RNI NO. KARKAN/2006/27779|Monday, September 16, 2024
You are here: Home » breaking news » ಗೋಕಾಕ:ಮಕ್ಕಳು ಶಿಕ್ಷಣ ಪಡೆಯುವುದು ಅವರ ಹಕ್ಕು. ಆ ಹಕ್ಕನ್ನು ಮೊಟಕುಗೊಳಿಸಬೇಡಿ : ತಹಶೀಲ್ದಾರ ಡಾ.ಮೋಹನ ಭಸ್ಮೆ ಕರೆ

ಗೋಕಾಕ:ಮಕ್ಕಳು ಶಿಕ್ಷಣ ಪಡೆಯುವುದು ಅವರ ಹಕ್ಕು. ಆ ಹಕ್ಕನ್ನು ಮೊಟಕುಗೊಳಿಸಬೇಡಿ : ತಹಶೀಲ್ದಾರ ಡಾ.ಮೋಹನ ಭಸ್ಮೆ ಕರೆ 

ಮಕ್ಕಳು ಶಿಕ್ಷಣ ಪಡೆಯುವುದು ಅವರ ಹಕ್ಕು. ಆ ಹಕ್ಕನ್ನು ಮೊಟಕುಗೊಳಿಸಬೇಡಿ : ತಹಶೀಲ್ದಾರ ಡಾ.ಮೋಹನ ಭಸ್ಮೆ ಕರೆ

ಗೋಕಾಕ ಜೂ 16 : ಮಕ್ಕಳು ಶಿಕ್ಷಣ ಪಡೆಯುವುದು ಅವರ ಹಕ್ಕು. ಆ ಹಕ್ಕನ್ನು ಮೊಟಕುಗೊಳಿಸದೆ ಅವರ ಆಸಕ್ತಿ ಅನುಗುಣವಾದ ಶಿಕ್ಷಣವನ್ನು ಕೊಡಿಸಿ ಅವರನ್ನು ಪ್ರತಿಭಾವಂತರನ್ನಾಗಿ ಮಾಡುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ತಹಶೀಲ್ದಾರ ಡಾ.ಮೋಹನ್ ಭಸ್ಮೆ ಹೇಳಿದರು.

ರವಿವಾರದಂದು ನಗರದ ಶೂನ್ಯ ಸಂಪಾದನ ಮಠದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಜೆಸಿಐ ಸಂಸ್ಥೆ ಗೋಕಾಕ ಅವರು ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡುವಂತೆ ಕರೆ ನೀಡಿದರು. ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮದಿಂದ ಪ್ರಯತ್ನ ಶೀಲರಾದರೆ ಯಶಸ್ಸು ನಿಶ್ಚಿತ. ಅಧ್ಯಯನ ಶೀಲ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಕಠಿಣ ಎನಿಸುವುದಿಲ್ಲ ಸಾಮಾಜಿಕ ಅರಿವಿನಿಂದ ವ್ಯಕ್ತತ್ವ ವಿಕಸನವಾಗಿ ಜ್ಞಾನ ಮಟ್ಟ ಹೆಚ್ಚುತ್ತದೆ. ಜ್ಞಾನದಿಂದ ಪ್ರತಿಭಾವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು. ಪ್ರತಿಭಾವಂತರು ಆತ್ಮಸ್ಥೈರ್ಯದಿಂದ ಅವಕಾಶಗಳನ್ನು ಸೃಷ್ಟಿ ಮಾಡುತ್ತಾರೆ. ಅಂತಹ ಪ್ರತಿಭಾವಂತರಾಗಿ ತಮ್ಮ ಬದುಕನ್ನು ರೂಪಿಸುಕೊಳ್ಳುವಂತೆ ಹೇಳಿದ ಅವರು ಎಲ್ಲಾ ಸಮುದಾಯದ ಸಾವಿರಾರು ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸುತ್ತಿರುವ ಜೆಸಿಐ ಸಂಸ್ಥೆಯ ಕಾರ್ಯ ಮಾದರಿಯಗಿದೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸತ್ಕರಿ, ಗೌರವಿಸಲಾಯಿತು.

ವೇದಿಕೆಯಲ್ಲಿ ಡಾ.ಕಾಡಯ್ಯ ಸ್ವಾಮೀಜಿ, ಬಿಇಒಗಳಾದ ಜಿ.ಬಿ.ಬಳಗಾರ , ಅಜೀತ ಮನ್ನಿಕೇರಿ, ಜೆಸಿಐ ಸಂಸ್ಥೆಯ ಪದಾಧಿಕಾರಿಗಳಾದ ವಿಷ್ಣು ಲಾತೂರ, ರಾಜೇಶ್ವರಿ ಕಿತ್ತೂರ, ಸಂಗೀತಾ ಬನ್ನೂರ, ಧರಣಿ ಜರತಾರಕರ, ದ್ರಾಕ್ಷಾಯಣಿ ಸವದಿ, ಗೀತಾ ಗಂಗರೆಡ್ಡಿ, ಕೆ.ಎನ್.ವಣ್ಣೂರ, ವ್ಹಿ.ಎಸ್.ತಡಸಲೂರ, ಶಬಾನಾ ದಫೇದಾರ, ರೇಖಾ ಗಂಗರೆಡ್ಡಿ, ಪ್ರಕಾಶ ವರ್ಜಿ, ಪ್ರಕೃತಿ ಲಾತೂರ, ಸುಮನ ಜಾಧವ, ಕಮಲವ್ವ ಬಡಗಾವಿ, ಮುರಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts:

ಗೋಕಾಕ:ನೆರೆ ಸಂತ್ರಸ್ತರನ್ನು ಭೇಟಿಯಾಗದೆ ಪ್ರೇಕ್ಷಣೀಯ ಸ್ಥಳಗಳನ್ನು ವಿಕ್ಷೀಸಿ ಹೋದ ಕಸಾಪ ರಾಜ್ಯಾಧ್ಯಕ್ಷ ಅಧ್ಯಕ್ಷ ಮನು …

ಗೋಕಾಕ:ದೇಶದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಬ್ ಡಿಸ್ಟ್ರಿಕ್ಟ ಇದ್ದ ಗೋಕಾಕ ನಗರವನ್ನು ರಾಜ್ಯ ಸರಕಾರ ಜಿಲ್ಲೆಯಾಗಿ ಘೋಷಿಸ…

ಗೋಕಾಕ:140ಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಕ್ರೀಡೆಗಳಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ : ಸಚಿವ ಸತೀ…