ಗೋಕಾಕ:ಸಾರ್ವಜನಿಕರ ತಕರಾರು : ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಬಾರದೆ ಜನಸ್ಪಂದನ ಕಾರ್ಯಕ್ರಮ ಮುಂದೂಡಿಕೆ

ಸಾರ್ವಜನಿಕರ ತಕರಾರು : ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಬಾರದೆ ಜನಸ್ಪಂದನ ಕಾರ್ಯಕ್ರಮ ಮುಂದೂಡಿಕೆ
ಗೋಕಾಕ ಜು 5 : ನಗರದಲ್ಲಿ ಶುಕ್ರವಾರದಂದು ನಿಗಧಿಯಾಗಿದ್ದ ಜನಸ್ವಂದನಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಬಾರದೆ ಇರುವ ಕಾರಣ ಸಭೆ ಮುಂದೂಡಿದ ಘಟನೆ ನಡೆದಿದೆ.
ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಜನಸ್ವಂದನಾ ಕಾರ್ಯಕ್ರಮಕ್ಕೆ ಇಂದು ಜಿಲ್ಲಾಧಿಕಾರಿಯವರು ವರ್ಗಾವಣೆಗೊಂಡ ಕಾರಣ ಸಭೆಗೆ ಬರಲು ಸಾಧ್ಯವಾಗದಿದ್ದರಿಂದ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭಗೊಂಡ ನಂತರ ಸಾರ್ವಜನಿಕರು ಇದಕ್ಕೆ ಆಪೇಕ್ಷೆ. ( ತಕರಾರು) ವ್ಯಕ್ತಪಡಿಸಿ ಸಭೆಗೆ ಜಿಲ್ಲಾಧಿಕಾರಿ ಅವರೆ ಬರಬೇಕು ಎಂದು ಪಟ್ಟು ಹಿಡಿದ ಪರಿಣಾಮ ಅಧಿಕಾರಿಗಳು ಸಭೆಯನ್ನು ರದ್ದು ಪಡೆಸಿ, ಮುಂದಿನ ದಿನಾಂಕವನ್ನು ತಿಳಿಸವಾಗುವುದು ಎಂದು ಹೇಳಿ ಹೊರ ನಡೆದರು. ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಳ್ಳಬೇಕು ಎಂಬ ಆಸೆಯಿಂದ ಜನ ಸ್ಪಂದನಾ ಕಾರ್ಯಕ್ರಮಕ್ಕೆ ಬಂದಿದ್ದ ಸಾರ್ವಜನಿಕರು ಬಂದ ದಾರಿಗೆ ಸಂಕುವಿಲ್ಲ ಎಂಬಂತೆ ವಾಪಸಾದರು.