ಘಟಪ್ರಭಾ:ಪೊಲೀಸರ ಅಸಹಾಯಕತೆ : ಘಟಪ್ರಭಾದಲ್ಲಿ ಹೆಚ್ಚಿದ ಕಳ್ಳರ ಹಾವಳಿ
ಪೊಲೀಸರ ಅಸಹಾಯಕತೆ : ಘಟಪ್ರಭಾದಲ್ಲಿ ಹೆಚ್ಚಿದ ಕಳ್ಳರ ಹಾವಳಿ
ಘಟಪ್ರಭಾ ಅ 20 : ಕಳೆದ ಒಂದು ತಿಂಗಳಿಂದ ಘಟಪ್ರಭಾದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ.
ಮನೆಯ ಹೊರಗಡೆ ನಿಲ್ಲಿಸುವ ಬೈಕ್‍ಗಳನ್ನು ಪ್ರತಿನಿತ್ಯ ಒಂದೊಂದು ಕಡೆಯಿಂದ ಕಳ್ಳರು ಕಳ್ಳತನ ಮಾಡುತ್ತಿದ್ದಾರೆ. ಕಾಣೆಯಾದ ಬೈಕ್‍ಗಳು ನಿರ್ಜನ ಪ್ರದೇಶದಲ್ಲಿ ಕೆಲವು ಪತ್ತೆಯಾದರೆ ಇನ್ನೂ ಕೆಲವು ಇಲ್ಲಿಯ ವರೆಗೆ ಪತ್ತೆಯಾಗಿಲ್ಲ ಇದರ ಬೆನ್ನಲ್ಲೇ ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ರೈಲ್ವೆ ನಿಲ್ದಾಣ ಹತ್ತಿರವಿರುವ ಸಾಯಿಬಾರ್‍ನಲ್ಲಿ ಕಳ್ಳತನವಾಗಿದೆ.
ಕಳ್ಳರು ಬಾರ್‍ನಲ್ಲಿ 25 ಸಾವಿರ ನಗದು ಹಾಗೂ 2 ಸಿಸಿ ಟಿವಿ ಕ್ಯಾಮರ್ ಹಾಗೂ ಹಾರ್ಡ್‍ಡಿಸ್ಕ್ ಮತ್ತು ಮದ್ಯದ ಬಾಟಲಿಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಘಟಪ್ರಭಾ ಪೋಲಿಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ನಿರಂತರ ಕಳ್ಳತನ ಆಗುತ್ತಿದ್ದರೂ ಇಲ್ಲಿ ತನಕ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೋಲಿಸ ಇಲಾಖೆ ವಿಫಲವಾಗಿದೆ.
ಈ ಕುರಿತು ಪೋಲಿಸರನ್ನು ಕೇಳಿದರೆ ಸಿಬ್ಬಂದಿ ಕೊರತೆ ಕಾರಣ ನೀಡುತ್ತಿದ್ದಾರೆ. ಇರುವ ಸಿಬ್ಬಂದಿಗಳನ್ನೆ ಪ್ರತಿನಿತ್ಯ ಬೇರೆ ಕಡೆ ಬಂದೋಬಸ್ತ್ ಕಳಿಸಬೇಕಾಗುತ್ತದೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದಾರೆ.
ಹೀಗಾದರೆ ಘಟಪ್ರಭಾ ಜನತೆಯ ಗತಿಯೆನು ಈ ರೀತಿ ನಿರಂತರ ಕಳ್ಳತನವಾದರೆ ಪೋಲಿಸರ ಮೇಲೆ ಸಾರ್ವಜನಿಕರು ಅಕ್ರೋಶ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ.