RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಗುರುಕೃಪೆಗೆ ಪಾತ್ರವಾದರವರಿಗೆ ಜಗತ್ತಿನ ಯಾವ ಕೃಪೆಯ ಸಮಾನವಲ್ಲ : ಶ್ರೀ ಬಾಬುರಾವ್ ಮಹಾರಾಜ್

ಗೋಕಾಕ:ಗುರುಕೃಪೆಗೆ ಪಾತ್ರವಾದರವರಿಗೆ ಜಗತ್ತಿನ ಯಾವ ಕೃಪೆಯ ಸಮಾನವಲ್ಲ : ಶ್ರೀ ಬಾಬುರಾವ್ ಮಹಾರಾಜ್ 

ಗುರುಕೃಪೆಗೆ ಪಾತ್ರವಾದರವರಿಗೆ ಜಗತ್ತಿನ ಯಾವ ಕೃಪೆಯ ಸಮಾನವಲ್ಲ : ಶ್ರೀ ಬಾಬುರಾವ್ ಮಹಾರಾಜ್

ಗೋಕಾಕ ಜು 22 : ಗುರುಕೃಪೆಗೆ ಪಾತ್ರವಾದರವರಿಗೆ ಜಗತ್ತಿನ ಯಾವ ಕೃಪೆಯ ಸಮಾನವಲ್ಲ,ಜಗತ್ತಿನಲ್ಲಿ ಯಾವುದೇ ವಿಷಯವನ್ನು ಕಲಿಯಬೇಕಾದರೆ ಗುರುವಿನ ಸಾನ್ನಿಧ್ಯ ಬೇಕು ಎಂದು ವಿಜಯಪುರದ ಖ್ಯಾತ ಪ್ರವಚನಕಾರ ಶ್ರೀ ಬಾಬುರಾವ್ ಮಹಾರಾಜ್ ಹೇಳಿದರು.
ರವಿವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಇಲ್ಲಿನ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ,ಮಂಥನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 178ನೇ ಶಿವಾನುಭವಗೋಷ್ಠಿ ಹಾಗೂ ಗುರುಪೂರ್ಣಿಮೆಯ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತೀಯ ಪರಂಪರೆಯಲ್ಲಿ ಶಿಷ್ಯ ಮತ್ತು ಗುರುವಿಗೆ ಮಹತ್ತರ ಸಂಬಂಧವಿದೆ. ವ್ಯಕ್ತಿಯು ಭಗವಂತನ ಕಡೆಗೆ ಹೋಗಲು ಆಧ್ಯಾತ್ಮಿಕ ಶಕ್ತಿ, ಧ್ಯಾನ, ದೀಕ್ಷೆ, ಅಗತ್ಯ ಮಂತ್ರವನ್ನು ಹೇಳಿಕೊಟ್ಟು ಮಾರ್ಗದರ್ಶನ ಮಾಡುವುದು ಗುರುವಿನ ಕೆಲಸ ಎಂದು ಹೇಳಲಾಗಿದೆ. ಅಲ್ಲದೆ ಹಿಂದಿನಿಂದಲೂ ಗುರುವಿಗೆ ಅತ್ಯುನ್ನತ ಸ್ಥಾನ ನೀಡಲಾಗಿದ್ದು,ಕಲಿಯುವವನಿಗೆ ಸತ್ಯ ದರ್ಶನ ಮಾಡಿಸುವ, ಸನ್ಮಾರ್ಗವನ್ನು ತೋರಿಸುವ ಪೂಜ್ಯ ಸ್ಥಾನದಲ್ಲಿರುವ ವ್ಯಕ್ತಿಯೇ ಗುರು ಅವರ ಮಾರ್ಗದರ್ಶನದಲ್ಲಿ ನಡೆದು ನಮ್ಮ ಬಾಳನ್ನು ಹಸನ ಮಾಡಿಕೊಳ್ಳಬೇಕು ಎಂದು ಹೇಳಿದರು
ಕಾರ್ಯ ಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಶೈಲಾ ಬಿದರಿ, ಡಾ.ಸಿ.ಕೆ.ನಾವಲಗಿ, ಮಲ್ಲಿಕಾರ್ಜುನ ರೊಟ್ಟಿ, ಶಕುಂತಲಾ ಕಾಪಸಿ, ಎಸ್.ಎಸ್. ಮರೆನ್ನವರ, ನಾಗಪ್ಪ ಕಾಪಸಿ, ಮಹಾದೇವಿ ಹಿರೇಮಠ, ದೇವಾಂಶ ಸಂಬಯ್ಯನಮಠ ಉಪಸ್ಥಿತರಿದ್ದರು

Related posts: