RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲ ಗೋಳಿಸಿ : ಬಿಇಒ ಅಜೀತ ಮನ್ನಿಕೇರಿ

ಗೋಕಾಕ:ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲ ಗೋಳಿಸಿ : ಬಿಇಒ ಅಜೀತ ಮನ್ನಿಕೇರಿ 

ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲ ಗೋಳಿಸಿ : ಬಿಇಒ ಅಜೀತ ಮನ್ನಿಕೇರಿ
ಗೋಕಾಕ ಜು 20 : ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲ ಗೋಳಿಸುವಂತೆ ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.

ಶನಿವಾರದಂದು ನಗರದ ಲಕ್ಕಡಗಲ್ಲಿ ಶಾದಿ ಮಹಲನಲ್ಲಿ ಇಲ್ಲಿನ ಅಂಜುಮನ್ -ಎ – ಇಸ್ಲಾಂ ಕಮೀಟಿ ವತಿಯಿಂದ ಅಲ್ಪಸಂಖ್ಯಾತ ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಶಿಕ್ಷಣಕ್ಕೆ ಸೂಕ್ತವಾದ ವಾತಾವರಣವನ್ನು ಪಾಲಕರು ಮನೆಯಲ್ಲಿ ಕಲ್ಪಿಸಿ ಅವರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಬೇಕು. ಸಾಧನೆಗೆ ಬಡತನ ಅಡ್ಡಿಯಾಗುವದಿಲ್ಲ, ಸರಕಾರ, ಸಮಾಜ ಹಾಗೂ ಸಂಘ,ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುತ್ತಿವೆ. ವಿದ್ಯಾರ್ಥಿಗಳು ಅವಕಾಶಗಳ ಸದುಪಯೋಗದಿಂದ ಕಠಿಣ ಪರಿಶ್ರಮ ಹಾಗೂ ಪ್ರಯತ್ನ ಶೀಲರಾಗಿ ಪ್ರತಿಭಾವಂತರಾಗಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೋಕಾಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮಾತನಾಡಿ ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಬಹು ಮಹತ್ವದಾಗಿದೆ. ಸಮಾಜ ಸದೃಢವಾದರೆ, ದೇಶ ಸದೃಢವಾಗುತ್ತದೆ. ಸಾಧಕರ ಸಂಖ್ಯೆ ಹೆಚ್ಚಾಗಬೇಕು. ವಿದ್ಯಾರ್ಥಿಗಳು ಸಾಧಕರ ಸಾಧನೆಯಿಂದ ಪ್ರೇರಿತರಾಗಿ ನೀವು ಸಾಧಕರಾಗಿರಿ ಶಿಕ್ಷಣ ಇಂದು ಬಹುದೊಡ್ಡ ಪಾತ್ರ ವಹಿಸುತ್ತದೆ.ಪಾಲಕರು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸದೆ ಅವರಿಗೆ ಶಿಕ್ಷಣ ನೀಡಿ ಒಳ್ಳೆಯ ನಾಗರಿಕರನ್ನಾಗಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಿ, ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಅಂಜುಮನ್ -ಎ – ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ ಗೋಕಾಕ ವಹಿಸಿದ್ದರು.

ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಸದಸ್ಯರುಗಳಾದ ಅಬ್ದುಲ್ ರಹೆಮಾನ ದೇಸಾಯಿ, ಕುತಬುದ್ದೀನ ಗೋಕಾಕ, ಯೂಸುಫ್ ಅಂಕಲಗಿ, ಉಪಾಧ್ಯಕ್ಷ ಇಲಾಹಿ ಖೈರದಿ, ಕಾರ್ಯದರ್ಶಿ ಜುಬೇರ ತ್ರಾಸಗಾರ, ಹಾಜೀ ಗಫಾರ ಕಾಗಜಿ, ರಪೀಕ ಗುಡವಾಲೆ, ಸಾದಿಕ ಹಲ್ಯಾಳ, ಜಾಕೀರ ಕುಡಚಿಕರ, ಇಸ್ಮಾಯಿಲ್ ಗೋಕಾಕ ಉಪಸ್ಥಿತರಿದ್ದರು.

Related posts: