RNI NO. KARKAN/2006/27779|Friday, November 8, 2024
You are here: Home » breaking news » ಗೋಕಾಕ:ಕಣ್ಣು ಮಾನವನ ಬಹು ಮುಖ್ಯ ಅಂಗವಾಗಿದೆ : ಕಣ್ಣು ಚಿಕಿತ್ಸಾ ತಜ್ಞೆ ಡಾ. ಪ್ರತಿಭಾ ಪೂಜಾರಿ

ಗೋಕಾಕ:ಕಣ್ಣು ಮಾನವನ ಬಹು ಮುಖ್ಯ ಅಂಗವಾಗಿದೆ : ಕಣ್ಣು ಚಿಕಿತ್ಸಾ ತಜ್ಞೆ ಡಾ. ಪ್ರತಿಭಾ ಪೂಜಾರಿ 

ಕಣ್ಣು ಮಾನವನ ಬಹು ಮುಖ್ಯ ಅಂಗವಾಗಿದೆ : ಕಣ್ಣು ಚಿಕಿತ್ಸಾ ತಜ್ಞೆ ಡಾ. ಪ್ರತಿಭಾ ಪೂಜಾರಿ

ಗೋಕಾಕ ಜೂ 29 : ಕಣ್ಣು ಮಾನವನ ಬಹು ಮುಖ್ಯ ಅಂಗವಾಗಿದೆ ಎಂದು ಕಣ್ಣು ಚಿಕಿತ್ಸಾ ತಜ್ಞೆ ಡಾ. ಪ್ರತಿಭಾ ಪೂಜಾರಿ ಹೇಳಿದರು.

ಶನಿವಾರದಂದು ನಗರದ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದ ಎನ್.ಎನ್.ಎಸ್. ಘಟಕ ಹಾಗೂ ಇಲ್ಲಿನ ಸುಗಾಂಧಾ ಕಣ್ಣಿನ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಆಗಾಗ ಕಣ್ಣಿನ ತಪಾಸಣೆ ಮಾಡಿಸಿ ಕೊಳ್ಳಬೇಕು. ಹಸಿರು ಸೊಪ್ಪು ಮತ್ತು ವಿಟಮಿನ್‌-ಎ ಇರುವ ತರಕಾರಿಗಳನ್ನು ಸೇವಿಸಬೇಕು. ಹೆಚ್ಚು-ಹೆಚ್ಚು ನೀರು ಕುಡಿದು ಕಣ್ಣನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬೇಕು.ಕಣ್ಣಿನ ಆರೋಗ್ಯದಲ್ಲಿ ಜಾಗೃತಿ ವಹಿಸಿಬೇಕು. ನಿರ್ಲಕ್ಷ್ಯ ಮಾಡಿದರೆ ಜೀವನದಲ್ಲಿ ಅಂಧಕಾರ ಅವರಿಸುತ್ತದೆ ಎಂದ ಅವರು ಶಿಕ್ಷಕರು ತರಗತಿಗಳಲ್ಲಿ ಪ್ರತಿ ಮಗುವನ್ನು ವೈಯಕ್ತಿಕವಾಗಿ ಗಮನಿಸುತ್ತಿರಬೇಕು. ಕಣ್ಣಿನ ರಕ್ಷಣೆಯ ಬಗ್ಗೆ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರಬೇಕು. ದೃಷ್ಟಿ ದೋಷವಿರುವ ಮಕ್ಕಳನ್ನು ಗುರುತಿಸಿ ತಪಾಸಣೆ ಮಾಡಿಸಬೇಕೆಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಸುಷ್ಮಾ ಪಾಟೀಲ, ಆಡಳಿತಾಧಿಕಾರಿ ಅಡಿವೇಶ ಗವಿಮಠ, ಮುಖ್ಯೋಪಾಧ್ಯಾಯನಿ, ಶ್ರೀಮತಿ ಡಿ.ಎಸ್.ಮಠಪತಿ, ದೈಹಿಕ ಶಿವಾನಂದ ನಾಯಿಕ ಉಪಸ್ಥಿತರಿದ್ದರು.

Related posts: