RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ತೋಟಗಾರಿಕೆ ಬೆಳೆಗಾರರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಬಾಲಚಂದ್ರ

ಗೋಕಾಕ:ತೋಟಗಾರಿಕೆ ಬೆಳೆಗಾರರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಬಾಲಚಂದ್ರ 

ತೋಟಗಾರಿಕೆ ಬೆಳೆಗಾರರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಬಾಲಚಂದ್ರ

ಗೋಕಾಕ ಅ 20 : ತೋಟಗಾರಿಕೆ ಇಲಾಖೆಯಿಂದ ಶೇ 90ರ ಸಹಾಯಧನದಲ್ಲಿ ಬಾಡಿಗೆ ಆಧಾರಿತ ಯಂತ್ರೋಪಕರಣಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದು ರಾಜಾಪೂರದ ವಿವೇಕಾನಂದ ತೋಟಗಾರಿಕೆ ಉತ್ಪಾದಕರ ಸಂಘಕ್ಕೆ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ತೋಟಗಾರಿಕೆ ಬೆಳೆಗಾರರು ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.


ಸಂಘಕ್ಕೆ ಅಗತ್ಯವಿರುವ 2 ಎಕರೆ ಜಾಗೆಯನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇನ್ನೂ ಹಲವಾರು ಯೋಜನೆಗಳನ್ನು ಸಂಘಕ್ಕೆ ಸಹಾಯಧನದ ರೂಪದಲ್ಲಿ ನೀಡುವ ಭರವಸೆ ನೀಡಿದರು. ಹನಿ ನೀರಾವರಿಗೆ ಹೆಚ್ಚಿನಾದ್ಯತೆ ನೀಡಿ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಪಡೆಯುವಂತೆ ರೈತರಿಗೆ ಸಲಹೆ ಮಾಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶೇ 90ರ ಸಹಾಯಧನದಲ್ಲಿ 22.50 ಲಕ್ಷ ರೂ. ವೆಚ್ಚದಲ್ಲಿ ಬಾಡಿಗೆ ಆಧಾರಿದ ಯಂತ್ರೋಪಕರಣಗಳನ್ನು ತೋಟಗಾರಿಕೆ ರೈತರಿಗೆ ವಿತರಣೆ ಮಾಡಿದರು.

ವಿವೇಕಾನಂದ ತೋಟಗಾರಿಕೆ ಉತ್ಪಾದಕರ ಸಂಘದ ಅಧ್ಯಕ್ಷ ರಾಜು ಬೈರುಗೋಳ, ಉಪಾಧ್ಯಕ್ಷ ಬಸವಂತ ಕಮತಿ, ಆಡಳಿತ ಮಂಡಳಿ ನಿರ್ದೇಶಕರು, ಸಿದ್ದಪ್ಪ ಹಮ್ಮನ್ನವರ, ಯಲ್ಲಾಲಿಂಗ ಚೌಕಶಿ, ಪ್ರಭು ಕಡಾಡಿ, ರವಿ ಹೆಬ್ಬಾಳ, ಸಿದ್ರಾಮ ಮಾಕನ್ನವರ, ರಾಮು ಉಪ್ಪಾರ, ಲಕ್ಕಪ್ಪ ಕರಿಹೊಳಿ, ರಾಯಪ್ಪ ಬಂಡ್ರೊಳ್ಳಿ, ಚಿದಾನಂದ ಕುಂದನ್ನವರ, ಬೀರಪ್ಪ ಡಬಾಜ, ಗಣಪತಿ ಹೊನಕುಪ್ಪಿ, ಯಮನಪ್ಪ ರಾಜಾಪುರೆ, ಬೀರಪ್ಪ ಶೀಮಕ್ಕನವರ, ಸಂಘದ ಮುಖ್ಯ ಕಾರ್ಯನಿರ್ವಾಹಕ ಶಿವಕುಮಾರ ಕಡಗಲ್ಲಿ ಉಪಸ್ಥಿತರಿದ್ದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಎಲ್. ಜನಮಟ್ಟಿ ಅವರು ಇಲಾಖೆಯ ಯೋಜನೆಗಳನ್ನು ವಿವರಿಸಿದರು.

Related posts: