RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ರಾಷ್ಟ್ರ ರಕ್ಷಣೆ ,ಪ್ರಜೆಗಳ ಸುಖಶಾಂತಿಯೇ ಸೈನಿಕರ ಮುಖ್ಯಧ್ಯೇಯ: ಫಕೀರಪ್ಪ ಗೌಡರ

ಗೋಕಾಕ:ರಾಷ್ಟ್ರ ರಕ್ಷಣೆ ,ಪ್ರಜೆಗಳ ಸುಖಶಾಂತಿಯೇ ಸೈನಿಕರ ಮುಖ್ಯಧ್ಯೇಯ: ಫಕೀರಪ್ಪ ಗೌಡರ 

ರಾಷ್ಟ್ರ ರಕ್ಷಣೆ ,ಪ್ರಜೆಗಳ ಸುಖಶಾಂತಿಯೇ ಸೈನಿಕರ ಮುಖ್ಯಧ್ಯೇಯ: ಫಕೀರಪ್ಪ ಗೌಡರ
ಗೋಕಾಕ ಜು 25 : ರಾಷ್ಟ್ರ ರಕ್ಷಣೆ ,ಪ್ರಜೆಗಳ ಸುಖಶಾಂತಿಯೇ ಸೈನಿಕರ ಮುಖ್ಯಧ್ಯೇಯವಾಗಿದೆ ಎಂದು ಮಾಜಿ ಸೈನಿಕರ ವಿವಿಧ ಉದ್ದೇಶಗಳ ನಿಯಮಿತದ ಅಧ್ಯಕ್ಷ ಫಕೀರಪ್ಪ ಗೌಡರ ಹೇಳಿದರು.

ಶುಕ್ರವಾರದಂದು ನಗರದ ಸಮುದಾಯ ಭವನದಲ್ಲಿ ಇಲ್ಲಿನ ಮಾಜಿ ಸೈನಿಕರ ಸೌಹಾರ್ದ ಸಹಕಾರಿ ನಿಯಮಿತ ಹಾಗೂ ಮಾಜಿ ಸೈನಿಕರ ಗ್ರಾಮೀಣಾಭಿವೃದ್ಧಿ ಸೈನಿಕರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 25 ನೇ ಕಾರ್ಗಿಲ್ ವಿಜಯೋತ್ಸವದ ಬೆಳ್ಳಿ ಹಬ್ಬದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೇಶದ ರಕ್ಷಣೆಗಾಗಿ ಸೈನಿಕರು ಜೀವದ ಹಂಗು ತೊರೆದು ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಹುತ್ತಾಮ್ಮರಾದವರಲ್ಲಿ ಏಳು ಜನ ಕರ್ನಾಟಕದವರಾಗಿದ್ದು, ಅದರಲ್ಲಿ ನಾಲ್ಕು ಜನ ಯೋಧರು ಬೆಳಗಾವಿ ಜಿಲ್ಲೆಯವರಾಗಿದ್ದಾರೆ.ದೇಶಕ್ಕಾಗಿ ಹುತಾತ್ಮರಾದವರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಯುದ್ದಗಳಲ್ಲಿ ಪಾಲ್ಗೊಂಡು ಮಾಜಿ ಸೈನಿಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ, ಗೌರವಿಸಲಾಯಿತು.ಕಾರ್ಯಕ್ರಮಕ್ಕಿಂತ ಪೂರ್ವದಲ್ಲಿ ನಗರದ ಸಂಗೋಳ್ಳಿರಾಯಣ್ಣ ವೃತದಿಂದ ಬಸವೇಶ್ವರ ವೃತ್ತ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಭಾರತಾಂಬೆಯ ಮೆರವಣಿಗೆ ನಡೆಯಿಸಲಾಯಿತು.
ವೇದಿಕೆಯಲ್ಲಿ ಕರವೇ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ, ವೀರಭದ್ರ ಬೆನಕನ್ನವರ, ಸುರೇಶ್ ಗುರುವಣ್ಣವರ, ಯಲ್ಲಪ್ಪ ಬೀರನಗಡ್ಡಿ, ಶಿವಪ್ಪ ಮಾಗಿ, ಸಂಗೀತ ಕಡ್ಲಿಗುಡ್ಡಿ, ಮಹಾದೇವಿ ಸಣ್ಣಪ್ಪನವರ, ಕೆಂಪಣ್ಣ ಮಾಡಂಗೇರೆ, ಅಶೋಕ್ ಬಂಡಿ, ಶಿವಾಜಿ ಮಾನೋಜಿ, ವಜಿರಪ್ಪ ಭಂಬರಗಿ, ರಾಜು ಶೆಟ್ಟರ್ ಇದ್ದರು.

Related posts: