RNI NO. KARKAN/2006/27779|Monday, September 16, 2024
You are here: Home » breaking news » ಗೋಕಾಕ:ಶೈಕ್ಷಣಿಕವಾಗಿ ಮುಸ್ಲಿಂ ಬಾಂಧವರು ಮುಂದೆ ಬಂದು ಭವ್ಯ ಭಾರತ ನಿರ್ಮಿಸಿಬೇಕು : ಮುಸ್ಲಿಂ ಮುಖಂಡ ಖಂಡಾಯತ ಕರೆ

ಗೋಕಾಕ:ಶೈಕ್ಷಣಿಕವಾಗಿ ಮುಸ್ಲಿಂ ಬಾಂಧವರು ಮುಂದೆ ಬಂದು ಭವ್ಯ ಭಾರತ ನಿರ್ಮಿಸಿಬೇಕು : ಮುಸ್ಲಿಂ ಮುಖಂಡ ಖಂಡಾಯತ ಕರೆ 

ಶೈಕ್ಷಣಿಕವಾಗಿ ಮುಸ್ಲಿಂ ಬಾಂಧವರು ಮುಂದೆ ಬಂದು ಭವ್ಯ ಭಾರತ ನಿರ್ಮಿಸಿಬೇಕು : ಮುಸ್ಲಿಂ ಮುಖಂಡ ಖಂಡಾಯತ ಕರೆ

ಗೋಕಾಕ ಜೂ 17 : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಮುಸ್ಲಿಮರು ಸೋಮವಾರ ನಗರದಲ್ಲಿ ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.

ನಗರದ ಈದ್ಗಾ ಮೈದಾನದಲ್ಲಿ ಸೋಮವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಕಲ ಜೀವರಾಶಿಗೆ ಒಳಿತಾಗುವಂತೆ ದೇವರಿಗೆ ಮೊರೆಯಿಟ್ಟರು.
ಈ ಸಂದರ್ಭದಲ್ಲಿ ಸಮಾಜ ಭಾಂಧವರನ್ನು ಉದ್ದೇಶಿಸಿ
ಮಾತನಾಡಿದ ಮುಸ್ಲಿಂ ಸಮಾಜದ ಮುಖಂಡ ಮುಸ್ತಾಕ ಖಂಡಾಯತ ಶೈಕ್ಷಣಿಕವಾಗಿ ಮುಸ್ಲಿಂ ಬಾಂಧವರು ಮುಂದೆ ಬಂದು ಭವ್ಯ ಭಾರತ ನಿರ್ಮಿಸಿಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ತಂಜಿಮ ಶಿಕ್ಷಣ ಸಂಸ್ಥೆಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಳನ್ನು ತೆರೆಯಲಾಗುವುದು. ನಗರದ ಹೊರ ವಲಯದಲ್ಲಿರುವ ಸಂಸ್ಥೆಯ 5 ಎಕರೆ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಸಮಾಜ ಬಾಂಧವರು ಈ ನಮ್ಮ ಶೈಕ್ಷಣಿಕ ಕಾರ್ಯಕ್ಕೆ ಕೈ ಜೋಡಿಸಿ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು ಎಂದು ಹೇಳಿದರು.
ಅಂಜುಮನ ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ್ ಗೋಕಾಕ ಬಕ್ರೀದ್ ಹಬ್ಬ ತ್ಯಾಗ ಬಲಿದಾನದ ಪ್ರತೀಕವಾಗಿದ್ದು, ದೇಶದಲ್ಲಿ ದೇವರು ಶಾಂತಿ, ಸುವ್ಯವಸ್ಥೆ ಕಲ್ಪಿಸಲಿ ಎಂದು ಶುಭ ಹಾರೈಸಿದರು.

ಹಬ್ಬದ ಅಂಗವಾಗಿ ಶ್ವೇತವಸ್ತ್ರ ಧರಿಸಿದ ಮುಸ್ಲಿಮರು, ರಂಗು ರಂಗಿನ ಟೋಪಿಗಳನ್ನು ತೊಟ್ಟು ಪ್ರಾರ್ಥನೆಗೆ ಈದ್ಗಾ ಮೈದಾನಕ್ಕೆ ಆಗಮಿಸಿದರು. ಸಾವಿರಾರು ಜನರು ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸುವುದು ಹಬ್ಬದ ವಾಡಿಕೆ. ಮೌಲ್ವಿ, ಧರ್ಮ ಗುರುಗಳ ಉಪದೇಶ ಆಲಿಸಿ ಹಬ್ಬ ಆಚರಿಸಿದರು.

ಪ್ರಾರ್ಥನೆ ಬಳಿಕ ಒಬ್ಬರನೊಬ್ಬರು ಆಲಂಗಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಗರದ ಪ್ರಮುಖ ಸ್ಥಳಗಳಲ್ಲಿ ಸಿಪಿಐ ಗೋಪಾಲ ರಾಠೋಡ ಮತ್ತು ಪಿಎಸ್ಐ ಕೆ.ವಾಲಿಕರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು

ಈ ಸಂದರ್ಭದಲ್ಲಿ ತಾಲೂಕಿನ ಅಮೀರಸಾಬ ಹಾಜಿ ಕುತಬುದ್ದೀನ ಬಸ್ಸಾಪೂರಿ, ನಗರಸಭೆ ಸದಸ್ಯರಾದ ಅಬ್ದುಲರಹೆಮಾನ ದೇಸಾಯಿ, ಕೆ.ಎಂ.ಗೋಕಾಕ ಸೇರಿದಂತೆ ಅನೇಕ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.

Related posts: