ಗೋಕಾಕ:ಹಣ್ಣು-ಹಂಪಲ ವಿತರಿಸುವುದರ ಮೂಲಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟುಹಬ್ಬ ಆಚರಣೆ
ಹಣ್ಣು-ಹಂಪಲ ವಿತರಿಸುವುದರ ಮೂಲಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟುಹಬ್ಬ ಆಚರಣೆ
ಗೋಕಾಕ ಜೂ 24 : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು-ಹಂಪಲ ವಿತರಿಸುವುದರ ಮೂಲಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟುಹಬ್ಬವನ್ನು ಅವರ ಅಪಾರ ಭಕ್ತವೃಂದದವರು ಸೋಮವಾರದಂದು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಆಧ್ಯಾತ್ಮ ಸಹಕಾರಿ. ಎಲ್ಲರೂ ಆಧ್ಯಾತ್ಮಿಕ ಜ್ಞಾನವನ್ನು ಬೆಳೆಸಿಕೊಂಡಲ್ಲಿ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಸಮಾಜವನ್ನು ಆಧ್ಯಾತ್ಮಿಕ ಜೊತೆಗೆ ಸಮಾಜಿಕವಾಗಿ, ಶೈಕ್ಷಣಿಕವಾಗಿ ಬದಲಾವಣೆ ಮಾಡುವ ಕಾರ್ಯವನ್ನು ಶೂನ್ಯ ಸಂಪಾದನ ಮಠದ ಪರಮ ಪೂಜ್ಯರು ಕಳೆದ ಹಲವು ದಶಕಗಳಿಂದ ಮಾಡುತ್ತಾ ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದು ಸಮಾಜವನ್ನು ಆಧ್ಯಾತ್ಮಿಕವಾಗಿ ಗಟ್ಟಿಗೊಳಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ, ಕಾಳಪ್ಪ ಕುರಾಣೆ, ವಿವೇಕ ಜತ್ತಿ, ಬಸವರಾಜ ಖಾನಪ್ಪನವರ, ಅಡಿವೇಶ ಗವಿಮಠ, ಮೈರ್ಲಾಲಿಂಗ ಉಪ್ಪಿನ, ಮಹಾಲಿಂಗಪ್ಪ ನೇಗಿನಾಳ, ಲೋಕಯ್ಯಾ ಹಿರೇಮಠ, ಪ್ರಸನ್ನ ತಂಬಾಕೆ, ಡಾ.ರವೀಂದ್ರ ಅಂಟಿನ, ಮಲ್ಲಿಕಾರ್ಜುನ ಈಟಿ, ವೀಣಾ ಹಿರೇಮಠ, ಸೈಲಾ ಬಿದರಿ, ವಿಜಯಲಕ್ಷ್ಮಿ ಹಿರೇಮಠ, ಶೋಭಾ ಕುರಬೇಟ, ಮಹಾದೇವಿ ಉಪ್ಪಿನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.