ಗೋಕಾಕ:ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಕನ್ನಡ ಜ್ಯೋತಿ ಪ್ರಶಸ್ತಿ ವಿತರಣೆ
ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಕನ್ನಡ ಜ್ಯೋತಿ ಪ್ರಶಸ್ತಿ ವಿತರಣೆ
ಗೋಕಾಕ ಜೂ 21 : ಇಲ್ಲಿನ ಕಪರಟ್ಟಿ-ಕಳ್ಳಿಗುದ್ದಿ ಪವಾಡ ಪುರುಷ ಶ್ರೀ ಮಹಾದೇವ ಅಜ್ಜನವರ ಜಯಂತಿ ನಿಮಿತ್ತ ಪ್ರತಿವರ್ಷ ಜನೇವರಿಯಲ್ಲಿ ನಡೆಯುವ ಕನ್ನಡದ ಜಾತ್ರೆ ಸಮಾರಂಭದಲ್ಲಿ ಕೊಡಮಾಡುವ ಕನ್ನಡದ ಜ್ಯೋತಿ ಪ್ರಶಸ್ತಿಯನ್ನು ಈ ಬಾರಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಗುರುವಾರದಂದು ನಡೆದ ಸಂಸದ ಜಗದೀಶ್ ಶೆಟ್ಟರ್ ಅವರ ಅಭಿನಂದನ ಸಮಾರಂಭದಲ್ಲಿ ಕಪರಟ್ಟಿ-ಕಳ್ಳಿಗುದ್ದಿ ಮಠದ ಶ್ರೀ ಬಸವರಾಜ ಸ್ವಾಮಿಗಳು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ನೂತನ ಸಂಸದ ಜಗದೀಶ್ ಶೆಟ್ಟರ್, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ, ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಳ ಅಧ್ಯಕ್ಷ ರಾಜೇಂದ್ರ ಗೋಡಪ್ಪಗೋಳ, ಲಕ್ಷ್ಮಣ್ ತಪಸಿ ಸೇರಿದಂತೆ ಇತರರು ಉಪಸ್ಥಿತರಿದ್ದರು