RNI NO. KARKAN/2006/27779|Monday, September 16, 2024
You are here: Home » breaking news » ಗೋಕಾಕ:ವಿಷಕನ್ಯೆ ತಪ್ಪಿ ಬೆಳಗಾವಿಯಲ್ಲಿ ಗೆಲ್ಲುತ್ತಿದ್ದರೆ ನಾನು ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಬೇಕೆಂದು ವಿಚಾರ ಮಾಡಿದ್ದೆ : ಶಾಸಕ ರಮೇಶ

ಗೋಕಾಕ:ವಿಷಕನ್ಯೆ ತಪ್ಪಿ ಬೆಳಗಾವಿಯಲ್ಲಿ ಗೆಲ್ಲುತ್ತಿದ್ದರೆ ನಾನು ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಬೇಕೆಂದು ವಿಚಾರ ಮಾಡಿದ್ದೆ : ಶಾಸಕ ರಮೇಶ 

ವಿಷಕನ್ಯೆ ತಪ್ಪಿ ಬೆಳಗಾವಿಯಲ್ಲಿ ಗೆಲ್ಲುತ್ತಿದ್ದರೆ ನಾನು ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಬೇಕೆಂದು ವಿಚಾರ ಮಾಡಿದ್ದೆ : ಶಾಸಕ ರಮೇಶ

ಗೋಕಾಕ ಜೂ 20 : ವಿಷಕನ್ಯೆ ತಪ್ಪಿ ಬೆಳಗಾವಿಯಲ್ಲಿ ಗೆಲ್ಲುತ್ತಿದ್ದರೆ ನಾನು ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಬೇಕೆಂದು ವಿಚಾರ ಮಾಡಿದ್ದೆ ಆದರೆ ಜನರು ನಮ್ಮ ಮೇಲೆ ನಂಬಿಕೆ ಇಟ್ಟು ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಅವರಿಗೆ ಎಷ್ಟು ಕೃತಜ್ಞತೆ ಹೇಳಿದರು ಕಡಿಮೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಗುರುವಾರದಂದು ನಗರದ ಶಾಸಕರ ಕಛೇರಿ ಎದುರು ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಳ ವತಿಯಿಂದ ನೂತನ ಸಂಸದ ಜಗದೀಶ್ ಶೆಟ್ಟರ್ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಷಕನ್ಯೆ ಹಾಗೂ ಮಹಾನಾಯಕನ ದರ್ಪದ , ಸೊಕ್ಕಿನ ರಾಜಕಾರಣಕ್ಕೆ ಜನ ಬೆಸತ್ತು, ಒಬ್ಬ ಸೌಮ್ಯ ಸ್ವಭಾವದ ಅಭ್ಯರ್ಥಿ ಜಗದೀಶ್ ಶೆಟ್ಟರ ಅವರನ್ನು ಗೆಲ್ಲಿಸಿದ್ದಾರೆ. ಈ ಗೆಲುವು ಬೆಳಗಾವಿ ಲೋಕಸಭೆ ಮತಕ್ಷೇತ್ರದ ಕಾರ್ಯಕರ್ತರ ಹಾಗೂ ಜನರ ಗೆಲುವಾಗಿದೆ. ಈ ಲೋಕಸಭೆ ಚುನಾವಣೆಯಲ್ಲಿ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ ಇದರಲ್ಲಿ ರಮೇಶ ಜಾರಕಿಹೊಳಿ ಅವರ ಪಾತ್ರ ಇಲ್ಲ .ಎಲ್ಲ ಕಾರ್ಯಕರ್ತರ ಸಹಕಾರ ವಿದೆ ಎಂದ ಅವರು ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದ್ದರಿಂದ ಸ್ವಲ್ಪ ನಾನು ನೊಂದಿದ್ದೆ. ಲೋಕಸಭೆ ಚುನಾವಣೆಯಲ್ಲಿ ಸೋತ್ತಿದ್ದರೆ ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಲು ಜಾಗ ನೋಡಿಬಂದಿದ್ದೆ ಆದರೆ ಜನರು ನನ್ನ ಮೇಲೆ ಇಟ್ಟ ಪ್ರೀತಿ ಮತ್ತು ಅಭಿಮಾನದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ.

ಘಟ್ಟಿ ಬಸವಣ್ಣ ಯಾತ ನೀರಾವರಿ ಯೋಜನೆ ನಿಲ್ಲಿಸಲು ಮಹಾನಾಯಕ ಪ್ಲಾನ್ : ನಗರದ ಯೋಗಿಕೋಳ್ಳ ಪ್ರದೇಶದಲ್ಲಿ 6 ಟಿಎಂಸಿ ನೀರು ನಿಲ್ಲಿಸಲು ಉದ್ದೇಶಿಸಿ ಮಾಡಲಾಗ ಘಟ್ಟಿ
ಬಸವಣ್ಣ ಡ್ಯಾಂ ನಿರ್ಮಾಣ ಯೋಜನೆಯನ್ನು ನಿಲ್ಲಿಸಲು ಮಹಾನಾಯಕ ಪ್ಲಾನ್ ಮಾಡಿ ಅಧಿಕಾರಿಗಳಿಂದ ಸತೀಶ ಜಾರಕಿಹೊಳಿ ಅವರ ಹೆಸರು ಹೇಳಿಸಿದ್ದ ಆದರೆ ನಾನು ಸತೀಶ ಜಾರಕಿಹೊಳಿ ಅವರೊಂದಿಗೆ ಮಾತನಾಡಿದ ಇದರ ಬಗ್ಗೆ ಕೇಳಿದಾಗ ಆ ಯೋಜನೆಯನ್ನು ನಿಲ್ಲಿಸುವ ಉದ್ದೇಶ ನನ್ನದಿಲ್ಲ ಎಂದಿದ್ದಾರೆ. ಮಸಾನಾಯಕ ಸುಳ್ಳು ಹೇಳಿ ಯೋಜನೆ ನಿಲ್ಲಿಸುವ ಹುನ್ನಾರ ನಡೆಸಿದ ಆದರೆ ಅದು ಸಾಧ್ಯವಾಗಲಿಲ್ಲ ಮುಂದಿನ ದಿನಗಳಲ್ಲಿ ಅದನ್ನು ಅನುಷ್ಠಾನಗೊಳಿಸಿ ಈ ಭಾಗದ ರೈತ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಸಿದ್ದರಾಮಯ್ಯ ಸಿಎಂ ಇರುವವರೆ ಕಾಂಗ್ರೆಸ್ ಸರಕಾರ ಇರುತ್ತವೆ ಸಿದ್ದರಾಮಯ್ಯ ಅವಧಿ ಮುಗಿದ ನಂತರ ಸರಕಾರ ಇರುತ್ತದೆಯೋ ಅಥವಾ ಇಲ್ಲಾ ಅಂಥ ಹೇಳಕ್ಕೆ ಆಗೋಲ್ಲ ಎಂದು ಕಾಂಗ್ರೆಸ್ ಸರಕಾರದ ವಿರೋಧ ವಾಗ್ದಾಳಿ ನಡೆಸಿದರು.
1.50 ಲಕ್ಷ ಕ್ಕಿಂತ ಕಡಿಮೆ ಮತದಿಂದ ಗೆದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ ಆದರೆ ಜನರು ಬಿಜೆಪಿಯನ್ನು ಗೆಲ್ಲಿಸಿ ನನ್ನಗೆ ಗೌರವ ನೀಡಿದ್ದಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿಗೆ ಮತ ಬಂದಿದ್ದು ಸಂತೋಷ ಉಂಟಾಗಿದೆ.
ಭಾರತದ ಮತದಾರ ಪ್ರಭುಗಳು ಬಹಳ ಬುದ್ದಿವಂತರಿದ್ದಾರೆ. ಜನರಿಗೆ ಗೌವರ ನೀಡುವ ಕಾರ್ಯ ನಮ್ಮ ನಾಯಕರು ಮಾಡಬೇಕು. ಹಿಂದೂ ಧರ್ಮ ಉಳಿಯಬೇಕಾದರೆ ಭಾರತ ಶಾಂತ ಇರಬೇಕಾದರೆ ನರೇಂದ್ರ ಮೋದಿ ಪ್ರಧಾನಿಯಾಗಿರಬೇಕು.
ಮುಂದಿನ ದಿನಗಳಲ್ಲಿ ಬೇರು ಮಟ್ಟದಿಂದ. ಪಕ್ಷ ಕಟ್ಟೋಣ ನಮ್ಮ ತಪ್ಪಿನಿಂದ ಕೆಲವು ಕಡೆ ಬಿಜೆಪಿ ಸೋತಿದೆ. ಮುಂದೆ ಎಲ್ಲರೂ ಕೂಡಿ ಪಕ್ಷವನ್ನು ಬಲ ಪಡಸೋಣ ಎಂದರು

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜನ ಜಾತಿ ಮತ ಪಂಥ ನೋಡಿ ಮತಹಾಕಿಲ್ಲ, ಬದಲಾಗಿ ಅಭಿವೃದ್ಧಿ ಬಲ ಗೆದ್ದಿದೆ , ಹಣವನ್ನು ದಿಕ್ಕರಿಸಿ ಪ್ರಾಮಾಣಿಕತೆ ಜಯ ಸಿಕ್ಕಿದೆ ಇದು ಜನರ, ಕಾರ್ಯಕರ್ತರ ವಿಜಯವಾಗಿದೆ.
ನಾನು ಚುನಾವಣೆ ಗೆಲ್ಲಲಿಕ್ಕೆ ರಮೇಶ ಜಾರಕಿಹೊಳಿ ಅವರು ಅವಿರತ ಪರಿಶ್ರಮ ಪಟ್ಟಿದ್ದಾರೆ. ಜನರು ತಿರ್ಮಾಣ ಮಾಡಿ 1.70 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿದ್ದಾರೆ. ನನಗೆ ಜನರ ಸಮಸ್ಯೆ ಆಲಿಸುವುದು ಮುಖ್ಯ ಹಾಗಾಗಿ ಸನ್ಮಾನ, ಆಭಿನಂದನೆ ಬಿಟ್ಟು ಬರುವ ದಿನಗಳಲ್ಲಿ ಜನಪರವಾದ ಸೇವೆ ಮಾಡಲು ಕ್ರಮ ಕೈಗೊಳ್ಳಲಾಗುವುದು.
ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಸುರಕ್ಷತೆವಾಗಿದೆ. ಪ್ರಧಾನಿ ಆದ ಮರುದಿನವೆ ತಮ್ಮ ಕೆಲಸವನ್ನು ಶೂರು ಮಾಡಿರುವ ಅವರು ದೇಶ ಅಭಿವೃದ್ಧಿ ಪರ ಮುನ್ನಡಗಯಲ್ಲಿಕ್ಕೆ ಮುನ್ನುಡಿ ಬರೆದಿದ್ದಾರೆ . ಇದು ಕಾಂಗ್ರೆಸ್ ಪಕ್ಕಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ.
ಗ್ಯಾರಂಟಿ ಯೋಜನೆಗಳನ್ನು ಜನ ಮೆಚ್ಚಿಲ್ಲಾ, ಕಾಂಗ್ರೆಸನ ಶಾಸಕರು ಸಹ ಗ್ಯಾರಂಟಿ ಬದಲು ಬಂಡಾಯ ಎದ್ದಿದ್ದಾರೆ. ಮುಂದೆ ಗ್ಯಾರಂಟಿ ಬಂದ್ ಮಾಡಿದರು ಆಶ್ಚರ್ಯ ಪಡಬೇಕಾಗಿಲ್ಲ. ಗ್ಯಾರಂಟಿಯಂತಹ ಯೋಜನೆಗಳು ತಾತ್ಕಾಲಿಕವಾಗಿವೆ. ಗ್ಯಾರಂಟಿಯಿಂದ ಖಜಾನೆ ಖಾಲಿ ಆದ ಪರಿಣಾಮ ತೈಲ ಬೆಲೆ ಏರಿಸಿದ್ದಾರೆ. ಒಂದು ಕಡೆ ಕೊಟ್ಟು ಇನ್ನೋಂದು ಕಡೆ ಜಗ್ಗುವ ಕಾರ್ಯ ಕಾಂಗ್ರೆಸ್ ಸರಕಾರ ಮಾಡುತ್ತಿದೆ.

ಗೋಕಾಕ ಕ್ಷೇತ್ರದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಗೋಕಾಕ ಫಾಲ್ಸ್ ಅನ್ನು ಅಭಿವೃದ್ಧಿ ಪಡೆಸಿ ಉತ್ತಮ ಪ್ರವಾಸಿತಾಣವನ್ನಾಗಿ ಮಾಡಬೇಕಾಗಿದೆ. ಎಲ್ಲರ ಸಹಕಾರದಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಯ ಮಾಡಲಾಗುವುದಲ್ಲದೆ ಬೆಳಗಾವಿ, ಕಿತ್ತೂರ ಧಾರವಾಡ ಮಾರ್ಗದ ರೈಲ್ವೆ ಕಾರ್ಯ ವಾಗಿಲ್ಲ, ಅದಕ್ಕೂ ಸಹ ಚಾಲನೆ ನೀಡಲಾಗುವುದು. ಒಟ್ಟಿನಲ್ಲಿ ಬೆಳಗಾವಿ ಜನರ ವಿಶ್ವಾಸಕ್ಕೆ ದಕ್ಕೆಯಾಗದಂತೆ ಕಾರ್ಯ ಮಾಡುತ್ತೇನೆ ಎಂದ ಅವರು ಕಳಸಾ ಬಂಡೂರಿ ಯೋಜನೆಯನ್ನು ಸಹ ಅನುಷ್ಕಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಎವಿಎಂ ಸಂಬಂಧ ಪಟ್ಟಂತೆ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅವರು ಸುಮ್ಮನಿದ್ದು, ಈಗ ಮೋದಿ ಪ್ರಧಾನಿ ಆದ ಕೂಡಲೇ ಈ ಸಮಸ್ಯೆ ಎತ್ತಿದ್ದಾರೆ ಇವರಿಂದ ಅಭಿವೃದ್ಧಿ ಬಯಸುವುದು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ಮಂಡಳ ಸುಭಾಷ್ ಪಾಟೀಲ , ಮಾಜಿ ಶಾಸಕ ಎಂ,ಎಲ್.ಮುತ್ತೆನ್ನವರ, ರಾಜೇಂದ್ರ ಗೋಡಪಾಪಗೋಳ, ಭೀಣಶಿ ಭರಮನ್ನವರ, ಕಿರಣ ಜಾಧವ, ಲಕ್ಷ್ಮಣ್ ತಪಸಿ, ಅಶೋಕ ಪಾಟೀಲ ಉಪಸ್ಥಿತರಿದ್ದರು.

Related posts: