RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಪೋಡಿ ಉತಾರ ನೀಡುವಂತೆ ಆಗ್ರಹಿಸಿ ನಗರದ ಸಿಟಿ ಸರ್ವೇ ಕಚೇರಿಯಲ್ಲಿ ಏಕಾಂಗಿಯಾಗಿ ಪ್ರತಿಭಟಿಸಿದ ಕಿರಣ ಭೀ ಮಿರಜಕರ

ಗೋಕಾಕ:ಪೋಡಿ ಉತಾರ ನೀಡುವಂತೆ ಆಗ್ರಹಿಸಿ ನಗರದ ಸಿಟಿ ಸರ್ವೇ ಕಚೇರಿಯಲ್ಲಿ ಏಕಾಂಗಿಯಾಗಿ ಪ್ರತಿಭಟಿಸಿದ ಕಿರಣ ಭೀ ಮಿರಜಕರ 

ಪೋಡಿ ಉತಾರ ನೀಡುವಂತೆ ಆಗ್ರಹಿಸಿ ನಗರದ ಸಿಟಿ ಸರ್ವೇ ಕಚೇರಿಯಲ್ಲಿ ಏಕಾಂಗಿಯಾಗಿ ಪ್ರತಿಭಟಿಸಿದ ಕಿರಣ ಭೀ ಮಿರಜಕರ

 

 

ಗೋಕಾಕ ಜು 23 : ಪೋಡಿ ಉತಾರ ನೀಡುವಂತೆ ಆಗ್ರಹಿಸಿ ಇಲ್ಲಿನ ಸಿಟಿ ಸರ್ವೇ ಕಛೇರಿಯಲ್ಲಿ ಏಕಾಂಗಿಯಾಗಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಇತ್ತೀಚೆಗೆ ನಡೆದಿದೆ.

ನಗರದ ವ್ಯಾಪಾರಿ ಕಿರಣ ಭೀಮಸಾ ಮಿರಜಕರ ಎಂಬ ಯುವಕ ಸಿಟಿ ಸರ್ವೇ ಕಛೇರಿಯಲ್ಲಿ ಚಾಪೆ ಹಾಸಿ ಏಕಾಂಗಿಯಾಗಿ ಧರಣಿ ಕುಳಿತು ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪವನ್ನು ಧಿಕ್ಕರಿಸಿ ಪ್ರತಿಭಟನೆ ನಡೆಸಿದ್ದಾನೆ.

ಕಳೆದ 4 ವರ್ಷಗಳ ಹಿಂದೆ ಅಂದರೆ 6/10/2020 ರಂದು ದಿವಂಗತ ಭೀಮಸಾ ಮಿರಜಕರ ಎಂಬುವವರು ಪೋಡಿ ಮಾಡಿ ಉತಾರ ನೀಡಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಿಟಿ ಸರ್ವೇ ಅಧಿಕಾರಿ ಬಡಿಗೇರ ಮತ್ತು ಇತರ ಅಧಿಕಾರಿಗಳು ಪೋಡಿ ಮಾಡಿ ಉತಾರ ನೀಡಲು ಭೀಮಸಾ ಅವರಿಗೆ ಸತಾಯಿಸಿದ್ದಾರೆ. ಇದರ ಮಧ್ಯೆ ದುರಾದೃಷ್ಟವಶಾತ ಭೀಮಸಾ ಅವರ ಅಕಾಲಿಕ ನಿಧನ ಹೊಂದಿದ್ದಾರೆ. ಅವರು ನಿಧನ ಹೊಂದಿದ್ದ ಪರಿಣಾಮ ಅವರ ಮಗ ಕಿರಣ ಭೀಮಸಾ ಮಿರಜಕರ ಪೋಡಿ ಮಾಡಿ ಉತಾರ ನೀಡಲು ಅಧಿಕಾರಿಗಳಿಗೆ ಮತ್ತೊಂದು ಅರ್ಜಿ ನೀಡಿದ್ದಾರೆ. ಆಗಲೂ ಸಹ ಸಿಟಿ ಸರ್ವೇ ಅಧಿಕಾರಿ ಬಡಿಗೇರ ಅವರು 10 ಸಾವಿರ ರೂಪಾಯಿ ಹಣ ನೀಡುವಂತೆ ಸತಾಯಿಸಿದ್ದಾರೆ. ಕಛೇರಿಗೆ ಬಂದಾಗೋಮ್ಮೆ ಇಂದು ಬಾ, ನಾಳೆ ಬಾ ಎಂದು ಸತಾಯಿಸಿದ್ದಾರೆ. ಶಾಸಕರ ಕಛೇರಿಯಿಂದಲೂ ಪೋನ ಮಾಡಿಸಿದ್ದಾರೆ ಆದರೂ ಕೆಲಸವಾಗಿಲ್ಲ ಇದರಿಂದ ಬೇಸರಗೊಂಡ ಕಿರಣ ಭೀಮಸಾ ಮಿರಜಕರ ಶುಕ್ರವಾರ ದಿನಾಂಕ 19 ರಂದು ಚಾಪೆ ತಗೆದುಕೊಂಡು ಸಿಟಿ ಸರ್ವೇ ಕಛೇರಿಗೆ ತೆರಳಿ ಉತಾರ ನೀಡುವಂತೆ ಏಕಾಂಗಿಯಾಗಿ ಧರಣಿ ನಡೆಸಿದ್ದಾನೆ. ಇದರಿಂದ ಎಚ್ಚೆತ್ತ ಸಿಟಿ ಸರ್ವೇ ಕಛೇರಿಯ ಭ್ರಷ್ಟ ಅಧಿಕಾರಿಗಳು ತಕ್ಷಣ ಕಛೇರಿಗೆ ಬಂದು ಕಳೆದ ನಾಲ್ಕು ವರ್ಷಗಳಿಂದ ಹಣ ಗೋಸ್ಕರ ವಿಲೇವಾರಿ ಆಗದ ಅರ್ಜಿಯನ್ನು ಪರಿಶೀಲಿಸಿ ಪೋಡಿ ಮಾಡಿ ತಕ್ಷಣ ಉತಾರ ನೀಡಿದ ಘಟನೆ ನಗರದಲ್ಲಿ ಸದ್ದಿಲ್ಲದೆ ನಡೆದಿದೆ.
ಕಳೆದ ವಾರವಷ್ಟೇ ಶಾಸಕ ರಮೇಶ ಜಾರಕಿಹೊಳಿ ಅವರು ಆರೋಗ್ಯ ಅಧಿಕಾರಿಗಳ ಸಭೆ ನಡೆಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ನಡೆಸಬಾರದು ಭ್ರಷ್ಟಾಚಾರ ನಡೆದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದರ ಬೆನ್ನಲ್ಲೇ ಸಿಟಿ ಸರ್ವೇ ಅಧಿಕಾರಿ ಬಡಿಗೇರ ಅವರು ಇದು ನಮಗೆ ಸಂಬಂಧವಿಲ್ಲ ಎಂದು ತಮ್ಮ ಕಛೇರಿಯಲ್ಲಿ ಬಿಂದಾಸ್ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇವರ ಮೇಲೆ ಉನ್ನತಾಧಿಕಾರಿಗಳು ಗಮನ ಹರಿಸಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related posts: