RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಮುಂದಿನ ಗೋಕಾಕ ವಿಧಾನಸಬಾ ಚುನಾವಣೆಯಲ್ಲಿ ನಾನು ಸ್ವರ್ಧೆ ಮಾಡೋದಿಲ್ಲ : ಅಶೋಕ ಪೂಜಾರಿ ಬೇಸರ

ಗೋಕಾಕ:ಮುಂದಿನ ಗೋಕಾಕ ವಿಧಾನಸಬಾ ಚುನಾವಣೆಯಲ್ಲಿ ನಾನು ಸ್ವರ್ಧೆ ಮಾಡೋದಿಲ್ಲ : ಅಶೋಕ ಪೂಜಾರಿ ಬೇಸರ 

ಮುಂದಿನ ಗೋಕಾಕ ವಿಧಾನಸಬಾ ಚುನಾವಣೆಯಲ್ಲಿ ನಾನು ಸ್ವರ್ಧೆ ಮಾಡೋದಿಲ್ಲ : ಅಶೋಕ ಪೂಜಾರಿ ಬೇಸರ

ಗೋಕಾಕ ಜು 24: ಪ್ರಸ್ತುತ ರಾಜಕೀಯ ಪರಿಸ್ಥಿತಿಯಿಂದ ಬೆಸತ್ತಿದ್ದು,
ಮುಂದಿನ ಗೋಕಾಕ ವಿಧಾನಸಬಾ ಚುನಾವಣೆಯಲ್ಲಿ ನಾನು ಸ್ವರ್ಧೆ ಮಾಡೋದಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರದಂದು ನಗರದ ತಮ್ಮ ಗೃಹ ಕಛೇರಿಯಲ್ಲಿ ಕರೆದ ಪತ್ರಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಮಾಜಿಕ ಹೋರಾಟವನ್ನು ಮುಂದೆವರೆಸುತ್ತೇನೆ. ರಾಜಕೀಯ ಸಂಘಟನೆ ಮುಂದುವರೆಸುತ್ತೇನೆ. ಜಿಲ್ಲಾ ರಚನೆ ಕುರಿತು ಪೂರಕ ಪ್ರಕ್ರಿಯೆ ನಡೆದಿವೆ. ಆದರೆ ಯಾರೂ ಅಚಲ ನಿರ್ಧಾರ ಕೈಗೊಳ್ಳುತ್ತಿಲ್ಲ . ನಮ್ಮ ಹೋರಾಟಗಳು ಸರಕಾರದ ಗಮನ ಸೆಳೆಯುವ ದಿಸೆಯಲ್ಲಿ ಇರಬೇಕು. ನಮ್ಮವರೇವಾದ ಸತೀಶ ಜಾರಕಿಹೊಳಿ ಅವರು ಪ್ರಸ್ತುತ ಸರಕಾರದಲ್ಲಿ ಸಚಿವರಾಗಿದ್ದಾರೆ ಅವರು ಮುತುವರ್ಜಿ ವಹಿಸಿ ಗೋಕಾಕ ಜಿಲ್ಲಾ ರಚನೆ ಮಾಡಲು ಮುಂದಾಗಬೇಕು. 50 ವರ್ಷಗಳಿಂದ ಈ ಹೋರಾಟ ನಡೆದಿದೆ. ಎಲ್ಲರೂ ಕೂಡಿ ಗೋಕಾಕ ಜಿಲ್ಲಾ ಹೋರಾಟವನ್ನು ಬಲಿಷ್ಠ ಗೋಳಿಸಬೇಕು ಎಂದ ಅವರು ಅದಕ್ಕೆ ಕೂಡಲೇ ಚಾಲನೆ ಕೊಡಬೇಕು. ಆಡಳಿತಾತ್ಮಕವಾಗಿ ಎಷ್ಟು ಜಿಲ್ಲೆ ಮಾಡುಬೇಕು ಎಂಬುದನ್ನು ಸರಕಾರ ಪರಿಶೀಲಿಸಿ ಅಷ್ಟನ್ನು ಹೊಸ ಜಿಲ್ಲೆ ಎಂದು ಘೋಷಿಸಬೇಕು . ಗೋಕಾಕ ‌ಹೊಸ ಜಿಲ್ಲೆಯನ್ನಾಗಿಸಲು ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ಮುಂಚೂಣಿಯಲ್ಲಿ ನಿಂತುಕೊಂಡು ಹೋರಾಟ ಸಂಘಟಿಸಬೇಕು. ಸಮಿತಿಯ ಹೋರಾಟ ಸರಕಾರದ ಮೇಲೆ ಮೇಲಿಂದ ಮೇಲೆ ಒತ್ತಡ ತರವು ಹಾಗೆ ಇರಬೇಕು ಎಂದು ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಸ್ತಗಿರಿ ಪೈಲವಾನ, ಸಂಜು ಪೂಜಾರಿ, ಇಲಾಕತ್ ಕೋತವಾಲ, ನಿಂಗಪ್ಪ ಆಮ್ಮಿನಭಾವಿ, ಪ್ರವೀಣ ನಾಯಿಕ ಉಪಸ್ಥಿತರಿದ್ದರು.

Related posts: