂತ ಹೂಳಿ, ಆರೀಫ ಪೀರಜಾದೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: