ಗೋಕಾಕ:ಸಮ್ಮೇಳನಾಧ್ಯಕ್ಷರಿಗೆ ಪರಿಷತ್ತಿನ ಅಧಿಕೃತ ಆಹ್ವಾನ
ಸಮ್ಮೇಳನಾಧ್ಯಕ್ಷರಿಗೆ ಪರಿಷತ್ತಿನ ಅಧಿಕೃತ ಆಹ್ವಾನ
ಗೋಕಾಕ ಜು 10 : ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಜುಲೈ 28 ರಂದು ನಡೆಯುವ 7ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ.ಶಿವಲಿಂಗಪ್ಪ ಬಾವಿಕಟ್ಟಿಯವರನ್ನು ಆಯ್ಕೆ ಮಾಡಲಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಮಂಗಳವಾರದಂದು ಪ್ರೊ.ಶಿವಲಿಂಗಪ್ಪ ಬಾವಿಕಟ್ಟಿಯ ಮನೆಗೆ ಭೇಟಿ ನೀಡಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಭಾರತಿ ಮದಬಾವಿ ಅವರು ಅಧಿಕೃತ ಆಹ್ವಾನವನ್ನು ನೀಡಿದರು.
ಸಾಹಿತ್ಯ ಸಮ್ಮೇಳನವು ತಮ್ಮ ಅಧ್ಯಕ್ಷತೆಯಲ್ಲಿ ಕನ್ನಡಪರ ಚಿಂತನೆಗಳಿಗೆ ಪೂರಕವಾಗಿ ಕನ್ನಡಿಗರ ಆಶೋತ್ತರಗಳಿಗೆ ತಕ್ಕಂತೆ ನಡೆಯಲಿ ಎಂದು ಆಶಿಸಿದರು. ಇದಕ್ಕೆ ಸ್ಪಂದಿಸಿದ ಪ್ರೊ.ಶಿವಲಿಂಗಪ್ಪ ಬಾವಿಕಟ್ಟಿಯವರು ಸಮ್ಮೇಳನಕ್ಕೆ ನಡೆದಿರುವ ಸಿದ್ಧತೆಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿ ಈ ಸಮ್ಮೇಳನವು ಚಾರಿತ್ರಿಕವಾಗಿ ಮೂಡಿ ಬಂದು ಪರಂಪರೆಯನ್ನು ರೂಪಿಸುವಲ್ಲಿ ತಮಗೆ ಯಾವ ಸಂದೇಹವೂ ಇಲ್ಲ ಎಂದು ಭರವಸೆಯನ್ನು ವ್ಯಕ್ತಪಡಿಸಿದರು. ಎಲ್ಲರನ್ನೂ ಒಳಗೊಳ್ಳುವಂತೆ ಸಮಗ್ರತೆಯ ನೆಲೆಯಲ್ಲಿ ಸಮ್ಮೇಳನದ ಕಾರ್ಯಕ್ರಮಗಳನ್ನು ರೂಪಿಸಿರುವುದಕ್ಕೆ ಅವರು ಸಂತೋಷವನ್ನು ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಪ್ರೊ.ಚಂದ್ರಶೇಖರ ಅಕ್ಕಿ, ಮಹಾಂತೇಶ ತಾಂವಶಿ,ಡಾ ಮಹಾನಂದಾ ಪಾಟೀಲ, ಸುರೇಶ ಮುದ್ದಾರ, ಈಶ್ವರಚಂದ್ರ ಬೆಟಗೇರಿ, ಜಯಾನಂದ ಮಾದರ, ಪುಷ್ಪಾ ಮುರಗೋಡ, ಪ್ರೊ .ವಸುಂದರ ಕಾಳೆ, ಕುಂದರನಾಡಿನ ರಾಯನಗೌಡ ಪಾಟೀಲ, ಎಂ ಎನ್ ಮಾವಿನಕಟ್ಟಿ, ಜಿ ಆರ್ ಸನದಿ, ಬಿ ಬಿ ನಿರ್ವಾಣಿ, ಬಿ ಸಿ ಅಲ್ಲನ್ನವರ, ಗುರುವಯ್ಯ ಹಿರೇಮಠ, ಆನಂದ ಬಿಳಿಕಿಚಡಿ, ಮಲ್ಲಿಕಾರ್ಜುನ ಹೊಳೆಯಾಚಿ, ಎನ್ ಕೆ ಹುಡೇದ, ಎಂ ಆರ್ ಬಾಗೇವಾಡಿ ಹಾಗೂ ಬಾವಿಕಟ್ಟಿ ಕುಟುಂಬಸ್ತರು ಹಾಗೂ ಅಭಿಮಾನಿ ಬಳಗ ಉಪಸ್ಥಿತರಿದ್ದರು.