RNI NO. KARKAN/2006/27779|Sunday, September 8, 2024
You are here: Home » breaking news » ಬೆಳಗಾವಿ:ಪ್ರತಿಕೋಧ್ಯಮವನ್ನು ಸತ್ಯದ ಕಡೆಗೆ ಮುಂದುವರೆಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ : ಶಾಸಕ ಆಸೀಫ್ ಸೇಠ್ ಅಭಿಮತ

ಬೆಳಗಾವಿ:ಪ್ರತಿಕೋಧ್ಯಮವನ್ನು ಸತ್ಯದ ಕಡೆಗೆ ಮುಂದುವರೆಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ : ಶಾಸಕ ಆಸೀಫ್ ಸೇಠ್ ಅಭಿಮತ 

ಪ್ರತಿಕೋಧ್ಯಮವನ್ನು ಸತ್ಯದ ಕಡೆಗೆ ಮುಂದುವರೆಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ : ಶಾಸಕ ಆಸೀಫ್ ಸೇಠ್ ಅಭಿಮತ
ಗೋಕಾಕ ಜು 7 : ಸಂವಿಧಾನದ ನಾಲ್ಕನೇ ಅಂಗ ಪ್ರತಿಕೋಧ್ಯಮವನ್ನು ಸತ್ಯದ ಕಡೆಗೆ ಮುಂದುವರೆಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ ಎಂದು ಬೆಳಗಾವಿ ಉತ್ತರ ಶಾಸಕ ರಾಜು ಸೇಠ್ ಹೇಳಿದರು.

ರವಿವಾರಮದಂದು ನಗರದ ಕನ್ನಡ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ವಾರ್ತಾ ಇಲಾಖೆ ಬೆಳಗಾವಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದು ಸತ್ಯವಿದೆ ಅದನ್ನು ಜನರ ಮುಂದೆ ತರುವ ಕಾರ್ಯ ಪತ್ರಕರ್ತರು ಮಾಡಬೇಕು . ಪತ್ರಕರ್ತರು ಏನು ತೋರಿಸುತ್ತಾರೆ , ಏನು ಬರೆಯುತ್ತಾರೆ ಅದನ್ನೇ ಜನರ ನಂಬುತ್ತಿದ್ದಾರೆ. ಸತ್ಯ ವಿಷಯವನ್ನು ಬರೆಯುವಾಗ ನಮ್ಮ ಮನಸ್ಸು ನಮ್ಮ ಬರವಣಿಗೆಗೆ ಸರ್ಪೋಟ ಮಾಡಬೇಕು ಅಂದಾಗ ಮಾತ್ರ ನಾವು ಸತ್ಯವನ್ನು ಬರೆಯಲು ಸಾಧ್ಯ . ರಾಜಕೀಯದಲ್ಲಿಯೂ ಅಷ್ಟೆ ಜನಪ್ರತಿನಿಧಿಗಳು ಸಹ ಸಮಾಜವನ್ನು ಗಟ್ಟಿಗೊಳಿಸುವ ಕಾರ್ಯಮಾಡಬೇಕು. ಅದನ್ನು ಬಿಟ್ಟು ಸಮಾಜದಲ್ಲಿ ಏನಾದರು ಮಾತನಾಡಿ ಬೆಂಕಿ ಹಚ್ಚುವ ಕಾರ್ಯ ಮಾಡಬಾರದು ಎಂದ ಅವರು ರಾಜಕಾರಣಿಗಳು ಮತ್ತು ಮಾಧ್ಯಮ ಮಿತ್ರರು ತಮ್ಮ ಧ್ವನಿಯನ್ನು ಗಟ್ಟಿಗೋಳಿಸು ಮೂಲಕ ಸದೃಢ ಸಮಾಜ ನಿರ್ಮಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಗೋಕಾಕ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ಪತ್ರಕರ್ತರ ಒಳ್ಳೆಯ ಮತ್ತು ಕೆಟ್ಟ ಸುದ್ದಿಗಳನ್ನು ಬರೆಯುವ ಸಂದರ್ಭದಲ್ಲಿ ಸಮಾಜದಲ್ಲಿ ನಿಂಧನೆ ಮಾಡುವವರು ಮತ್ತು ಪ್ರಶಂಸಿಸುವವರು ಇರುತ್ತಾರೆ . ಪತ್ರಕರ್ತರು ಎರೆಡು ವಿಷಯಗಳನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆಯಬೇಕು. ಪತ್ರಕರ್ತರ ಸಂಘವು ಎಲ್ಲರ ಕಷ್ಟ ಕಾರ್ಪಣ್ಯೆಗಳಿಗೆ ಸ್ವಂದಿಸುವ ನಿಟ್ಟಿನಲ್ಲಿ ಇಂದು ಪತ್ರಕರ್ತರ ಮಕ್ಕಳಿಗೆ ಗುರುತಿಸಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸುತ್ತಿರುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು ಮುಂದೆಯೂ ಹಂತ,ಹಂತವಾಗಿ ಇಂತಹ ಕಾರ್ಯಗಳು ಸಂಘದಿಂದ ಮಾಡಲಾಗುವುದು ಎಂದು ಹೇಳಿದರು.

ಹಿರಿಯ ಪತ್ರಕರ್ತ ಸಾಹಿತಿ ಡಾ.ಸರಜೂ ಕಾಟ್ಕರ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್ ಸಿ ಮತ್ತು ಪಿ.ಯು.ಸಿ ಪರೀಕ್ಷೆ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಿ, ಗೌರವಿಸಲಾಯಿತ್ತಲ್ಲದೆ ಕಾಗವಾಡನ ಹಿರಿಯ ಪತ್ರಿಕಾ ವಿತರಕ ದಂಪತಿಗಳನ್ನು ಹಾಗೂ ಹಿರಿಯ ಪತ್ರಕರ್ತರನ್ನು ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ರೋಹಣ ಜಗದೀಶ್, ಐಎಎಸ್ ಪ್ರೋಬ್ರೆಷನರಿ ಅಧಿಕಾರಿ ದಿನೇಶಕುಮಾರ ಮೀಣಾ, ಶ್ರೀಮತಿ ಶೃತಿ, ಗುರುನಾಥ್ ಕಡಬೂರ, ಪುಂಡಲೀಕ ಬಾಳೋಜಿ, ಜಿಲ್ಲಾಧ್ಯಕ್ಷ ದಿಲೀಪ್ ಕುರಂದವಾಡೆ , ಕೆ.ಎನ್ ಸುರೇಶ್, ಬ್ರಹ್ಮಾನಂದ , ಎಂ.ಕೆ ಹೆಗಡೆ , ಮುನ್ನಾ ಭಾಗವಾನ ಉಪಸ್ಥಿತರಿದ್ದರು.

Related posts: